More

    ಶ್ರೀರಾಮನ ದೇವಸ್ಥಾನಕ್ಕೆ 24 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಗಳನ್ನು ಅರ್ಪಿಸಿದ ಜೈನರು…

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭೂಮಿ ಪೂಜೆಗೆ ಬರೀ ಹಿಂದುಗಳಷ್ಟೇ ಅಲ್ಲದೆ ಬೇರೆ ಕೆಲವು ಸಮುದಾಯದವರೂ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.

    ಇದೀಗ ಅಹಮಾದಾಬಾದ್​ನ ಜೈನ ಸಮುದಾಯ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ದೇವಾಲಯಕ್ಕೆ 24 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಗಳನ್ನು ಸಮರ್ಪಿಸಿದೆ.

    ಜೈನ ಸಾಧುಗಳು ಇಟ್ಟಿಗೆಗಳನ್ನು ಇಂದು ಅಹಮದಾಬಾದ್​ನಲ್ಲಿರುವ ಆರ್​ಎಸ್​ಎಸ್​ ಹಾಗೂ ವಿಶ್ವ ಹಿಂದು ಪರಿಷದ್​ನ ಪ್ರಮುಖರಿಗೆ ಒಪ್ಪಿಸಿದ್ದು, ಅವರು ಅಯೋಧ್ಯೆಗೆ ಅದನ್ನು ಹಸ್ತಾಂತರ ಮಾಡಲಿದ್ದಾರೆ. ಇದನ್ನೂ ಓದಿ: ‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’

    ಈ ಬಗ್ಗೆ ಜೈನ ಸಾಧು ಓರ್ವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆ ಶ್ರೀರಾಮಂದಿರ ನಿರ್ಮಾಣವಾಗುತ್ತಿರುವುದು ಇಡೀ ದೇಶದಲ್ಲಿರುವ ಜೈನರಿಗೆ ಸಂತೋಷ ತಂದಿದೆ. ನಾವೆಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದೇವೆ. ಆಗಸ್ಟ್​ 5 ರಂದು ನಾವೂ ಸಹ ಮಂತ್ರ ಪಠಣ ಮಾಡುತ್ತೇವೆ. ಆದಷ್ಟು ಬೇಗ ಸುಲಲಿತವಾಗಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ. ಹಾಗೇ, ನಾವೀಗ ಅರ್ಪಿಸುತ್ತಿರುವ 24 ಕೆಜಿ ಬೆಳ್ಳಿಯ ಇಟ್ಟಿಗೆ, ನಮ್ಮ ಸಮುದಾಯದ ಹಲವರ ಕೊಡುಗೆ ಎಂದೂ ಹೇಳಿದ್ದಾರೆ.(ಏಜೆನ್ಸೀಸ್​)

    ಭಾರತೀಯ ಸೇನೆಯ ಯೋಧನೋರ್ವ ನಿಗೂಢವಾಗಿ ನಾಪತ್ತೆ; ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts