More

    ಸ್ಪೇನ್‌ನಿಂದ ಅಂಬಾನಿ ಮನೆಗೆ ಬಂತು ಎರಡು ಆಲಿವ್‌ ಮರ! ಇದಕ್ಕೆ ಕಾರಣವೂ ಕುತೂಹಲ

    ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ಎರಡು ಮರಗಳನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತರಿಸಿಕೊಂಡಿದ್ದಾರೆ. ಸ್ಪೇನ್‌ನಿಂದ ಎರಡು ವರ್ಷಗಳ ಹಿಂದೆ ತರಿಸಿಕೊಂಡಿರುವ ಮರ ಇದಾಗಿದ್ದು, ಇಲ್ಲಿಯವರೆಗೆ ಇದನ್ನು ಗೋದಾವರಿ ನದಿಯ ದಡದಲ್ಲಿರುವ ಕದಿಯಂ ಪ್ರದೇಶದಲ್ಲಿನ ಗೌತಮಿ ನರ್ಸರಿಯಲ್ಲಿ ಪೋಷಿಸಲಾಗುತ್ತಿತ್ತು. ಇಲ್ಲಿ ಮರಗಳ ಆರೈಕೆ, ಮಣ್ಣಿನ ಫಲವತ್ತತೆ, ಬೆಳವಣಿಗೆಗೆ ಬೇಕಾದ ವಿಶೇಷ ಕಾಳಜಿಯನ್ನು ವಹಿಸಲಾಗಿತ್ತು.

    ಈ ಮರ ಸುಮಾರು 185 ವರ್ಷಗಳಷ್ಟು ಹಳೆಯದಾಗಿದ್ದು, ಅಂದಾಜು 1000 ವರ್ಷ ಕಾಲ ಬದುಕುತ್ತವೆ ಎನ್ನಲಾಗಿದೆ. ಪ್ರತಿ ಮರಕ್ಕೂ ತಲಾ 47ಲಕ್ಷ ರೂ.ನಂತೆ 94 ಲಕ್ಷ ರೂ.ಗಳಾಗಿವೆ.

    ಅಷ್ಟಕ್ಕೂ ಈ ಮರಗಳನ್ನು ತರಿಸಿಕೊಳ್ಳುವ ಉದ್ದೇಶವೆಂದರೆ ಇದರಿಂದ ಬಹಳ ಶುಭವಾಗುತ್ತದೆ ಎಂಬ ನಂಬಿಕೆ. ಮನೆಯಲ್ಲಿ ಈ ಮರವಿದ್ದರೆ ಅದರಿಂದ ಅದೃಷ್ಟ ಒಲಿಯುತ್ತದೆ ಎನ್ನುವ ಕಾರಣದಿಂದ ಅಂಬಾನಿ ಇದನ್ನು ತರಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಎರಡು ಮರಗಳು ವಿಶೇಷ ಟ್ರಕ್ ಮೂಲಕ ತೆಲಂಗಾಣ, ಮಹಾರಾಷ್ಟ್ರದ ಮೂಲಕ ಹಾದು ಹೋಗಿ ಗುಜರಾತ್‍ನ ಜಾಮ್ ನಗರದಲ್ಲಿರುವ ಅಂಬಾನಿ ಮನೆಗೆ ಕಳುಹಿಸಿಕೊಡಲಾಗಿದೆ. ಸುಮಾರು 1,800 ಕಿಮೀ ದೂರ ಕ್ರಮಿಸಿ ಅಂಬಾನಿ ಮನೆ ತಲುಪಿದೆ.

    ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ…ತಡರಾತ್ರಿಯವರೆಗೂ ಎಣಿಕೆ

    ಡ್ಯೂಟಿ ನೆಪದಲ್ಲಿ ವಿವಾಹಿತೆ ಜತೆ ಸಬ್​​​ಇನ್ಸ್​​ಪೆಕ್ಟರ್ ಲವ್ವಿಡವ್ವಿ… ಊರಿಗೆ ಹೋಗ್ತೇನೆಂದು ಬಲೆಬೀಸಿದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts