More

    ಖಾಸಗಿ ಸಹಭಾಗಿತ್ವದಿಂದ ಕರೊನಾ ವಿರುದ್ಧ ಪರಿಣಾಮಕಾರಿ ಸಮರ ಸಾಧ್ಯ : ಜಗದೀಶ ಶೆಟ್ಟರ್

    ಬೆಂಗಳೂರು: ಕರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ಸರ್ಕಾರದ ಜತೆಗೆ ಖಾಸಗಿ ವಲಯ ಕೈಜೋಡಿಸಿದರೆ ಇನ್ನಷ್ಟು ಪರಿಣಾಮಕಾರಿ ಹೋರಾಟ ಸಾಧ್ಯವಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಸಚಿವರು ಬೊಮ್ಮಸಂದ್ರ ಕೈಗಾರಿಕಾ ಸಂಘ ನೀಡಿದ 50 ಲಕ್ಷ ರೂ. ಮೌಲ್ಯದ 2,000 ಕರೊನಾ ಹೆಲ್ತ್​​ ಕೇರ್​​ ಕಿಟ್​​ಗಳನ್ನು ತಮ್ಮ ನಿವಾಸದಲ್ಲಿ ಇಂದು ಸ್ವೀಕರಿಸಿದ ನಂತರ ಮಾತನಾಡಿದರು.

    ಬಿಜೆಎಲ್ಆರ್ ಇಂಡಸ್ಟ್ರೀಸ್ ಮತ್ತು ಸನ್ಸೇರಾ ಫೌಂಡೇಶನ್ ದೇಣಿಗೆ ಪಡೆದು ಬೊಮ್ಮಸಂದ್ರ ಕೈಗಾರಿಕಾ ಸಂಘವು ಕರೊನಾ ಹೆಲ್ತ್ ಕೇರ್ ಕಿಟ್​​ಗಳನ್ನು ಸರ್ಕಾರಕ್ಕೆ ನೀಡಿದೆ. ಸಂಘದ‌ ಎ.ಪ್ರಸಾದ್ ಅವುಗಳನ್ನು ಸಚಿವ ಶೆಟ್ಟರ್​ ಅವರಿಗೆ ನೀಡಿದರು. ಸಚಿವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ ಅವರಿಗೆ ಕಿಟ್​ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಜಿ.ಪಂ. ಅಧ್ಯಕ್ಷ ಜಿ.ಮರಿಸ್ವಾಮಿ ಹಾಜರಿದ್ದರು.

    ಇದನ್ನೂ ಓದಿ: ದುರಂತದ ನಡುವೆ ಒಂದು ವಿಚಿತ್ರ ಘಟನೆ : ತಾಯಿಯ ಶವ ತರಲು ಒಳಹೋದವಗೆ ಕಾದಿತ್ತು ಆಶ್ಚರ್ಯ !

    ಮನೆಯಲ್ಲೇ ಆರೈಕೆ ಪಡೆಯುತ್ತಿರುವ‌ ಆನೇಕಲ್ ತಾಲೂಕಿನ ಬಡವರು ಹಾಗೂ ದುರ್ಬಲ ವರ್ಗದವರಿಗೆ‌ ಈ ಕಿಟ್​​ಗಳನ್ನು ವಿತರಿಸಲಾಗುತ್ತದೆ. ಔಷಧ, ಮಾತ್ರೆ, ಆಮ್ಲಜನಕ ಹಾಗೂ ಉಷ್ಣಾಂಶ ಪ್ರಮಾಣ ತಿಳಿದುಕೊಳ್ಳುವ ಸಾಧನ, ಸ್ಯಾನಿಟೈಸರ್ ಹಾಗೂ ಮಾಸ್ಕ್ಅನ್ನು ಈ ಕಿಟ್ ಒಳಗೊಂಡಿದ್ದು,‌ 10 ದಿನಗಳ ಕಾಲ ಬಳಸಿಕೊಂಡರೆ ಸೋಂಕಿನ ಜತೆಗೆ ಅನಗತ್ಯ‌ ಭಯವೂ ನಿವಾರಣೆಯಾಗುತ್ತದೆ ಎಂದು ಜಗದೀಶ ಶೆಟ್ಟರ್​ ಹೇಳಿದರು.

    ವಿವಿಧ ರೀತಿ ನೆರವು ನೀಡುವ ಕುರಿತು ಹಲವು ಉದ್ಯಮಗಳು ಮುಂದಾಗಿದ್ದು, ಇನ್ನೂ ಕೆಲವು ಸಂಘಸಂಸ್ಥೆಗಳ ಜತೆಗೆ ಮಾತುಕತೆ ನಡೆದಿದೆ. ಕರೊನಾ ನಿಯಂತ್ರಣ ಕ್ರಮಗಳಿಗೆ ಖಾಸಗಿ ರಂಗದ ಸಹಭಾಗಿತ್ವ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಶೆಟ್ಟರ್ ಹೇಳಿದರು.

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ತಂದೆಯನ್ನು ಕರೊನಾ ಬಲಿ ತೆಗೆದುಕೊಂಡಿತು… ಮೂರೇ ದಿನಗಳಲ್ಲಿ ಕೆಲಸಕ್ಕೆ ಮರಳಿದರು ಈ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts