More

    ಹಾನಲ್ಲ ತಾಲೂಕಿನ 95 ಗ್ರಾಮಗಳಲ್ಲಿ ‘ಜಲಜೀವನ’

    ಹಾನಗಲ್ಲ: ಕೇಂದ್ರ ಸರ್ಕಾರದ ಜಲಜೀವನ ಯೋಜನೆಯಡಿ ತಾಲೂಕಿನ 42 ಗ್ರಾಮ ಪಂಚಾಯಿತಿಯ 167 ಗ್ರಾಮಗಳಲ್ಲಿ ಮೊದಲ ಹಂತದ 95 ಗ್ರಾಮಗಳಲ್ಲಿ ವಾಸಿಸುವ 33,636 ಕುಟುಂಬಗಳ ಮನೆ-ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಯ ಸರ್ವೆ ಕಾರ್ಯ ಭಾಗಶಃ ಪೂರ್ಣಗೊಂಡಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, 28 ಓವರ್​ಹೆಡ್ ಟ್ಯಾಂಕ್​ನಿಂದ ನಲ್ಲಿಗಳ ಮೂಲಕ ಮೀಟರ್ ಅಳವಡಿಸಿ ಪ್ರತಿಯೊಬ್ಬರಿಗೂ 55 ಲೀ. ಲಭ್ಯವಾಗುವಂತೆ ಕುಡಿಯುವ ನೀರು ಪ್ರತಿ ಕುಟುಂಬಕ್ಕೂ ಶಾಶ್ವತವಾಗಿ ಪೂರೈಕೆ ಮಾಡಲಾಗುವುದು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಮೊದಲ ಹಂತದ ಈ ಯೋಜನೆಗೆ 50 ಕೋಟಿ ರೂ. ಅಂದಾಜು ಮಾಡಿದ್ದಾರೆ. ಗ್ರಾಮ ಪಂಚಾಯಿತಿ ವಂತಿಗೆ ಶೇ. 10ರಷ್ಟು, 15ನೇ ಹಣಕಾಸಿನ ಶೇ. 15ರಷ್ಟು ಅನುದಾನ ಬಳಕೆ ಮಾಡಿಕೊಳ್ಳುವುದು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.ಈಗಾಗಲೇ ತಾಲೂಕಿನ 53 ಗ್ರಾಮಗಳ 15,160 ಕುಟುಂಬಗಳಿಗೆ ಮನೆ-ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಕಾಮಗಾರಿಗೆ 25.57 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲಾಖೆಯಿಂದ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದ್ದು, ಫೆ. 2ರಂದು ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಈ ಯೋಜನೆಗೆ ಮೊದಲು ನದಿ, ಕೊಳಗಳು, ತೊರೆಗಳು ಸೇರಿ ನೀರಿನ ಮೂಲವನ್ನು ಹೊಂದಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. 4 ಲಕ್ಷ ಲೀ. ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ, ಭೂಮಿಯ ತಳಮಟ್ಟದಲ್ಲಿ ಇನ್ನೊಂದು ಸಂಪ್ ನಿರ್ವಿುಸಿ ಹೆಚ್ಚು ನೀರು ಸಂಗ್ರಹಿಸಲಾಗುವುದು. ನೀರಿನ ಕೊರತೆಯಾಗದಂತೆ ನೀರಿನ ಮಿತಬಳಕೆಯ ಮಹತ್ವ, ಜಾಗೃತಿ ಪ್ರತಿಯೊಬ್ಬರಲ್ಲೂ ಬರಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಶಾಸಕ ಉದಾಸಿ ತಿಳಿಸಿದ್ದಾರೆ.

    ಮೊದಲ ಹಂತದ 95 ಗ್ರಾಮಗಳು: ಕುಂಟನಹೊಸಳ್ಳಿ, ಹಂದಿಹಾಳ, ಶಿರಮಾಪುರ, ಶೃಂಗೇರಿ, ಸೋಮಾಪುರ, ಯಲಿವಾಳ, ಗೊಟಗೋಡಿ, ಬಿಂಗಾಪುರ, ತಾವರೆಗೊಪ್ಪ, ತುಮರಿಕೊಪ್ಪ, ನೆಲ್ಲಿಕೊಪ್ಪ, ಗಿರಿಶಿನಕೊಪ್ಪ, ಹೊಸಳ್ಳಿ, ಹುಲ್ಲತ್ತಿ, ಚಂದ್ರಗಿರಿ, ಚನ್ನಾಪುರ, ಹಿರೇಕಣಗಿ, ಕಲಗುಡ್ಡಿ, ಕಿರವಾಡಿ, ಮಹರಾಜಪೇಟೆ, ನಿಟಗಿನಕೊಪ್ಪ, ಸಾಗರವಳ್ಳಿ, ಅಲ್ಲಾಪುರ, ಹಾವಣಗಿ, ಅಕ್ಕಿವಳ್ಳಿ, ಕರಗುದರಿ, ಮಂತಗಿ, ಆಲದಕಟ್ಟಿ, ಬಾಳೂರ, ಹಸನಾಬಾದಿ, ಕರೆಕ್ಯಾತನಹಳ್ಳಿ, ಚಿಕ್ಕೇರಿ, ಗೆಜ್ಜಿಹಳ್ಳಿ, ಗುಡಗುಡಿ, ಗುರುರಾಯಪಟ್ಟಣ, ಹರನಗಿರಿ, ಹಿರೇಹುಲ್ಲಾಳ, ಬಾಳಿಹಳ್ಳಿ, ಕಲಕೇರಿ, ಹೊಂಬಳಿ, ಇನಾಂಲಕಮಾಪುರ, ಕಾಲ್ವೆಕಲ್ಲಾಪುರ, ಕಾಲ್ವೆಯಲ್ಲಾಪುರ, ಹರವಿ, ಕಲ್ಲಾಪುರ, ಬಸಾಪುರ ಮ. ಆಡೂರ, ಅರಳೇಶ್ವರ, ಬೊಮ್ಮನಹಳ್ಳಿ, ಬಾಳಂಬೀಡ, ಮಲಗುಂದ, ಹೇರೂರ, ಮಾರನಬೀಡ, ದ್ಯಾಮನಕೊಪ್ಪ, ಆರೇಲಕಮಾಪುರ, ಕರೆಕ್ಯಾತನಹಳ್ಳಿ ತಾಂಡಾ, ಬ್ಯಾತನಾಳ, ಕೆಲವರಕೊಪ್ಪ, ಕೂಸನೂರ, ತಿಳವಳ್ಳಿ, ಹಳ್ಳಿಬೈಲ್, ಹಿರೇಕಾಂಶಿ, ಹೊಂಕಣ, ಹೋತನಹಳ್ಳಿ, ಬೈಚವಳ್ಳಿ, ಚಿಕ್ಕಾಂಶಿಹೊಸೂರ, ಮತ್ತಿಹಳ್ಳಿ, ಡೊಳ್ಳೇಶ್ವರ, ಗೊಂದಿ, ಕಂಚಿನೆಗಳೂರ, ಕೂಡಲ, ಕಾಮನಹಳ್ಳಿ, ನೆಲ್ಲಿಬೀಡ, ನರೇಗಲ್, ವರ್ದಿ, ಹರಳಕೊಪ್ಪ, ಸಮ್ಮಸಗಿ, ಸಾವಿಕೇರಿ, ಕಾಶೆಟ್ಟಿಹಳ್ಳಿ, ಮಲ್ಲಿಗ್ಗಾರ, ಸಾಂವಸಗಿ, ಕೋಡಿಯಲ್ಲಾಪುರ, ಶಂಕ್ರಿಕೊಪ್ಪ, ಜಂಗಿನಕೊಪ್ಪ, ಮೂಊರ, ಅರಿಷಣಗುಪ್ಪಿ, ಕೊಂಡೋಜಿ, ಬ್ಯಾಗವಾದಿ, ಹಿರೇಬಾಸೂರ, ಸೋಮಸಾಗರ, ಸುರಳೇಶ್ವರ, ಗುಡ್ಡದಮುಳಥಳ್ಳಿ, ಮುಳಥಳ್ಳಿ, ಉಪ್ಪುಣಸಿ, ಬಸಾಪುರ ಎಂ.ನಿಡಸಂಗಿ, ದೇವರಹೊಸಪೇಟೆ ಗ್ರಾಮಗಳು ಜಲಜೀವನ್ ಯೋಜನೆಗೆ ಆಯ್ಕೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts