More

    ಶರಣರ ಪರಂಪರೆಯಿAದ ಜೀವನ ಮೌಲ್ಯ ತಿಳಿಯಲು ಸಾಧ್ಯ

    ಸೊರಬ: ಗುರು-ಶಿಷ್ಯ ಪರಂಪರೆ, ಶರಣ ಪರಂಪರೆಗಳಿAದ ನಮ್ಮ ಜೀವನದ ಮೌಲ್ಯಗಳನ್ನು ತಿಳಿಯಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಶ್ರೀ ರುದ್ರ ದೇವರು ತಿಳಿಸಿದರು.
    ಪಟ್ಟಣದ ಮುರುಘಾಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೨೦೯ನೇ ಮಾಸಿಕ ಶಿವಾನುಭವ ಹಾಗೂ ಗ್ರಾಮೀಣ ಸದ್ಭಾವನಾ ಪಾದಯಾತ್ರೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಗುರುವಿನಿಂದ ವಿಚಾರಗಳು ಮೂಡಿ ಬಂದು ಜ್ಞಾನವೆಂಬ ದೀಪವ ಹಚ್ಚಿ ಮನಸ್ಸಿನ ಕೆಟ್ಟ ಗುಣಗಳನ್ನು ದೂರ ಮಾಡಲು ಗುರುವಿನ ಮಾರ್ಗದರ್ಶನ ಅಗತ್ಯ. ಫೆ.೧೦ರಿಂದ ೨೪ರವರೆಗೆ ಜಡೆ ಮಠದಲ್ಲಿ ಕತೃ ಗದ್ದಿಗೆಯ ಶಿಲಾಮಂಟಪ್ಪದ ಲೋಕಾರ್ಪಣೆ, ನಿರಂಜನಚರ ಶ್ರೀ ರುದ್ರ ದೇವರ ಪಟ್ಟಾಽಕಾರ, ಡಾ. ಶ್ರೀ ಮಾಹಂತ ಮಹಾಸ್ವಾಮೀಜಿಗಳ ಪಟ್ಟಾಽಕಾರದ ರಜತೋತ್ಸವ ಹಾಗೂ ಜಗದ್ಗುರು ಶ್ರೀಸಿದ್ಧವೃಷಬೇಂದ್ರ ಶಿವಯೋಗಿಗಳ ರಥೋತ್ಸವ ಹಮ್ಮಿಕೊಂಡಿದ್ದು ಭಕ್ತರು ಪಾಲ್ಗೊಳ್ಳುವಂತೆ ತಿಳಿಸಿದರು.
    ಕಿತ್ತೂರಿನ ಶಿವಕುಮಾರ ಯೋಗಮಠದ ಓಂ ಗುರೂಜಿ ಮಾತನಾಡಿ, ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ದೂರವಾಗಿ ಸ್ವಾರ್ಥದ ಲಕ್ಷಣಗಳು ರಾರಾಜಿಸುತ್ತಿವೆ. ಪ್ರಾಪಂಚಿಕ ಜೀವನವೇ ಮುಖ್ಯವಾಗಿರದೆ. ಗುರುವಿನ ಅಧ್ಯಾತ್ಮದ ಮಾರ್ಗದಲ್ಲಿ ನಡೆದಾಗ ಬದುಕು ಸುಂದರವಾಗಲು ಸಾಧ್ಯ ಎಂದರು.
    ಮನುಷ್ಯನ ಮನಸ್ಸು ಅಧ್ಯಾತ್ಮದಿಂದ ದೂರವಾಗಿ ಅಲೌಕಿಕ ಸಾಂಸ್ಕÈತಿಯ ಕಡೆಗೆ ಹರಿಯುತ್ತದೆ. ಗುರುವಿನ ಅನುಗ್ರಹದಿಂದ ಮಾತ್ರ ಸಂಸ್ಕಾರಯುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಜನನ ಮರಣಕ್ಕೆ ಗುರುವಿನ ಸಂಸ್ಕಾರ ಬೇಕು. ಗುರುವಿಲ್ಲದ ಸಮಾಜವನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂದರು.
    ಲಿAಗನಾಯಕನಹಳ್ಳಿ ಮಠದ ಶ್ರೀ ನಿರಂಜನ ದೇವರು ಆಶೀರ್ವಚನ ನೀಡಿದರು. ಅಕ್ಕನ ಬಳಗದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಠದ ಕಾರ್ಯದರ್ಶಿ ಡಿ.ಶಿವಯೋಗಿ ದೂಪದಮಠ, ಜಯಮಾಲಾ, ರೂಪಾ, ಪುಷ್ಪಾ, ಸುಧಾ, ರೇವತಿ, ಶಾಂತಮ್ಮ, ರೇಖಾ, ಪಾಟೀಲ್, ಮಲ್ಲಿಕಾರ್ಜುನ ಗೌಡ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts