ಪಟಿಯಾಲ: ರಸ್ತೆ ಗಲಾಟೆ ಪ್ರಕರಣದ್ಲಲಿ ಸದ್ಯ ಒಂದು ವರ್ಷದ ಜೈಲು ಶಿಕ್ಷೆಯಲ್ಲಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸದ್ಯ ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ ಭಾರೀ ಭದ್ರತೆಯಲ್ಲಿ ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನವಜೋತ್ ಸಿಂಗ್ ಸಿಧು ಕೆಲ ಕಾಯಿಲೆಗಳಿಂದ ಬಳಲುತ್ತಿದ್ದು ವಿಶೇಷ ಆಹಾರಕ್ರಮವನ್ನು ಬಯಸಿದ್ದಾರೆ ಎಂದು ವಕೀಲ ಎಚ್ಪಿಎಸ್ ವರ್ಮಾ ತಿಳಿಸಿದ್ದಾರೆ.ವೈದ್ಯರ ತಂಡ ಪರೀಕ್ಷಿಸಲಿದ್ದು, ಅವರಿಗೆ ಯಾವ ಆಹಾರದ ಅಗತ್ಯವಿದೆ ಎಂಬುದನ್ನು ಹೇಳಲಿದೆ. ಅಂತೆಯೇ ಸ್ಥಳೀಯ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಗೋಧಿ, ಸಕ್ಕರೆ, ಮೈದಾ ಮತ್ತು ಇತರ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ. ಅವರು ಹಣ್ಣುಗಳು, ಪ್ಪಪಾಯಿ ಪೇರಲ, ಹಾಲು ಹಾಗೂ ಫೈಬರ್ ಆಹಾರಗಳನ್ನು ಸೇವಿಸಬಹುದು ಎಂದು ಅವರ ಪರ ವಕೀಲ ತಿಳಿಸಿದ್ದಾರೆ.1988ರ ರೋಡ್ ರೇಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. (ಏಜೆನ್ಸೀಸ್)
ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!