‘200 ಕೋಟಿ ವಂಚಕ’ನ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಡೇಟಿಂಗ್? ಕಿಸ್ಸಿಂಗ್ ಫೋಟೋ ಸಮೇತ ಸಿಕ್ಕಿಬಿದ್ದ ನಟಿ!

blank

ಮುಂಬೈ: ವಿಕ್ರಾಂತ್ ರೋಣ ಸುಂದರಿ, ಶ್ರೀಲಂಕಾದ ಮಿಸ್ ಯುನಿವರ್ಸ್ ಜಾಕ್ವೆಲಿನ್ ಫೆರ್ನಾಂಡಿಸ್ ಬಾಲಿವುಡ್ ಮತ್ತು ಸೌತ್​​ನಲ್ಲಿಯೂ ಬಹಳಷ್ಟು ಫೇಮಸ್ ಮತ್ತು ಬಹುಬೇಡಿಕೆಯ ನಟಿ ಎಂದರೆ ತಪ್ಪಲ್ಲ. ನಟ ಸುದೀಪ್ ಜೊತೆ ಮುಂಬರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕ್ಕಿದ್ದು ಕನ್ನಡ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಇದು ಕನ್ನಡದಲ್ಲಿ ನಟಿಯ ಮೊದಲ ಸಿನಿಮಾ. ಆದರೆ ಕಳೆದ ಎರಡು ದಿನಗಳಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಒಂದು ವಿವಾದದಲ್ಲಿ ಸಿಲುಕಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್​​ರ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜಾಕ್ವೆಲಿನ್ ಫೆರ್ನಾಂಡಿಸ್ ಆರೋಪ ಹೊತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೌದು, ಇದಕ್ಕೆ ಸಿಕ್ಕಿರೋ ಸುಳಿವು ಒಂದು ವೈರಲ್ ಫೋಟೋ ಎನ್ನಲಾಗಿದೆ. ಅದುವೇ ನಟಿ ಜಾಕ್ವೆಲಿನ್ ಕೆನ್ನೆಗೆ ಸುಕೇಶ್ ಚಂದ್ರಶೇಖರ್ ಮುತ್ತಿಟ್ಟ ಫೋಟೋ. ಹೌದು, ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಸದ್ಯ ಈ ಫೋಟೋದೇ ಹವಾ. ಅಂದಹಾಗೆ, ಸುಕೇಶ್ ಚಂದ್ರಶೇಖರ್ ಹಲವು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಬೆದರಿಕೆ ಹಾಕಿ ಕೋಟಿ ಕೋಟಿ ಸುಲಿಗೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.

'200 ಕೋಟಿ ವಂಚಕ'ನ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಡೇಟಿಂಗ್? ಕಿಸ್ಸಿಂಗ್ ಫೋಟೋ ಸಮೇತ ಸಿಕ್ಕಿಬಿದ್ದ ನಟಿ!

ಸುಕೇಶ್ ಚಂದ್ರಶೇಖರ್ ಮತ್ತು ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಈ ಫೋಟೋನೇ ಸದ್ಯ ನೆಟ್ಟಿಗರ ಹಾಟ್ ಟಾಪಿಕ್ ಆಗಿದೆ. ಸುಕೇಶ್ ಚಂದ್ರಶೇಖರ್ ವಿಕ್ರಾಂತ್ ರೋಣ ಸುಂದರಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನಂತೆ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ಸುಕೇಶ್ ಜೈಲು ಸೇರಿದ್ದಾಗ ಕೂಡಾ ಸುಕೇಶ್ ಜೊತೆ ನಟಿ ಡೇಟಿಂಗ್ ಮಾಡ್ತಿರೋದಾಗಿ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳನ್ನು ಜಾಕ್ವೆಲಿನ್ ನಿರಾಕರಿಸಿದರು. ಅಷ್ಟರಲ್ಲಿ ಈ ಪೋಟೋ ಮತ್ತೆ ನಟಿಯನ್ನು ಸಂಕಷ್ಟಕ್ಕೆ ದೂಡಿದೆ.

ಹಾಗಾದರೆ ಓರ್ವ ವಂಚಕನ ಬಲೆಗೆ ಜಾಕ್ವೆಲಿನ್ ಬಿದ್ದಿದ್ಹೇಗೆ? ಸುಕೇಶ್ ಚಂದ್ರಶೇಖರ್ ಆರಂಭದಲ್ಲಿ ತಾನು ದೊಡ್ಡ ವ್ಯಕ್ತಿ , ಪ್ರಭಾವಿತನೆಂದು ನಂಬಿಸಿದ್ದನಂತೆ. ನಂತರ ನಟಿಗೆ ದುಬಾರಿ ಉಡುಗೊರೆಗಳನ್ನು ಕಳಿಸ್ತಿದ್ದನಂತೆ. ಇನ್ನೂ ವಂಚನೆ ಪ್ರಕರಣದಿಂದ ತಿಹಾರ್ ಜೈಲಿನಲ್ಲಿದ್ದ ಸುಕೇಶ್ ಜೂನ್​​ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದು, ಅದರ ನಂತರವೂ ಜಾಕ್ವೆಲಿನ್​​ನ ನಾಲ್ಕು – ಐದು ಬಾರಿ ಭೇಟಿಯಾಗಿದ್ದಾರಂತೆ.

'200 ಕೋಟಿ ವಂಚಕ'ನ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಡೇಟಿಂಗ್? ಕಿಸ್ಸಿಂಗ್ ಫೋಟೋ ಸಮೇತ ಸಿಕ್ಕಿಬಿದ್ದ ನಟಿ!

ವಾಸ್ತವವಾಗಿ ಜೈಲಿನಲ್ಲಿ ಇದ್ದುಕೊಂಡು ಸಹ ಸುಕೇಶ್ ನಟಿಯ ಜೊತೆ ಫೋನ್ ಸಂಪರ್ಕದಲ್ಲಿದ್ದರು ಎಂದು ಹಲವು ಮೂಲಗಳಿಂದ ಮಾಹಿತಿ ಇದೆ. ಒಟ್ಟಿನಲ್ಲಿ, 200 ಕೋಟಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದ್ದು, ನಟಿ ಜಾಕ್ವೆಲಿನ್ ಮತ್ತು ಸುಕೇಶ್ ನಡುವೆ ಯಾವುದಾದರೂ ಹಣದ ವಹಿವಾಟು ನಡೆದಿದೆಯೇ ಅಂತ ಇ.ಡಿ. ಶೋಧಿಸುತ್ತಿದೆ. ಇಂತಹ ಸಮಯದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಮತ್ತೆ ನಟಿಯನ್ನು ಅದೆಷ್ಟು ಸಂಕಷ್ಟಕ್ಕೆ ದೂಡಲಿದೆಯೋ ಎಂದು ಕಾಲವೇ ತಿಳಿಸಲಿದೆ.

ಸ್ಪೇನ್‌ನಿಂದ ಅಂಬಾನಿ ಮನೆಗೆ ಬಂತು ಎರಡು ಆಲಿವ್‌ ಮರ! ಇದಕ್ಕೆ ಕಾರಣವೂ ಕುತೂಹಲ

Share This Article

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಹಜ. ಈ ಅವಧಿಯಲ್ಲಿ ತೂಕ ಹೆಚ್ಚಾಗುವುದು ಮಗು ಸರಿಯಾಗಿ ಬೆಳೆಯುತ್ತಿದೆ ಎಂಬುದರ…

ಗರ್ಭಿಣಿಯರು ಈ ಪದಾರ್ಥಗಳಿಂದ ದೂರವಿರಿ; ಇಲ್ಲವಾದಲ್ಲಿ ಮಗುವಿಗೆ ಅಪಾಯ ತಪ್ಪಿದ್ದಲ್ಲ | Health Tips

ಪ್ರತಿಯೊಬ್ಬ ಮಹಿಳೆಯೂ ತನ್ನ ಗರ್ಭಾವಸ್ಥೆಯು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಇದರಿಂದ ತಾಯಿ ಮತ್ತು ಭ್ರೂಣದ ಆರೋಗ್ಯವು…

ಮದುವೆಯಾಗಲು ಸೂಕ್ತ ವಯಸ್ಸು ಯಾವುದು?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ … | Marriage

ನಮ್ಮಲ್ಲಿ ಹೆಚ್ಚಿನವರು ತಾವು ಬಯಸಿ ಅಥವಾ ಬಯಸದಿದ್ದರೂ ಒಂದು ಹಂತದಲ್ಲಿ ಮದುವೆಯಾಗಲು ಒತ್ತಡವನ್ನು ಅನುಭವಿಸುತ್ತಾರೆ. ವಯಸ್ಸು…