More

    ಕಾಮಗಾರಿ ಪೂರ್ಣಗೊಳ್ಳದ ಸಾರ್ವಜನಿಕ ಶೌಚಗೃಹ

    ಜಗಳೂರು: ಜಗಳೂರು ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಕಾಮಗಾರಿ ಎರಡು ವರ್ಷಗಳಿಂದಲೂ ಮಂದಗತಿಯಲ್ಲಿ ಸಾಗುತ್ತಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಟ್ಟಣ ಪಂಚಾಯಿತಿ ಅನುದಾನದಲ್ಲಿ 1.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಶೌಚಗೃಹ ಕಾಮಗಾರಿ ವೇಗ ಪಡೆದಿಲ್ಲ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅರ್ಪಣೆ ಮಾಡಬಹುದಿತ್ತು. ಆದರೆ, ಅನುದಾನದ ಕೊರತೆಯೋ ಅಥವಾ ಗುತ್ತಿಗೆದಾರನ ನಿರ್ಲಕ್ಷೃವೋ ? ಕಟ್ಟಡ ಮಾತ್ರ ಇನ್ನೂ ಸಂಪೂರ್ಣಗೊಂಡಿಲ್ಲ.

    ಮಿನಿ ವಿಧಾನಸೌಧ ಕಟ್ಟಡದಲ್ಲಿ ಕಂದಾಯ, ಉಪ ಖಜಾನೆ, ಉಪ ನೋಂದಣಿ, ಆಹಾರ, ಸರ್ವೇ, ಚುನಾವಣೆ ಮತ್ತಿತರ ಇಲಾಖೆಗಳು ಒಂದೇ ಸೂರಿನಡಿ ಕರ್ತವ್ಯ ನಿರ್ವಹಿಸುತ್ತಿವೆ. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ನೂರಾರು ಜನರಿದ್ದಾರೆ. ಇನ್ನು ಪಹಣಿ, ಸಾಮಾಜಿಕ ಭದ್ರತೆ, ನೋಂದಣಿ, ಪಡಿತರ ಚೀಟಿಗಾಗಿ ನಿತ್ಯವೂ 500ಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ.

    ತಹಸೀಲ್ದಾರ್ ಕಚೇರಿಯಲ್ಲಿ ಒಂದೆರಡು ಶೌಚಗೃಹ ಇರಬಹುದು. ಆದರೆ, ಅಧಿಕಾರಿ ವರ್ಗಕ್ಕೇ ಸಾಕಾಗುವುದಿಲ್ಲ. ಇನ್ನು ಸಾರ್ವಜನಿಕರ ಪಾಡೇನು? ಎನ್ನುವಂತಾಗಿದೆ. ಬಹುತೇಕ ಕಚೇರಿ ಸುತ್ತಲೂ ಬಯಲಲ್ಲೇ ಮಲಮೂತ್ರ ವಿಸರ್ಜನೆ ಮಾಡುವುದು ಸಹಜವಾಗಿದೆ. ಇದರಿಂದ ಸುತ್ತಲು ದುರ್ವಾಸೆ ಬೀರುತ್ತಿದೆ. ಜತೆಗೆ ನೊಣ, ಸೊಳ್ಳೆಗಳ ಕಾಟದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕಚೇರಿ ಸಿಬ್ಬಂದಿ.

    ಸಾರ್ವಜನಿಕರ ಉಪಯೋಗಕ್ಕಾಗಿ ಪಟ್ಟಣ ಪಂಚಾಯಿತಿಯಿಂದ ಶೌಚಗೃಹ ನಿರ್ಮಾಣವಾಗುತ್ತಿದೆ. ಆದರೆ, ಗುತ್ತಿಗೆದಾರನ ವಿಳಂಬದಿಂದ ಅಪೂರ್ಣಗೊಂಡಿದೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
    ಸಂತೋಷ್, ತಹಸೀಲ್ದಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts