ಡಂಗೂರ ಹೊಡೆದು ಕೆಲಸ ಮಾಡಲ್ಲ ... ಜಗ್ಗೇಶ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

Jaggesh 2
Published on

ಕರೊನಾ ವೈರಸ್‌ನಿಂದಾಗಿ ದೇಶ ಲಾಕೌಟ್ ಆಗಿದೆ. ಸಾಕಷ್ಟು ಬಡಜನರು ಊಟ ಇಲ್ಲದೆ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೇರೆ ಭಾಷೆಯ ಸ್ಟಾರ್‌ನಟರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಜತೆಗೆ, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಅವರಿಗೆ ಹೋಲಿಸಿದರೆ ಕನ್ನಡದ ಕಲಾವಿದರ ಸಂಖ್ಯೆ ಕಡಿಮೆಯೇ. ಕನ್ನಡದ ಕಲಾವಿದರು ಏನು ಮಾಡುತ್ತಿಲ್ಲ ಎಂಬ ಅಪವಾದಕ್ಕೆ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ತಾವು ಡಂಗೂರ ಹೊಡೆದು ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾವು ಡಂಗೂರ ಹೊಡೆದು, ಜನರಿಗೆ ಕಾಣುವಂತೆ ಕೆಲಸ ಮಾಡುವುದಿಲ್ಲ. ನಮ್ಮ ಒಳಗೆ ಒಬ್ಬನಿದ್ದಾನೆ, ಅವರ ಹೆಸರು ದೇವರು ಅಂತ. ಅವನ ಮೆಚ್ಚಿಸಲು ಕೆಲಸ ಮಾಡುತ್ತೇವೆ. ನಿಮಗೆ ವಾಕರಿಗೆ ಆಗದಿದ್ದರೆ ಹೇಳಿ ದಿನ ತಮಟೆ ಹೊಡೆದು ನಮ್ಮ ಕಾಯ ಅನುಮಾನ ಇದ್ದವರಿಗೆ ತೋರಿಸುತ್ತೇವೆ. ಸಾಧ್ಯವಾದರೆ ಸಹಾಯ ಮಾಡಿ, ಇಲ್ಲ ಸುಮ್ಮನಿರಿ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನು ಕನ್ನಡದ ಸ್ಟಾರ್ ನಟರು ಈ ಸಂದರ್ಭದಲ್ಲಿ ಸಹಾಯಕ್ಕೆ ಮುಂದೆ ಬರುತ್ತಿಲ್ಲ ಎಂಬ ಮಾತಿಗೆ ಉತ್ತರವಾಗಿ ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿಗಳ ಸಂಘದ ವತಿಯಿಂದ ಭಾನುವಾರ ಮಧ್ಯಾಹ್ನ ಭೋಜನ ವಿತರಿಸಲಾಗಿದೆ. ಇದಲ್ಲದೆ ಇನ್ನೂ ಹಲವು ಕಡೆಗಳಲ್ಲಿ ಜಗ್ಗೇಶ್ ಅವರ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದು, ಅವರ ಸಹಾಯಕ್ಕೆ ಜಗ್ಗೇಶ್ ಧನ್ಯವಾದ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net