More

    ಸಿದ್ಧಾರೂಢ ಮಠದಲ್ಲಿ ಭಜನಾ ಸ್ಪರ್ಧೆ

    ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ 188 ನೇ ಜಯಂತ್ಯೋತ್ಸವದ ನಿಮಿತ್ತ ಹಮ್ಮಿಕೊಂಡ 9ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

    ಭಜನಾ ಸ್ಪರ್ಧೆಯ ಅಧ್ಯಕ್ಷತೆ ವಹಿಸಿದ್ದ ಶಾಮಾನಂದ ಪೂಜೇರಿ ಮಾತನಾಡಿ, ಭಜನೆಯು ಬ್ರಹ್ಮಾನಂದವನ್ನು ತಂದು ಕೊಡುವ ಕಲಿಯುಗದ ಏಕೈಕ ಸಾಧನೆ ಅದಕ್ಕಾಗಿ ನಿಜಗುಣ ಶಿವಯೋಗಿಗಳು ‘ಕರುಣ ವಿದ್ಯೆಗಳುಳ್ಳ ಗುರು ಭಜನೆಯನು ಕರುಣಿಸು ಬೇಡುವೆನು ಅಭವ’ ಎಂದು ಹೇಳಿದ್ದಾರೆ ಎಂದರು.

    ಶ್ರೀ ಜಗದ್ಗುರು ಸಿದ್ಧಾರೂಢರ ಶ್ರೀ ಮಠವು ಭಜನೆ, ಶಾಸ್ತ್ರ, ಪುರಾಣ, ಕೀರ್ತನೆಗಳಿಗೆ ಮೀಸಲಾಗಿಟ್ಟ ಪವಿತ್ರವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಇಂತಹ ಭಜನಾ ಸ್ಪರ್ಧೆಯು ನಡೆಯಲೇಬೇಕು. ಭಜನ್ನೆ ಮಾಡುವದರಿಂದ ತನು, ಮನ ಪರಿಶುದ್ಧವಾಗುತ್ತದೆ ಎಂದು ಹೇಳಿದರು,

    ಅಣ್ಣಿಗೇರಿಯ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಆತ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠ ಟ್ರಸ್ಟ್​ನ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಚನ್ನವೀರ ಮುಂಗುರವಾಡಿ, ಬಾಳು ಮಗಜಿಕೊಂಡಿ, ರಮೇಶ ಬೆಳಗಾವಿ, ವಿನಾಯಕ ಘೊಡ್ಕೆ, ಗೀತಾ ಕಲಬುರ್ಗಿ, ಮತ್ತಿತರರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎಸ್.ಐ. ಕೋಳಕೂರ ನಿರೂಪಿಸಿದರು,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts