More

    ಡಿಜಿಟಲ್​ ಮಾರ್ಕೆಟಿಂಗ್​, ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ; 70 ಕೋಟಿ ರೂ. ಬೋಗಸ್​ ಬಿಲ್ಸ್​ ಪತ್ತೆ

    ಬೆಂಗಳೂರು: ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಛೇರಿಗಳುಳ್ಳ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕ್ಯಾಂಪೇನ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಸಾಲಿಡ್​ ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ ನಡೆದಿದೆ. ಈ ಕಂಪೆನಿಗಳು ಕೋಟ್ಯಂತರ ರೂಪಾಯಿ ಐಟಿ ಅವ್ಯವಹಾರ ಮಾಡಿರುವ ಪ್ರಾಥಮಿಕ ಪುರಾವೆ ಸಿಕ್ಕಿದ್ದು, ತನಿಖೆ ಮತ್ತು ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಐಟಿ ಇಲಾಖೆ ತಿಳಿಸಿದೆ.

    ಇದೇ ತಿಂಗಳ 12 ರಂದು ಆರಂಭಿಸಿ ಬೆಂಗಳೂರು, ಸೂರತ್, ಮೊಹಾಲಿ ಸೇರಿದಂತೆ ಏಳು ಕಡೆ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕ್ಯಾಂಪೇನ್ ಮ್ಯಾನೇಜ್ಮೆಂಟ್ ಕಂಪನಿ ಡಿಸೈನ್ ಬಾಕ್ಸ್ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹವಾಲ ಆಪರೇಟರ್​ಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಕಂಪೆನಿಯ ನಿರ್ದೇಶಕರ ವೈಯಕ್ತಿಕ ಖರ್ಚುಗಳನ್ನು ಬ್ಯುಸಿನೆಸ್ ಖರ್ಚಿನಡಿ ತೋರಿಸಿರುವ ಕಂಪನಿಗಳು, ನಿರ್ದೇಶಕರು ಮತ್ತು ಅವರ ಕುಟುಂಬ ಸದಸ್ಯರ ಹೆಸರಲ್ಲಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಜೊತೆಗೆ, ಕಡಿಮೆ ಆದಾಯ ತೋರಿಸಿ, ಹೆಚ್ಚು ಖರ್ಚುಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಐಟಿ ಇಲಾಖೆ ಹೇಳಿಕೆ ನೀಡಿದೆ.

    ಇದನ್ನೂ ಓದಿ: ಶ್ರೀಲೀಲಾ ನನ್ನ ಮಗಳಲ್ಲ, ಆಕೆ ಡಿವೋರ್ಸ್​ ಬಳಿಕ ಜನಿಸಿದಳು! ಮೊದಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ ನಟಿ

    ಮತ್ತೊಂದು ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಕಂಪನಿಗಳ ಮೇಲೂ ಐಟಿ ದಾಳಿ ನಡೆಸಲಾಗಿದ್ದು, ಹಲವು ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಖರ್ಚುಗಳು ಮತ್ತು ಸಬ್ ಕಾಂಟ್ರಾಕ್ಟ್ ಹೆಸರಲ್ಲಿ 70 ಕೋಟಿ ರೂ.ಗಳಷ್ಟು ಬೋಗಸ್ ಬಿಲ್ ತಯಾರಿಸಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಆಸ್ತಿಗಳ ಮೇಲೆ ಸುಮಾರು 7 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿರುವುದು ಪತ್ತೆಯಾಗಿದ್ದು, ದಾಖಲೆ ಇಲ್ಲದ 1.95 ಕೋಟಿ ರೂ. ಹಣ ಮತ್ತು 65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ.

    ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

    VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts