ಜೈಲಿನಿಂದ ನಟ ವಿನಾಯಕನ್‌ ಜಾಮೀನಿನ ಮೇಲೆ ಬಿಡುಗಡೆ..!

vvvv
Published on

ಜೈಲರ್ ನಟ ವಿನಾಯಗನ್ ಬಂಧನ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಅಕ್ಟೋಬರ್ 24ರಂದು ಪೊಲೀಸರು ನಟನನ್ನು ಬಂಧಿಸಿದ್ದರು. ಅಪಾರ್ಟ್ಮೆಂಟ್ ನಿವಾಸಿಗಳಿಂದ ವಿನಾಯಗನ್ ವಿರುದ್ಧ ದೂರು ದಾಖಲಾಗಿತ್ತು.


ನಟ ವಿನಾಯಗನ್ ತನ್ನ ಅಪಾರ್ಟ್ಮೆಂಟ್ ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ದೂರಿನ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು, ನಟನನ್ನು ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಕರೆದಿದ್ದರು.


ಮದ್ಯ ಸೇವನೆ ಮಾಡಿ ಪೊಲೀಸ್‌ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಲಯಾಳಂ ಖ್ಯಾತ ನಟ ವಿನಾಯಗನ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಕುರಿತು ಮಾತನಾಡಿರುವ ನಟ, ತಮ್ಮನ್ನು ಏಕೆ ಪೊಲೀಸರು ಬಂಧಿಸಿದ್ದರು ಎನ್ನವ ವಿಚಾರ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.


ಮದ್ಯ ಸೇವಿಸಿ ತೊಂದರೆ ನೀಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಅದರಂತೆ ಠಾಣೆಗೆ ಕರೆಸಿಕೊಂಡಿದ್ದ ವಿನಾಯಕನ್ ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.


ಜೈಲರ್‌ ವಿಲನ್‌ ಸಧ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ವಿನಾಯಕನ್ ಪೊಲೀಸರು ತಮ್ಮನ್ನು ಏಕೆ ಬಂಧಿಸಿದ್ದರು ಎಂಬ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.


ಇನ್ನು ಜೈಲರ್​​ ಸಿನಿಮಾದಲ್ಲಿ ವಿನಾಯಗನ್​ ಅವರ ಮನಸಲಾಯೋ ಡೈಲಾಗ್​​ ಸಖತ್​​ ಫೇಮಸ್​​​ ಕೂಡಾ ಆಗಿದೆ.


ಜೈಲರ್‌ನಲ್ಲಿ ವಿನಾಯಕನ್ ವರ್ಮನ್ ಎಂಬ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ವಿನಾಯಗನ್​ ಆಕ್ಟಿಂಗ್​ಗೆ ಜನರ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net