More

    ವೇದಿಕೆ ಮೇಲೆ ಜಗ್ಗೇಶ್ ಕಣ್ಣೀರಿಟ್ಟಿದ್ದು ಏಕೆ?

    ಬೆಂಗಳೂರು: ‘ಒಂದು ಮಧ್ಯಮ ವರ್ಗದ ಕುಟುಂಬದವನು ಇವತ್ತು ಈ ಲೆವೆಲ್‌ಗೆ ಬೆಳೆದಿದ್ದಾನೆ ಎಂದರೆ …’ ಅಷ್ಟರಲ್ಲಿ ಜಗ್ಗೇಶ್ ಭಾವುಕರಾದರು. ಅವರ ಕಣ್ಣೀರನ ಕಟ್ಟೆ ಒಡೆದಿತ್ತು. ವೇದಿಕೆಯ ಮೇಲೆ ಜಗ್ಗೇಶ್ ಕಣ್ಣೀರು ಸುರಿಸಿದರು.

    ಇದನ್ನೂ ಓದಿ: ಜನವರಿ ಮೂರನೇ ವಾರದಿಂದ ಕನ್ನಡದ ಬಿಗ್​ಬಾಸ್​ ಶುರು; ಈ ಸಲದ ವಿಶೇಷತೆ ಏನು ಗೊತ್ತಾ?

    ಇದೆಲ್ಲಾ ಆಗಿದ್ದು ಮಂಗಳವಾರ ಮಧ್ಯಾಹ್ನ ಜಗ್ಗೇಶ್​ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ. ಮಾಧ್ಯಮದವರೆದುರು ಜಗ್ಗೇಶ್ ಕಾಣಿಸಿಕೊಂಡು ಎಂಟು ತಿಂಗಳುಗಳೇ ಆಗಿದ್ದವು. ತಾವು ಚಿತ್ರರಂಗಕ್ಕೆ ಬಂದು ನಾಲ್ಕು ದಶಕಗಳು ಕಳೆದ ಹಿನ್ನೆಲೆಯಲ್ಲಿ, ತಮ್ಮನ್ನು ಬೆಳೆಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲು ಈ ಪತ್ರಿಕಾಗೋಷ್ಠಿ ಕರೆದಿದ್ದರು.

    ಈ ಪತ್ರಿಕಾಗೋಷ್ಠಿಯಲ್ಲಿ ತಾವು ಅನುಭವಿಸಿದ ಕಷ್ಟ-ಸುಖಗಳನ್ನು ನೆನಪಿಸಿಕೊಂಡ ಶಿವರಾಜಕುಮಾರ್, ತಮಗೆ ಬ್ರೇಕ್ ನೀಡಿದ ‘ರಣರಂಗ’ ಮತ್ತು ‘ಕೃಷ್ಣ ನೀ ಕುಣಿದಾಗ’ ಚಿತ್ರಗಳನ್ನು ಮತ್ತು ಹೀರೋ ಆಗುವುದಕ್ಕೆ ಪ್ರೇರೇಪಿಸಿದ ಅಂಬರೀಶ್ ಅವರನ್ನು ನೆನಪಿಸಿಕೊಂಡರು.

    ಇದನ್ನೂ ಓದಿ: ಗುಜರಾತ್​ಗೆ ಶೂಟಿಂಗ್​ ಲೊಕೇಷನ್​ ನೋಡೋಕೆ ಹೋಗಿದ್ದ ಪ್ರೇಮ್​ ಎಮ್ಮೆ ಜತೆ ಮರಳಿದ್ರು!

    ತಮ್ಮ ನಾಲ್ಕು ದಶಕಗಳ ಸುಧೀರ್ಘ ಪಯಣದ ಕುರಿತು ಮಾತನಾಡಿದ ಅವರು, ‘ಈ ಜರ್ನಿ ಹೇಗಾಯ್ತು ನನಗೆ ಈಗಲೂ ಗೊತ್ತಿಲ್ಲ. ನನ್ನ ತಂದೆ-ತಾಯಿ ಕಡೆ ಯಾರೂ ನಟರಿರಲಿಲ್ಲ. ನನ್ನ ಸಂಬಂಧಿಕರು ಈಗಲೂ ಮಧ್ಯಮವರ್ಗದವರೇ. ಈಗಲೂ ನನ್ನ ಬಂಧುಗಳು ಆಟೋ ಓಡಿಸುತ್ತಾರೆ. ಇಂಥದ್ದೊಂದು ಸಣ್ಣ ಕುಟುಂಬದಿಂದ ಬಂದವನು, ಇವತ್ತು ಈ ಲೆವೆಲ್​ಗೆ ಬೆಳೆದಿರುವುದು ನಿಜಕ್ಕೂ ಖುಷಿಯಾಗುತ್ತದೆ. ಈ ಪ್ರಯಾಣದಲ್ಲಿ ನನ್ನಗೆ ಸಾಕಷ್ಟು ಜನ ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿ’ ಎಂದು ಜಗ್ಗೇಶ್​ ಭಾವುಕರಾದರು.

    ‘ತೋತಾಪುರಿ’ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ: ಜಗ್ಗೇಶ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts