More

    ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ

    ಹುಬ್ಬಳ್ಳಿ : ಇಲ್ಲಿನ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢರ 188 ನೇ ಜಯಂತ್ಯುತ್ಸವ ಅಂಗವಾಗಿ ಏ. 10 ರಿಂದ 15 ರವರೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭ ಸೋಮವಾರ ನಡೆಯಿತು.

    ಪ್ರಥಮ ಬಹುಮಾನವನ್ನು ಬಾಗಲಕೋಟ ಜಿಲ್ಲೆಯ ಸನಾಳ ಗ್ರಾಮದ ಸರ್ಪಭೂಷಣ ಶಿವಯೋಗಿ ಭಜನಾ ಮಂಡಳಿ, ಬುದ್ನಿ ಪಿ.ಎಂ. ಗ್ರಾಮದ ಶ್ರೀ ದಿಗಂಬರೇಶ್ವರ ಭಜನಾ ಮಂಡಳಿ, ಬೆಳಗಾವಿ ಜಿಲ್ಲೆ ಕಲ್ಲೋಳಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಚಿಗಡೊಳ್ಳಿಯ ಶ್ರೀ ಜಡಿ ಸಿದ್ದೇಶ್ವರ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ಮರಿಚಿಕ್ಕಲಕಿಯ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಪಡೆದುಕೊಂಡವು.

    ದ್ವಿತೀಯ ಬಹುಮಾನವನ್ನು ಬೆಳಗಾವಿ ಜಿಲ್ಲೆ ಚಿಕ್ಕನಂದಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರದ ಶ್ರೀ ಮಹಾಲಿಂಗೇಶ್ವರ ಭಜನಾ ತಂಡ, ಬೆಳಗಾವಿ ಜಿಲ್ಲೆ ಜೋಕಾನಕಟ್ಟಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ನಾಗರಾಳದ ಶ್ರೀ ಗುರುಬಸವೇಶ್ವರ ಭಜನಾ ಮಂಡಳಿ, ಧಾರವಾಡ ಜಿಲ್ಲೆ ಉಗ್ನಿಕೇರಿಯ ಶ್ರೀ ಬಾಲಯೋಗಿ ಮಾಣಿಕ್ಯ ಚನ್ನವೃಷಬೇಂದ್ರ ಭಜನಾ ಮಂಡಳಿ ತಮ್ಮದಾಗಿಸಿಕೊಂಡವು.

    ತೃತೀಯ ಬಹುಮಾನವನ್ನು ಬೆಳಗಾವಿ ಜಿಲ್ಲೆ ಹುಣಶ್ಯಾಳ ಗ್ರಾಮದ ಶ್ರೀ ಭೀಮಾಶಂಕರ ಭಜನಾ ಮಂಡಳಿ, ಧಾರವಾಡ ಜಿಲ್ಲೆ ದೇವರಕೊಂಡದ ಸದ್ಗುರು ಶ್ರೀ ಶಿವಾನಂದಭಾರತಿ ಭಜನಾ ಮಂಡಳಿ,

    ಬೆಳಗಾವಿ ಜಿಲ್ಲೆ ಶಿರಗಾಂವದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ಮೆಳ್ಳಿಗೇರಿಯ ಶ್ರೀ ನಿತ್ಯಾನಂದ ಭಜನಾ ಮಂಡಳಿ, ಧಾರವಾಡ ಜಿಲ್ಲೆ ನೂಲ್ವಿ ಗ್ರಾಮದ ಶ್ರೀ ಮರಿಯಮ್ಮದೇವಿ ಕರಿಯಮ್ಮದೇವಿ ಭಜನಾ ಮಂಡಳಿ ಪಡೆದುಕೊಂಡವು.

    ಸಮಾಧಾನಕರ ಬಹುಮಾನವನ್ನು ಹಾಸನ ಜಿಲ್ಲೆ ಚಿಗಟಿಹಟ್ಟಿಯ ಶ್ರೀ ಬೂದೇಶ್ವರ ಭಜನಾ ಸಂಘ, ಬಳ್ಳಾರಿ ಜಿಲ್ಲೆ ಕಪ್ಪಗಲ್ಲು ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ಕೆರೂರು ಗ್ರಾಮದ ಶ್ರೀ ದಶಪ್ರಮತಿ ಭಜನಾ ಮಂಡಳಿ, ಹಾವೇರಿ ಜಿಲ್ಲೆ ಜೋಯಿಸರಹಳ್ಳಿಯ ಶ್ರೀ ಬಸವೇಶ್ವರ ಕಲಾ ತಂಡ, ರಾಯಚೂರು ಜಿಲ್ಲೆ ಮಸ್ಕಿಯ ಶ್ರೀ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಚಮರಾಜನಗರ ಜಿಲ್ಲೆ ದೊಡ್ಡಹುಂಡಿ ಗ್ರಾಮದ ಶ್ರೀ ಅಕ್ಕಮಹಾದೇವಿ ಮಹಿಳಾ ಭಜನಾ ಮಂಡಳಿ, ಶಿವಮೊಗ್ಗ ಜಿಲ್ಲೆ ಚಿಟ್ಟೂರ ಗ್ರಾಮದ ಶ್ರೀ ಮಾರ್ಕಂಡೇಶ್ವರ ಭಜನಾ ಮಂಡಳಿ, ಬೆಳಗಾವಿ ಜಿಲ್ಲೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿ ಭಜನಾ ಮಂಡಳಿ, ವಡೇರಹಳ್ಳಿ ಗ್ರಾಮದ ಶ್ರೀ ಪಂಚ ಸಿದ್ದೇಶ್ವರ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ಹಿಪ್ಪರಗಿ ಗ್ರಾಮದ ಶ್ರೀ ಗುರುಬಸವಗೌಡ ಭಜನಾ ಮಂಡಳಿ ಪಡೆದುಕೊಂಡವು.

    ಮಹಿಳಾ ಪುರಸ್ಕಾರವನ್ನು ಧಾರವಾಡ ಜಿಲ್ಲೆ ಹುಬ್ಬಳ್ಳಿ ಕಾಳಿದಾಸ ನಗರದ ಶ್ರೀ ದಾನೇಶ್ವರಿ ಭಜನಾ ಮಂಡಳಿ, ಹುಬ್ಬಳ್ಳಿಯ ಶ್ರೀ ಆರೂಢ ಸೇವಾ ಮಹಿಳಾ ಭಜನಾ ಮಂಡಳಿ ತಮ್ಮದಾಗಿಸಿಕೊಂಡವು.

    ಬಾಲಕ ಪುರಸ್ಕಾರವನ್ನು ಬೆಳಗಾವಿ ಜಿಲ್ಲೆ ಬೀಸನಕೊಪ್ಪದ ಶ್ರೀ ಸದ್ಗುರು ಶಿವಾನಂದಭಾರತಿ ಭಜನಾ ಮಂಡಳಿ ಹಾಗೂ ಬಾಲಕಿಯರ ಪುರಸ್ಕಾರವನ್ನು ಬಾಗಲಕೋಟ ಜಿಲ್ಲೆ ಗೋಠೆ ಗ್ರಾಮದ ಶ್ರೀ ಗಾನಸುಧಾಕರ ಅಣ್ಣನವರ ಭಜನಾ ಸಂಘ ಪಡೆದುಕೊಂಡವು.

    ಉತ್ತಮ ಗಾಯಕ ಪುರಸ್ಕಾರವನ್ನು ವಿಜಯಪುರ ಜಿಲ್ಲೆ ಕಣಬೂರ ಗ್ರಾಮದ ಶ್ರೀ ರಾಚೋಟೇಶ್ವರ ಭಜನಾ ಮಂಡಳಿ ಮತ್ತು ಬೆಳಗಾವಿ ಜಿಲ್ಲೆ ಶೇಗುಣಸಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಉತ್ತಮ ಹಾಮೋನಿಯಂ ಪುರಸ್ಕಾರವನ್ನು ಬಾಗಲಕೋಟ ಜಿಲ್ಲೆ ಬೀಳಗಿಯ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಅಲಗುಂಡಿ ಬಿ.ಕೆ. ಗ್ರಾಮದ ಶ್ರೀ ಶಿವಲಿಂಗೇಶ್ವರ ಭಜನಾ ಮಂಡಳಿ ತಮ್ಮದಾಗಿಸಿಕೊಂಡವು.

    ಉತ್ತಮ ತಬಲಾ ಪುರಸ್ಕಾರವನ್ನು ಬಾಗಲಕೋಟ ಜಿಲ್ಲೆ ಯಲ್ಲಟ್ಟಿ ಗ್ರಾಮದ ಭೀಮಶಿ ಬಡಿಗೇರ, ಬೆಳಗಾವಿ ಜಿಲ್ಲೆ ಬಿಲಕುಂದಿ ಗ್ರಾಮದ ರುದ್ರಗೌಡ ಪಾಟೀಲ ಪಡೆದುಕೊಂಡರು.

    ಉತ್ತಮ ದಮಡಿ ಪುರಸ್ಕಾರ ಬಾಗಲಕೋಟ ಜಿಲ್ಲೆ ಹೊಳೆಯಂಕಂಚಿಯ ಶ್ರೀ ರಾಮಾರೂಢ ಭಜನಾ ಮಂಡಳಿ, ಸೊನ್ನ ಗ್ರಾಮದ ಶ್ರೀ ಅವಧೂತ ಹಣಮಂತ ಮಹಾರಾಜ, ಉತ್ತಮ ತಾಳ ಪುರಸ್ಕಾರವನ್ನು ಬೆಳಗಾವಿ ಜಿಲ್ಲೆ ಉದಗಟ್ಟಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟ ಜಿಲ್ಲೆ ಬೇವೂರ ಗ್ರಾಮದ ಶಿವಶರಣ ಮಾದಾರ ಚೆನ್ನಯ್ಯ ತಮ್ಮದಾಗಿಸಿಕೊಂಡರು.

    ಉತ್ತಮ ಡಗ್ಗಾ ಪುರಸ್ಕಾರವನ್ನು ಧಾರವಾಡ ಜಿಲ್ಲೆ ಕಡಪಟ್ಟಿ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿ ಪಡೆದುಕೊಂಡಿತು.

    ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಗೋಕಾಕನ ಶ್ರೀ ಆತ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಧರ್ಮದರ್ಶಿ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ ಅಧ್ಯಕ್ಷ ಶಾಮಾನಂದ ಪೂಜೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

    ಶ್ರೀಮಠದ ಟ್ರಸ್ಟ್ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಮಂಜುನಾಥ ಮುನವಳ್ಳಿ, ವಿ.ಡಿ. ಕಾಮರಡ್ಡಿ, ಗೀತಾ ಕಲಬುರ್ಗಿ, ಡಾ. ಗೋವಿಂದ ಕಲಬುರ್ಗಿ, ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts