More

    ಬೈಕ್‌ಗಳ ನಡುವೆ ಡಿಕ್ಕಿ, ಓರ್ವ ಸಾವು

    ಜಮಖಂಡಿ: ಆರು ಜನರು ಪ್ರಯಾಣಿಸುತಿದ್ದ ಎರಡು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

    ನಗರದ ಹೊರವಲಯದ ಜಮಖಂಡಿ ಜಂಬಗಿ ರಸ್ತೆಯ ಮಿನಾಳ್ಳದ ಹತ್ತಿರ ಬೈಕ್‌ಗಳ ಅಪಘಾತದಲ್ಲಿ ಕಡಪಟ್ಟಿ ಗ್ರಾಮದ ಅಣ್ಣಪ್ಪ ರಾಮನಗೌಡ ಪಾಟೀಲ (36) ಸ್ಥಳದಲ್ಲೇ ಸಾವನಪ್ಪಿದ್ದಾರೆ.

    ಪರಮಂಡಿ ಗ್ರಾಮದ ಗೋಪಾಲ ರೇಣಪ್ಪ ಹುಡೇದ ಎಂಬುವವರ ನಿರ್ಲಕ್ಷತನದಿಂದ ಜಮಖಂಡಿಯಿಂದ ಜಂಬಗಿ ಕಡೆಗೆ ಬೈಕ್ ಚಾಲನೆ ಮಾಡಿ, ಜಂಬಗಿಯಿಂದ ಜಮಖಂಡಿ ಕಡೆಗೆ ಎದುರಿಗೆ ಬರುತಿದ್ದ ಅಣ್ಣಪ್ಪ ರಾಮನಗೌಡ ಪಾಟೀಲ ಎಂಬುವವರ ಬೈಕ್‌ಗೆ ಡಿಕ್ಕಿ ಹೊಡಿಸಿದ್ದರಿಂದ ಸ್ಥಳದಲ್ಲೇ ಅಣ್ಣಪ್ಪ ಪಾಟೀಲ ಮೃತಪಟ್ಟಿದ್ದಾರೆ.

    ಕಡಪಟ್ಟಿ ಗ್ರಾಮದ ರಾಮನಗೌಡ ಹಣಮಂತಗೌಡ ಪಾಟೀಲ(70), ತನುಶ್ರೀ ಅಣ್ಣಪ್ಪ ಪಾಟೀಲ (5)ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
    ಪರಮಂಡಿ ಗ್ರಾಮದ ಹಣಮಂತ ಮಹಾದೇವ ನಾಯಕರ (20), ಹಣಮಂತ ಭೀಮಪ್ಪ ಸತ್ತಿಗೇರಿ (20) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಜಮಖಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಐ.ಎಂ.ಮಠಪತಿ, ಗ್ರಾಮೀಣ ಠಾಣಾಧಿಕಾರಿ ಬಸವರಾಜ ಅವಟಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts