More

    ಉತ್ತಮ ಪ್ರಜೆ ರೂಪಿಸುವ ಜವಾಬ್ದಾರಿ ಶಿಕರದ್ದು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಶಿಕ್ಷಕರಿಗೆ ವೃತ್ತಿಯಲ್ಲಿ ಬೇಕಾಗುವ ಮೊಟ್ಟ ಮೊದಲ ಅಂಶವೇ ತಾಳ್ಮೆ. ನಾವು ಮಕ್ಕಳಿಗೆ ಭೋದಿಸುವಾಗ ಅತಿ ತಾಳ್ಮೆಯಿಂದ ಪಾಠ ಹೇಳಿಕೊಡಬೇಕು. ಒಮ್ಮೆ ಕಲಿಸಿದ ಪಾಠವನ್ನು ಮತ್ತೊಮ್ಮೆ ಹೇಳಬೇಕಾದ ಪ್ರಮೇಯವೂ ಬರಬಹುದು. ಹಾಗಾಗಿ ತಾಳ್ಮೆಯಿಂದ ಭೋಧನೆ ಮಾಡಬೇಕು ಎಂದು ಜೆಎಸ್​ಎಸ್​ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
    ನಗರದ ಜನತಾ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೊತ್ಥಾನ ಪರಿಷತ್​, ಪ್ರಶಿಣ ಭಾರತಿ ಶಿಕರ ಪ್ರಶಿಣ ಪ್ರಕಲ್ಪ ಸಹಯೋಗದಲ್ಲಿ ಜೆಎಸ್​ಎಸ್​ ಶಾಲೆಗಳ ಶಿಕರಿಗೆ 4 ದಿನಗಳ ಕಾಲ ಏರ್ಪಡಿಸಿರುವ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಶಿಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ದುರಭ್ಯಾಸ ಹೊಂದಿರಬಾರದು. ನಾವು ಕಲಿಸುವ ವಿದ್ಯೆ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಸಂಯಮ, ಸಮಯ ಪ್ರಜ್ಞೆ ಅಳವಡಿಸಿಕೊಳ್ಳಿ. ಕೇವಲ ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನಲ್ಲದೇ, ವ್ಯಕ್ತಿತ್ವ ವಿಕಸನವಾಗುವಂತಹ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ಅಗಾಧ ಜ್ಞಾನ ದೊರೆಯುತ್ತದೆ. ಶಿಕರ ಭೋದನೆಯಲ್ಲಿ ಸಮಾಜದ ಸ್ವಾಸ್ಥ$್ಯ ಅಡಗಿದ್ದು, ಪ್ರತಿ ವರ್ಷ ಶಿಕರಿಗೆ ಇಂತಹ ತರಬೇತಿಗಳನ್ನು ಆಯೋಜಿಸಿ ಅವರಲ್ಲಿ ಪುನಶ್ಚೇತನ ನೀಡುವ ಕಾರ್ಯ ನಡೆಯುತ್ತಿದೆ ಎಂದರು.
    ನಿವೃತ್ತ ಉಪನ್ಯಾಸಕ ಸುರೇಶ ಕುಲಕಣಿರ್ ಮಾತನಾಡಿ, ಶಿಕರು ಹಾಗೂ ವಿದ್ಯಾಥಿರ್ಗಳ ನಡುವೆ ನಿಕಟ ಸಂಬಂಧವಿದೆ. ಶಿಕರು ಕಲಿಕೆ ವಿಷಯದಲ್ಲಿ ಯಾವಾಗಲೂ ಉತ್ಸಾಹಭರಿತರಾಗಿರಬೇಕು. ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಯ ಪರಿಸರ ಸೃಷ್ಟಿಸಬೇಕು. ಆಗ ವಿದ್ಯಾಥಿರ್ ಸಾಧನೆಗೆ ಪೋಷಣೆ ಸಿಕ್ಕಂತಾಗುತ್ತದೆ. ಶಿಕರು ತೋರಿಸುವ ಸಕಾರಾತ್ಮಕ ಭೋಧನೆ ವಿದ್ಯಾಥಿರ್ಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದರು.
    ಅಶೋಕ ಸೋನೆಕರ ಅಧ್ಯತೆ ವಹಿಸಿದ್ದರು. ದೀಪಾ ಕುಲಕಣಿರ್, ಶಾಲೆಗಳ ಪ್ರಾಚಾರ್ಯರಾದ ಉಷಾ ಸಂತೋಷ, ತ್ರಿವೇಣಿ ಆರ್​, ಮೈನಾವತಿ ದಿವಟೆ, ಸುಧಾಮಣಿರಾವ್​, ವಿದ್ಯಾ ಕೊಲ್ಹಾಪುರೆ ಹಾಗೂ 150ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.
    ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ನಂದಾ ಕುಕನೂರ ನಿರೂಪಿಸಿದರು. ಮಹೇಶ ಬಗಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts