More

    ಮೇ 10 ರಿಂದ ಸಿದ್ಧಾರೂಢ ಮಹಾತ್ಮೆ ಪ್ರವಚನ, ಸಾಯಿಬಾಬಾ ಭಾವಚಿತ್ರದ ಮೆರವಣಿಗೆ

    ಮುನವಳ್ಳಿ: ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಸಾಯಿ ಮಂದಿರ ಸೇವಾ ಸಮಿತಿ ವತಿಯಿಂದ ದೇವಸ್ಥಾನದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇ 10 ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.

    10ರಂದು ಬೆಳಗ್ಗೆ ಕಾಕಡಾರತಿ ರುದ್ರಾಭಿಷೇಕ, ಸಂಜೆ 5ಕ್ಕೆ ಸಾಯಿಬಾಬಾ ಭಾವಚಿತ್ರದ ಮೆರವಣಿಗೆ ಜರುಗುವುದು. ಆರತಿ, ಪೂರ್ಣಕುಂಭ ಹೊತ್ತ ಸುಮಂಗಲೆಯರು ಪಾಲ್ಗೊಳ್ಳುವರು.

    10ರಿಂದ 14ರ ವರೆಗೆ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು ಹಾಗೂ ಶಿಂದೋಗಿಯ ಮುಕ್ತಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿದಿನ ಸಂಜೆ 6.30ರಿಂದ 8.30ರ ವರೆಗೆ ಹಿಪ್ಪರಗಿ ಆರೂಢ ಬಸವಾಶ್ರಮದ ಸಿದ್ದರೂಢ ಶರಣರು ಸಿದ್ದಾರೂಢ ಮಹಾತ್ಮೆ ಆಧ್ಯಾತ್ಮಿಕ ಪ್ರವಚನ ನಡೆಸಿಕೊಡುವರು.

    ಪ್ರವಚನದ ನಂತರ ಮಹಾಪ್ರಸಾದ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts