More

    ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ನಿವೃತ್ತಿ

    ಕೊಲಂಬೊ: ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ, ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಇದರಿಂದ ದಶಕದ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಿಂದ ಹಿಂದೆ ಸರಿದರು. ಕಳೆದ 12 ವರ್ಷಗಳಿಂದ ಲಂಕಾ ತಂಡದಲ್ಲಿದ್ದರೂ ಕೇವಲ 21 ಏಕದಿನ ಹಾಗೂ 35 ಟಿ20 ಪಂದ್ಯಗಳನ್ನಷ್ಟೇ ಆಡಿದ್ದು, 45 ವಿಕೆಟ್‌ಗಳನ್ನಷ್ಟೇ ಕಬಳಿಸಿದ್ದಾರೆ. 33 ವರ್ಷದ ಉದಾನ ಇತ್ತೀಚೆಗೆ ಮುಕ್ತಾಯಗೊಂಡ ಭಾರತ ವಿರುದ್ಧದ ನಿಗದಿತ ಓವರ್‌ಗಳ ಸರಣಿಯಲ್ಲಿ ಆಡಿದ್ದರು. ಆದರೆ, ಕಡೇ ಟಿ20 ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದರು.

    ಇದನ್ನೂ ಓದಿ: ಜೋಕೊವಿಕ್‌ಗೆ ಒಲಿಂಪಿಕ್ಸ್‌ನಲ್ಲಿ ನಿರಾಸೆ; ಬರಿಗೈಲಿ ವಾಪಸಾದ ವಿಶ್ವ ನಂ.1, 

    ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ತಂಡದ ಪರ ಆಡಿದ್ದರು. ‘ಮೈದಾನದಲ್ಲಿ ಶೇಕಡ 100 ನೀಡಲು ಪ್ರಯತ್ನಿಸಿದೆ. ನಾನು ಯಾವಾಗಲೂ ಕ್ರೀಡೆಯಲ್ಲಿ ಪ್ರೀತಿಸುತ್ತೇನೆ. ರಾಷ್ಟ್ರೀಯ ತಂಡ ಪ್ರತಿನಿಧಿಸುವುದೇ ದೊಡ್ಡ ಗೌರವ’ ಎಂದು ಉದಾನ ತಿಳಿಸಿದ್ದಾರೆ. 33 ವರ್ಷದ ಉದಾನ ತಮ್ಮ ನಿವೃತ್ತಿ ನಿರ್ಧಾರವನ್ನು ಪತ್ರದ ಮೂಲಕ ಶ್ರೀಲಂಕಾ ಕ್ರಿಕೆಟ್‌ಗೆ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಫ್ರಾಂಚೈಸಿ ಟೂರ್ನಿಗಳಿಗೆ ಲಭ್ಯವಿರುವುದಾಗಿ ಹೇಳಿಕೊಂಡಿದ್ದಾರೆ. 2009ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದರೂ 2017ರವರೆಗೂ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಕಳೆದ ಮೂರು ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಥಿಸೆರಾ ಪೆರೇರಾ ಕಳೆದ ಮೇ ತಿಂಗಳಲ್ಲಿ ನಿವೃತ್ತಿ ಹೇಳಿದ್ದರು.

    ಇದನ್ನೂ ಓದಿ: ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್‌ಗೆ ಅಭಿಮಾನಿಗಳು ಫಿದಾ,

    ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದ ವೇಳೆ ಬಯೋಬಬಲ್ ಸುರಕ್ಷತಾ ವಲಯ ಉಲ್ಲಂಘಿಸಿದ್ದ ಶ್ರೀಲಂಕಾದ ಮೂವರು ಆಟಗಾರರಾದ ಧನುಷ್ಕಾ ಗುಣತಿಲಕ, ಕುಶಾಲ್ ಮೆಂಡೀಸ್ ಹಾಗೂ ನಿರೋಶಾನ್ ಡಿಕ್‌ವೆಲಾಗೆ ಒಂದು ವರ್ಷ ನಿಷೇಧ ಹೇರಲಾಗಿದೆ. 10 ಮಿಲಿಯನ್ ಶ್ರೀಲಂಕಾ ರೂಪಾಯಿ (37.28ಲಕ್ಷ ರೂ) ದಂಢ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts