More

    ಖಗೋಳ ವಿಸ್ಮಯವನ್ನು ಜಗತ್ತಿಗೆ ತೋರಿದ್ದು ಭಾರತೀಯರು

    ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ’ವ್ಯೋಮ ದರ್ಶಿನಿ’ ಕೃತಕ ಲಘು ತಾರಾಲಯ, ಗ್ರಹವಕ್ರಗತಿ ದರ್ಶಕ ಯಂತ್ರ ಹಾಗೂ ಲಗ್ನಚಕ್ರ ಯಂತ್ರದ ಸಂಚಾಲನಾ ಕಾರ್ಯಕ್ರಮ, ಕಬ್ಬಿನಹಾಲು ಹಬ್ಬ ಮಂಗಳವಾರ ಸಂಜೆ ನಡೆಯಿತು.

    ’ವ್ಯೋಮ ದರ್ಶಿನಿ’ ಕೃತಕ ಲಘು ತಾರಾಲಯ, ಗ್ರಹವಕ್ರಗತಿ ದರ್ಶಕ ಯಂತ್ರ ಹಾಗೂ ಲಗ್ನಚಕ್ರ ಯಂತ್ರಗಳನ್ನು ಸಂಚಾಲನೆಗೊಳಿಸಿದ ಇಸ್ರೊದ ವಿಶ್ರಾಂತ ವಿಜ್ಞಾನಿ ಡಾ.ಕೆ. ಹರೀಶ ಮಾತನಾಡಿ, ಖಗೋಳದಲ್ಲಿ ನಡೆಯುವ ವಿಸ್ಮಯಗಳಿಗೂ, ಮಾನವನ ಜೀವನಕ್ಕೂ ಇರುವ ಸಂಬಂಧವನ್ನು ಜಗತ್ತಿಗೆ ತೋರಿಸಿದ್ದು ಭಾರತೀಯರು. ನಮ್ಮ ಸಂಸ್ಕೃತಿಯ ಬಗ್ಗೆ ಭಕ್ತಿ, ಶ್ರದ್ಧೆಯ ಜತೆಗೆ, ವೈಜ್ಞಾನಿಕ ದೃಷ್ಟಿಯಿಂದ ರ್ತಸುವ ಮನೋಭಾವನೆ ಹೊಂದಿ ಅದರ ಮಹತ್ವ ತಿಳಿಯುವ, ತಿಳಿಸುವ ಕಾರ್ಯ ಮಾಡುತ್ತ ಬಂದಿದ್ದೇವೆ. ತರ್ಕ, ಶ್ರದ್ಧೆ ಒಟ್ಟಿಗೆ ನೋಡುವುದಿದ್ದರೆ ಅದು ಭಾರತದಲ್ಲಿ ಮಾತ್ರ ಎಂದರು.

    ಸೂರ್ಯ, ಚಂದ್ರ, ನಕ್ಷತ್ರಗಳ ಮಹತ್ವವನ್ನು ವಿಜ್ಞಾನ ಮತ್ತು ಶಾಸ್ತ್ರದ ಸಮನ್ವಯದೊಂದಿಗೆ ವಿವರಿಸಿದ ಅವರು, ಸುಮೇರು ಜ್ಯೋತಿರ್ವನ ಇಹ ಪರಗಳ ಜ್ಞಾನ ಭಂಡಾರವಾಗಿದೆ. ಇದೊಂದು ವಿಶ್ವವಿದ್ಯಾಲಯವಾಗಿ ಪ್ರಪಂಚಕ್ಕೆ್ ಜ್ಞಾನದ ಬೆಳಕನ್ನು ನಿರಂತರವಾಗಿ ನೀಡಲಿ ಎಂದು ಆಶಿಸಿದರು.

    ನಿತ್ಯಪ್ರಭಾ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತ ಜ್ಞಾನ ಮತ್ತು ವಿಜ್ಞಾನ ಎರಡನ್ನೂ ಜಗತ್ತಿಗೆ ನೀಡಿದೆ. ಆದರೆ ಆಧುನಿಕತೆಯ ಹಿಂದೆ ಬಿದ್ದು ಇಟ್ಟ ತಪ್ಪು ಹೆಜ್ಜೆಗಳಿಂದ ಗೊಂದಲಕ್ಕೆ ಸಿಲುಕಿದ್ದೇವೆ. ಅಂತಹ ಗೊಂದಲಗಳಿಗೆ ಪರಿಹಾರವಾಗಿ, ಆಶಾಕಿರಣವಾಗಿ ಸುಮೇರು ಜ್ಯೋತಿರ್ವನದಂತಹ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಪ್ರಯತ್ನಗಳನ್ನು ಎಲ್ಲ ರೀತಿಯಿಂದ ಪೋ›ತ್ಸಾಹಿಸಬೇಕಾದ ಅಗತ್ಯವಿದೆ ಎಂದರು.

    ಡಾ.ಕೆ.ಸಿ.ನಾಗೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮೇರು ಜ್ಯೋತಿರ್ವನದಲ್ಲಿ 81 ಕಾರ್ಯಕ್ರಮಗಳು ವಿಭಿನ್ನ ದೃಷ್ಟಿಕೋನದಲ್ಲಿ, ವಿಶಿಷ್ಟ ಆಶಯಗಳೊಂದಿಗೆ ನಡೆದಿವೆ. ಆ ಎಲ್ಲ ಕಾರ್ಯಕ್ರಮಗಳ ಕುರಿತಾದ ಮಾಹಿತಿಯನ್ನು ಸಾಕ್ಷ್ಯಚಿತ್ರ ಸಂಪುಟ ಎಂಬ ಹೆಸರಿನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಗಣಿತಜ್ಞ ವಿ.ನೀಲಕಂಠ ಯಾಜಿ ಮಾತನಾಡಿ, ಜ್ಞಾನಕ್ಕಾಗಿ ಅನೇಕ ಶಾಸ್ತ್ರಗಳಿವೆ. ಆದರೆ ಅನುಭವಕ್ಕೆ ಸಿಗುವುದು ಜ್ಯೋತಿಷ ಶಾಸ್ತ್ರ ಮಾತ್ರ. ಈಗಿನ ವಿಜ್ಞಾನ ತಾಂತ್ರಿಕವಾಗಿ ಮಾಡಿದ ಸಾಧನೆಗಳನ್ನು ನಮ್ಮ ಪೂರ್ವಿಕರು ಅನೇಕ ಶತಮಾನಗಳ ಹಿಂದೆ ಕೇವಲ ಶಾಸ್ತ್ರ ದೃಷ್ಟಿಯಿಂದ ಸಾಧಿಸಿದ್ದರು. ಈಗಲೂ ಶಾಸ್ತ್ರದೃಷ್ಟಿಯಿಂದ ಅಧ್ಯಯನ ಮಾಡಿದರೆ ಋಷಿಗಳಾಗಲು ಸಾಧ್ಯ ಎಂದರು.

    ವಿದ್ವಾಂಸ ಮಂಜುನಾಥ ಶವತಿ, ನಾರು ಮಂಡಳಿಯ ವ್ಯವಹಾರ ಅಭಿವೃದ್ಧಿ ಸಲಹೆಗಾರ ಶಿವಲಿಂಗಯ್ಯ ಅಲ್ಲಯ್ಯನವರಮಠ ಉಪಸ್ಥಿತರಿದ್ದರು. ಸುಜಾತಾ ಹೆಗಡೆ ನಿರ್ವಹಿಸಿದರು. ಈ ವೇಳೆ ನಡೆದ ಕಬ್ಬಿನಹಾಲು ಹಬ್ಬದಲ್ಲಿ ಸುತ್ತಮುತ್ತಲಿನ ನೂರಾರು ಜನರು ಕಬ್ಬಿನಹಾಲು, ಮಂಡಕ್ಕಿ ಸವಿದರು.

    ವಕ್ರ ಗ್ರಹಗಳ ಕುರಿತು ವಿವರಣೆ

    ಡಾ.ಕೆ.ಸಿ.ನಾಗೇಶ ಭಟ್ಟ ಅವರ ಮಾರ್ಗದರ್ಶನದಲ್ಲಿ ಜ್ಯೋತಿಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಗ್ರಹವಕ್ರಗತಿದರ್ಶಕ ಯಂತ್ರದ ಮೂಲಕ ಜಾತಕ, ಗ್ರಹಗಳ ಗತಿ, ಅದರಲ್ಲೂ ವಿಶೇಷವಾಗಿ ವಕ್ರ ಗ್ರಹಗಳ ಕುರಿತು ವಿವರಿಸಲಾಯಿತು. ಲಗ್ನ, ಅದಕ್ಕೂ ಭೂಮಿಗೂ ಇರುವ ಸಂಬಂಧಗಳ ಕುರಿತು ಲಗ್ನಚಕ್ರ ಯಂತ್ರದ ಮೂಲಕ ವಿವರಿಸಿದರು. ಲಘು ತಾರಾಲಯದಲ್ಲಿ ನೆರಳು-ಬೆಳಕಿನ ಸಂಯೋಜನೆಯಲ್ಲಿ ಆಕಾಶದಲ್ಲಿ ವಿವಿಧ ನಕ್ಷತ್ರಗಳನ್ನು, ನಮ್ಮ ಜನ್ಮನಕ್ಷತ್ರಗಳನ್ನು ಗುರುತಿಸಿ, ಅದರ ಕುರಿತಾದ ವಿವರಗಳನ್ನು ನಾಗೇಶ ಭಟ್ಟ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts