More

    ಭ್ರಾತೃತ್ವಕ್ಕೆ ಧಕ್ಕೆ ತರುವಂತಹ ವಿಡಿಯೋ ವೈರಲ್ ಆದ ನಂತರ ಪ್ರತಿಭಟನೆ,  ಇಬ್ಬರ ಬಂಧನ

    ಶ್ರೀನಗರ: ಸಮುದಾಯ ಭಾವನೆಗೆ ಧಕ್ಕೆ ತರುವಂತಹ ವೀಡಿಯೊ ಪೋಸ್ಟ್ ಮಾಡಿದ ಸ್ವಯಂ ಘೋಷಿತ ಗುರು ಮತ್ತು ಅದಕ್ಕೆ ಜವಾಬ್ದಾರರಾದ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಹೆದ್ದಾರಿ ಪಟ್ಟಣವಾದ ಬನಿಹಾಲ್​​ನಲ್ಲಿ ಸೋಮವಾರ ನೂರಾರು ಜನರು ಪ್ರತಿಭಟನೆ ನಡೆಸಿದರು.
    ಬೆಳಿಗ್ಗೆ 8: 30 ರ ಸುಮಾರಿಗೆ ಪಟ್ಟಣದಲ್ಲಿ ನೂರಾರು ಅಂಗಡಿಯವರು ಮತ್ತು ಪಕ್ಕದ ಹಳ್ಳಿಗಳ ಜನರು ಜಮಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ಎಲ್ಲ ಅಂಗಡಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳು ಬನಿಹಾಲ್ ಮತ್ತು ಪಕ್ಕದ ಮಾರುಕಟ್ಟೆಗಳು ಬಂದ್ ಆಗಿದ್ದವು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ಸಂಚಾರ ಅಸ್ಥವ್ಯಸ್ಥವಾಗಿತ್ತು.

    ಇದನ್ನೂ ಓದಿ: ಪ್ರಣಬ್​ ಮುಖರ್ಜಿ ಆರೋಗ್ಯದಲ್ಲಿಲ್ಲ ಸುಧಾರಣೆ; ಗಂಭೀರ ಸ್ಥಿತಿ

    ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ವೀಡಿಯೊ ವೈರಲ್ ಆದ ನಂತರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಜಮ್ಮು ಪೊಲೀಸರು ಭಾನುವಾರ ಹೇಳಿದ್ದಾರೆ. ಸತ್ಪಾಲ್ ಶರ್ಮಾ ಮತ್ತು ದೀಪಕ್ ಬಂಧಿತರು ಎಂದು ಜಮ್ಮು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮುಖೇಶ್ ಸಿಂಗ್ ತಿಳಿಸಿದ್ದಾರೆ. ವೀಡಿಯೊದಲ್ಲಿ ಕಾಣಬಹುದಾದ ಮೂರನೇ ವ್ಯಕ್ತಿಯು ಪರಾರಿಯಾಗಿದ್ದಾನೆ, ಆದರೆ ಅವನನ್ನು ರೋಹಿತ್ ಎಂದು ಗುರುತಿಸಲಾಗಿದೆ ಎಂದು ಐಜಿಪಿ ಹೇಳಿದರು,”ಇದು ಭ್ರಾತೃತ್ವಕ್ಕೆ ಧಕ್ಕೆ ತರುತ್ತದೆಯಾದ್ದರಿಂದ ಈ ವೀಡಿಯೊವನ್ನು ಹಂಚಿಕೊಳ್ಳದಂತೆ ಸಿಂಘ್ ಜನರಲ್ಲಿ ಮನವಿ ಮಾಡಿದ್ದಾರೆ. 

    ಭಾರತಕ್ಕೆ ಅಕ್ರಮವಾಗಿ ಬಂದು ದಲೈಲಾಮಾ ಮೇಲೆ ಕಣ್ಣಿಟ್ಟಿದ್ದ ಚೀನಿ ‘ಕಳ್ಳ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts