More

    ಜಗ್ಗೇಶ್​ಗೆ ಪುಸ್ತಕ ಅರ್ಪಿಸಿದ ಅಭಿಮಾನಿ!

    ಇತ್ತೀಚೆಗಷ್ಟೇ ಹಿರಿಯ ನಟ ಜಗ್ಗೇಶ್​ ಸಖತ್​ ಬೇಜಾರಾಗಿದ್ದರು. ಅದಕ್ಕೆ ಕಾರಣ, ಡ್ರೋನ್​ ಪ್ರತಾಪ್​ ಕುರಿತಾಗಿ ಮಾಧ್ಯಮಗಳಲ್ಲಿ ಹಲವು ರೀತಿಯ ವಿಷಯಗಳು ಹೊರಬಂದಿದ್ದು. ಡ್ರೋಣ್​ ಪ್ರತಾಪ್​ ಅವರನ್ನು ಹಲವರಿಗೆ ಪರಿಚಯ ಮಾಡಿಕೊಡುವುದರ ಮೂಲಕ ಸಾಕಷ್ಟು ಸಹಾಯ ಮಾಡಿದ್ದ ಅವರು, ಪ್ರತಾಪ್​ ಕುರಿತಾದ ನೆಗೆಟಿವ್​ ವಿಚಾರಗಳನ್ನು ಕೇಳಿ ನೊಂದಿದ್ದರು.

    ಇದನ್ನೂ ಓದಿ: ವರ್ಮಾ ಸಹವಾಸಕ್ಕೆ ಹೋಗಬೇಡಿ … ಅಭಿಮಾನಿಗಳಿಗೆ ಪವನ್​ ಕಲ್ಯಾಣ್​ ತಾಕೀತು

    ಈಗ ಜಗ್ಗೇಶ್​ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, ಅವರ ಅಭಿಮಾನಿಯೊಬ್ಬರು, ‘ಮಹಾಭಾರತ’ ಕುರಿತಾದ ಒಂದು ವಿಮರ್ಶಾತ್ಮಕ ಗ್ರಂಥವನ್ನು ಬರೆದು ಅದನ್ನು ಜಗ್ಗೇಶ್​ ಅವರಿಗೆ ಅರ್ಪಿಸಿದ್ದಾರೆ. ಅಭಿಮಾನಿಯೊಬ್ಬ ತಮಗೆ ಮೌಲಿಕವಾದ ಉಡುಗೊರೆ ನೀಡಿದ್ದಿಕ್ಕೆ ಖುಷಿಯಾಗಿರುವ ಜಗ್ಗೇಶ್​, ಅದೇ ಖುಷಿಯಲ್ಲಿ ಟ್ವೀಟ್​ ಮಾಡಿದ್ದಾರೆ.

    ಜಿ. ನಾಗೇಂದ್ರನ್​ ಎಂಬ ಲೇಖಕರೊಬ್ಬರು, ‘ಕುರುಕ್ಷೇತ್ರ ಮಹಾಯುದ್ಧದಲ್ಲಿ ಭಗವದ್ಗೀತೆ ಏಕೆ ಸೇರ್ಪಡೆಯಾಯಿತು?’ ಎಂಬ ಸಂಶೋಧನಾ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥವನ್ನು ಅವರು ಜಗ್ಗೇಶ್​ ಅವರಿಗೆ ಅರ್ಪಿಸಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್​ ಅವರನ್ನು ದ್ರೋಣಾಚಾರ್ಯರಿಗೆ ಹೋಲಿಸಿರುವ ಅವರು, ‘ಕೌರವರ ಕಡೆಯಲ್ಲಿದ್ದೂ ಪಾಂಡವರಿಗೆ ಕೆಟ್ಟದ್ದನ್ನು ಬಯಸದ ಹಿರಿಯ ಆಚಾರ್ಯರಿಗೆ ಸಮಾನರಾದಂತಹ ತಮಗೆ ನನ್ನ ಆತ್ಮತೃಪ್ತಿಗಾಗಿ ಸಮರ್ಪಿಸುತ್ತಿದ್ದೇನೆ’ ಎಂದು ಪುಸ್ತಕದ ಆರಂಭದಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಹರಿಪ್ರಿಯಾಗೆ ಇಂದು ಏನು ಸಿಕ್ತು ಗೊತ್ತಾ?

    ಇದನ್ನು ನೋಡಿ ಖುಷಿಯಾಗಿ ಹೋಗಿರುವ ಜಗ್ಗೇಶ್​, ‘ನಾನು ಯಾರೋಸ್ವಾರ್ಥಿಗೆ ನನ್ನ ಶ್ರಮ ದೇಣಿಗೆನೀಡಿದೆ ಎಂದು ಕೊರಗಿದಾಗ ರಾಯರು ಇನ್ನೊಂದು ರೂಪದಲ್ಲಿ ನನಗೆ ಸಾಂತ್ವನ ಹೇಳಿದ ಬಗೆ. ಇಷ್ಟು ಅದ್ಭುತ ಭಗವದ್ಗೀತ ಸಂಶೋಧನೆ ನನಗೆ ಅರ್ಪಿಸಿದ ಅಭಿಮಾನಿಕಂಡು ಕೃತಾರ್ಥನಾದೆ. ಹೌದು ಜಗದಲ್ಲಿ ಎಲ್ಲಾಗುಣ ಇರುತ್ತದೆ ಅದ ಪರಮಾರ್ಷಿಸಿ ಒಪ್ಪುವ ಜ್ನಾನ ನಮಗಿರಬೇಕು!’ ಎಂದು ನಾಗೇಂದ್ರ ಅವರಿಗೆ ಧನ್ಯವಾದ ಹೇಳುತ್ತಾ ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

    ಮದುವೆಯಾಗುವುದಾಗಿ ವಂಚನೆ ಪ್ರಕರಣ: ಕೊನೆಗೂ ಮೌನ ಮುರಿದ ಜೋಶ್​ ಖ್ಯಾತಿಯ ಶಾಮ್ನಾ ಕಾಸಿಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts