More

    ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರಿಗೆ ಐಟಿ ಶಾಕ್: ಕೋಟ್ಯಂತರ ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ


    ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನಕ್ಕೆ ಎರಡು ದಿನಗಳಷ್ಟೇ ಬಾಕಿ ಇದ್ದು, ಇದೇ ವೇಳೆ ಕುರುಡು ಕಾಂಚಾಣದ ಕುಣಿತವೂ ಜೋರಾಗಿದ್ದು, ಚುನಾವಣೆ ವೇಳೆ ಅಕ್ರಮ ತಡೆಯಲು ಕಳೆದ ಎರಡು ದಿನಗಳಲ್ಲಿ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಿನಗಳಲ್ಲಿ ಒಟ್ಟು ೧೦ ಹೆಚ್ಚು ಕಡೆ ತಪಾಸಣೆ ನಡೆಸಿ ಕೆಜಿಗಟ್ಟಲೆ ಚಿನ್ನ ಮತ್ತು ನಗದು ಜಪ್ತಿ ಮಾಡಿದ್ದಾರೆ.
    ಬೆಂಗಳೂರು, ವಿಜಯನಗರ, ರಾಮನಗರ, ಚಾಮರಾಜನಗರ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ೧೬.೧೦ ಕೋಟಿ ಮೌಲ್ಯದ ೨೨ ಕೆ.ಜಿ ಚಿನ್ನ ಮತ್ತು ೬.೪೫ ಕೋಟಿ ರೂ ಮೌಲ್ಯದ ವಜ್ರ ಮತ್ತು ೬ ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರಿನ 7 ಕಡೆಗಳಲ್ಲಿ ದಾಳಿ:
    ಬೆಂಗಳೂರಿನ 7 ಕಡೆಗಳಲ್ಲಿ ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಕೆಜಿಗಟ್ಟಲೆ ಚಿನ್ನ, ಕಂತೆ-ಕಂತೆ ನೋಟುಗಳು ಪತ್ತೆಯಾಗಿವೆ. ಅಂದಾಜು ೧೬ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ ಎಂದು ಐಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
    ಮಂಗಳವಾರ ಹಾಗೂ ಬುಧವಾರ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿರುವ ಕೆಲ ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರಿಗೆ ಸೇರಿದ ೭ ಕಡೆಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂ. ಮೌಲ್ಯದ ಕೆಜಿಗಟ್ಟಲೆ ಚಿನ್ನಾಭರಣ, ಕಂತೆ-ಕಂತೆ ಗರಿ ಗರಿ ನೋಟುಗಳು ಸಿಕ್ಕಿವೆ. ಇನ್ನು ದಾಳಿ ನಡೆಸಿರುವ ಸ್ಥಳಗಳಲ್ಲಿ ಪತ್ತೆಯಾದ ಚಿನ್ನ, ನಗದು ಹಣಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಅವುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ:
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಾಗ ಬೆಂಗಳೂರು ದಕ್ಷಿಣ ಕ್ಷೇತ್ರದ ವಿವಿಧೆಡೆ ನೆಲೆಸಿರುವ ಕೆಲವು ಚಿನ್ನದ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ಕೋಟ್ಯಂತರ ನಗದು ಹೊಂದಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ದಾಳಿಯ ವೇಳೆ ಸಿಕ್ಕಿದ್ದೇನು ?

    • ಬಸವನಗುಡಿಯ ಆಶ್ರಯ ಉತ್ತರ ಚೌಕ ರಸ್ತೆಯಲ್ಲಿರುವ ಮಳಿಗೆಯಲ್ಲಿ ೧.೨೯ ಕೋಟಿ ರೂ. ಮೌಲ್ಯದ ೧೮೩೯.೫೯ ಗ್ರಾಂ ಚಿನ್ನ. ೩.೩೪ ಲಕ್ಷ ರೂ. ಮೌಲ್ಯದ ೬.೩೮ ಗ್ರಾಂ ವಜ್ರ ಮತ್ತು ೧೭ ಲಕ್ಷ ರೂ. ನಗದು.
      *ಶಂಕರಪುರದ ೩ ನೇ ಕ್ರಾಸ್‌ನಲ್ಲಿರುವ ಕೈಲಾಶ್ ಮಾರ್ಲೆಚಾ ಐ೨೦ ಅಸ್ತಾ ಮಳಿಗೆಯಲ್ಲಿ ೩.೧೦ ಕೊಟಿ ರೂ. ಮೌಲ್ಯದ ೪೪೧೩.೬೬ ಗ್ರಾಂ ಚಿನ್ನ. ೫೫ ಲಕ್ಷ ರೂ. ನಗದು
      *ಶಾರದಾದೇವಿ ರಸ್ತೆಯ ಸ್ವಾಸ ಹೋಮ್ಸ್ ಮಳಿಗೆಯಲ್ಲಿ ೩.೩೯ ಕೋಟಿ ರೂ. ಮೌಲ್ಯದ ೪೮೩೩.೫೨೭ ಗ್ರಾಂ ಚಿನ್ನ. ೩,೧೪,೪೭೫ ಮೌಲ್ಯದ ೫.೯೯ ಗ್ರಾಂ ವಜ್ರ. ೧೬ ಲಕ್ಷ ರೂ. ನಗದು.
    • ಬೆಂಗಳೂರು ನಗರ ಶಾಖೆಯ ಮರ್ಕೆಂಟೈಲ್ ಬ್ಯಾಂಕ್ ಲಾಕರ್‌ನಿಂದ ೨.೧೩ ಕೋಟಿ ರೂ. ಮೌಲ್ಯದ ೩೦೪೦.೮೪ ಗ್ರಾಂ ಚಿನ್ನ.
      *ಜಯನಗರ ೩ನೇ ಬ್ಲಾಕ್‌ನಲ್ಲಿ ೫.೩೩ ಕೋಟಿ ರೂ. ಮೌಲ್ಯದ ೭೫೯೮.೨೨ ಗ್ರಾಂ ಚಿನ್ನ, ೬.೪೦ ಕೋಟಿ ರೂ. ಮೌಲ್ಯದ ೨೦೨.೮೩ ಗ್ರಾಂ ವಜ್ರ ಮತ್ತು ೮.೭೭ ಲಕ್ಷ ರೂ. ನಗದು
      *ಚಾಮರಾಜಪೇಟೆಯ ನೀತಾ ಮರ್ಲೆಚಾ ಲಾಕರ್‌ನಿಂದ ೮೪.೩೧ ಲಕ್ಷ ರೂ. ಮೌಲ್ಯದ ೧೨೦೦ ಗ್ರಾಂ ಚಿನ್ನದ ಗಟ್ಟಿ
      *ಬಸವನಗುಡಿಯ ವಿವಿ ಪುರದ ವಾಣಿವಿಲಾಸ್ ರಸ್ತೆ ಬಳಿ ೩೭ ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
      *ವಿಜಯನಗರ ಹಡಗಲಿ ಪೊಲೀಸ್ ತಂಡದವರು ೧೨.೧೭ ಲಕ್ಷ ನಗದು, ೨.೫೦ ಲಕ್ಷ ರೂ. ಮೌಲ್ಯದ ೨೮ ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ಐಟಿ ಇಲಾಖೆಯ ಸುರ್ಪದಿಗೆ ಒಪ್ಪಿಸಿದ್ದಾರೆ.
      *ರಾಮನಗರ ಜಿಲ್ಲೆ ಗಂಟಕನದೊಡ್ಡಿ ಚೆಕ್‌ಪೊಸ್ಟ್‌ನಲ್ಲಿ ಸ್ಥಿರ ಕಣ್ಗಾವಲು ತಂಡ (ಎಸ್‌ಎಸ್‌ಟಿ) ೨೩.೧೧ ಲಕ್ಷ ರೂ. ನಗದನ್ನು ವಶಕ್ಕೆ ಪಡೆದು ಐಟಿಗೆ ಒಪ್ಪಿಸಿದ್ದಾರೆ.
      *ಮೈಸೂರು ಜಿಲ್ಲೆಯ ಮದವಾಡಿ ಚೆಕ್‌ಪೊಸ್ಟ್‌ನಲ್ಲಿ ಎಸ್‌ಎಸ್‌ಟಿ ಟೀಂ ೧೩.೧೮ ಲಕ್ಷ ನಗದನ್ನು ವಶಕ್ಕೆ ಪಡೆದು ಐಟಿ ಇಲಾಖೆಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts