More

    ಒಲಿಂಪಿಕ್ಸ್ ಆರ್ಚರಿ ಸ್ಪರ್ಧೆಯಲ್ಲಿ 10ರ ಸುರಿಮಳೆಯಾಗಲಿದೆ!

    ಟೋಕಿಯೊ: ಆರ್ಚರಿ ಸ್ಪರ್ಧೆಯಲ್ಲಿ ಬುಲ್ಸ್ ಐ ಮೂಲಕ ಪರಿಪೂರ್ಣ 10 ಅಂಕಗಳನ್ನು ಗಳಿಸುವುದು ಎಲ್ಲ ಸ್ಪರ್ಧಿಗಳ ಹಂಬಲವಾಗಿರುತ್ತದೆ. ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಿಲ್ಗಾರರು ಯುಮೆನೊಶಿಮಾ ಪಾರ್ಕ್ ಮೈದಾನದಲ್ಲಿ ಪ್ರತಿ ಬಾರಿ ಬಾಣ ಬಿಟ್ಟಾಗಲೂ ‘10’ ಎಂಬುದು ಕೇಳಿಬರಲಿದೆ. ಯಾಕೆಂದರೆ ಜಪಾನಿ ಭಾಷೆಯಲ್ಲಿ ‘ಅಂಕ’ವನ್ನು ‘ಟೆನ್’ ಎಂದು ಹೇಳಲಾಗುತ್ತದೆ!

    ಸಾಮಾನ್ಯವಾಗಿ ಆರ್ಚರಿ ಸ್ಪರ್ಧೆಯ ವೇಳೆ ಇಂಗ್ಲಿಷ್‌ನಲ್ಲಿ ಅಂಕ ಘೋಷಿಸುವಾಗ ಸಂಖ್ಯೆಯನ್ನಷ್ಟೇ ಹೇಳಲಾಗುತ್ತದೆ. ಆದರೆ ಜಪಾನ್ ಭಾಷೆಯಲ್ಲಿ ಪ್ರತಿ ಸಂಖ್ಯೆಯ ಉಚ್ಚಾರದಲ್ಲಿ ಸಾಕಷ್ಟು ಹೋಲಿಕೆ ಇರುವುದರಿಂದ, ಸಂಖ್ಯೆಯ ಜತೆಗೆ ‘ಅಂಕ’ ಅಂದರೆ ‘ಟೆನ್’ ಎಂದು ಹೇಳುವುದನ್ನು ಕಡ್ಡಾಯಗೊಳಿಸಲಾಗಿದೆ.

    ಜಪಾನ್ ಭಾಷೆಯಲ್ಲಿ 10 ಸಂಖ್ಯೆಗೆ ‘ಜು’ ಎಂದು ಹೇಳಲಾಗುತ್ತದೆ. 9ಕ್ಕೆ ‘ಕ್ಯು’ ಮತ್ತು 8ಕ್ಕೆ ‘ಹಚಿ’ ಎನ್ನಲಾಗುತ್ತದೆ. ಹೀಗಾಗಿ ಬಿಲ್ಗಾರರು 10 ಅಂಕ ಗಳಿಸಿದಾಗ ‘ಜು-ಟೆನ್’ ಎನ್ನಲಾಗುತ್ತದೆ. 9 ಅಂಕ ಪಡೆದರೆ ‘ಕ್ಯು-ಟೆನ್’ ಎನ್ನಲಾಗುತ್ತದೆ. ಬಿಲ್ಗಾರಿಕೆಯಲ್ಲಿ ‘ರ್ಪೆಕ್ಟ್ 10’ ನಿರ್ಣಾಯಕ ಪಾತ್ರ ವಹಿಸಿದ್ದು, ಪದಕ ಗೆಲುವಿಗೆ ಶೇ. 60-70 ರಷ್ಟು ರ್ಪೆಕ್ಟ್ 10 ಅಂಕಗಳಿಕೆ ಅಗತ್ಯವಾಗಿರುತ್ತದೆ.

    ಭಾರತ ಹಾಕಿ ತಂಡಕ್ಕೆ ಹೆಚ್ಚುವರಿ ಆಟಗಾರರ ಸೇರ್ಪಡೆ
    ಕರೊನಾದಿಂದಾಗಿ ಅಲಭ್ಯರಾಗುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲು ಐಒಸಿ ಅವಕಾಶ ನೀಡಿರುವುದರಿಂದ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಕ್ಕೆ ತಲಾ ಇಬ್ಬರು ಹೆಚ್ಚುವರಿ ಆಟಗಾರರನ್ನು ಸೇರ್ಪಡಗೊಳಿಸಲಾಗಿದೆ. ಪುರುಷರ ತಂಡಕ್ಕೆ ಡಿೆಂಡರ್ ವರುಣ್ ಕುಮಾರ್, ಮಿಡ್ ಫೀಲ್ಡರ್ ಸಿಮ್ರಾನ್‌ಜೀತ್ ಸಿಂಗ್ ಮತ್ತು ಮಹಿಳಾ ತಂಡಕ್ಕೆ ಡಿೆಂಡರ್ ರೀನಾ ಖೋಖರ್ ಮತ್ತು ಮಿಡ್‌ಫೀಲ್ಡರ್ ನಮಿತಾ ಟೊಪ್ಪೊ ಅವರನ್ನು ಸೇರಿಸಲಾಗಿದೆ. ಇದರಿಂದ ಉಭಯ ತಂಡಗಳ ತಲಾ ಆಟಗಾರರ ಸಂಖ್ಯೆ 18ಕ್ಕೇರಿದೆ.

    ಬಾಲಿವುಡ್ ನಟಿ ಕಿಮ್ ಶರ್ಮ ಜತೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇಟಿಂಗ್!

    ಆಂಗ್ಲರ ಚೊಚ್ಚಲ ವಿಶ್ವಕಪ್ ಗೆಲುವಿಗೆ 2ನೇ ವರ್ಷದ ಸಂಭ್ರಮ, ಫೈನಲ್ ಸೋತರೂ ಹೃದಯ ಗೆದ್ದಿತ್ತು ನ್ಯೂಜಿಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts