More

    ರಸ್ತೆ ಅಪಘಾತ, ಇಬ್ಬರು ಬೈಕ್ ಸವಾರರ ಸಾವು

    ಜಗಳೂರು: ತಾಲೂಕಿನ ಚಿಕ್ಕಮ್ಮನಹಟ್ಟಿ ಹಾಗೂ ಕೆಳಗೋಟೆ ಕ್ರಾಸ್ ಬಳಿ ಮಂಗಳವಾರ ಬೈಕ್‌ಗಳು ಮುಖಾಮುಖಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಮಲೆ ಮಾಚಿಕೆರೆ ಕರಿಬಸಪ್ಪ (32), ಕ್ಯಾಸೇನಹಳ್ಳಿ ಹನುಮಂತಪ್ಪ (40) ಮೃತರು. ಗಾಯಾಳು ರಾಘವೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ವಿವರ: ಜಗಳೂರು ಕಡೆಯಿಂದ ತೆರಳುತ್ತಿದ್ದ ಕರಿಬಸಪ್ಪನ ಬೈಕ್‌ಗೆ ಎದುರಿನಿಂದ ಬಂದ ಹನುಮಂತಪ್ಪ ಎಂಬುವರ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರ ತಲೆಗೂ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಪಿಐ ದುರುಗಪ್ಪ, ಪಿಎಸ್‌ಐ ಉಮೇಶ್ ಬಾಬು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts