More

    ಇಸ್ರೋದಿಂದ ಉಡಾವಣೆ ಆಗಿದ್ದ ಹೊಸ ರಾಕೆಟ್ ವಿಫಲ, ಉಪಯೋಗಕ್ಕಿಲ್ಲ ಇನ್ನು ಆ ಉಪಗ್ರಹ..

    ನವದೆಹಲಿ: ಭಾರತೀಯ ಬಾಹಾಕ್ಯಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಅತ್ಯಂತ ಚಿಕ್ಕ ರಾಕೆಟ್​ ಎಸ್​ಎಸ್​ಎಲ್​ಡಿ-1 ಭಾನುವಾರ ಬೆಳಗ್ಗೆ ಉಡಾವಣೆ ಮಾಡಿದ್ದು, ಈ ಉಡಾವಣೆ ವಿಫಲಗೊಂಡಿದೆ. ಇಂದು ಬೆಳಗ್ಗೆ 7ಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದನ್ನು ಉಡಾವಣೆ ಮಾಡಲಾಗಿತ್ತು.

    ಉಡಾವಣೆಗೊಂಡ ರಾಕೆಟ್ ನಿಗದಿತ ಕಕ್ಷೆಯ ಪಥ ಬದಲಿಸಿ, ಅಸ್ಥಿರ ಕಕ್ಷೆಗೆ ತಲುಪಿದೆ. ಪರಿಣಾಮವಾಗಿ ಉಪಗ್ರಹ ಇನ್ನು ಉಪಯೋಗಕ್ಕೆ ಬರದಂತಾಗಿದೆ ಎಂದು ಇಸ್ರೋ ತಿಳಿಸಿದೆ. ಈ ಉಡಾವಣೆಯ ಸಾಧಕ-ಬಾಧಕ ಪರಿಶೀಲಿಸಿ, ಅಧ್ಯಯನ ಕೈಗೊಂಡು ಶೀಘ್ರದಲ್ಲೇ ಎಸ್ಎಸ್​ಎಲ್​ವಿ-ಡಿ2 ಉಡಾವಣೆ ಮಾಡಲಾಗುವುದು ಎಂದೂ ಅದು ಹೇಳಿದೆ.

    ಎಸ್​ಎಸ್​ಎಲ್​-ಡಿ1 ಹೆಸರಿನ ಚಿಕ್ಕ ರಾಕೆಟ್,​ ಭೂ ವೀಕ್ಷಣೆ ಉಪಗ್ರಹ (ಇಒಎಸ್​-02) ಮತ್ತು ವಿದ್ಯಾರ್ಥಿ ನಿರ್ಮಿತ ಉಪಗ್ರಹ ಆಜಾದಿಸ್ಯಾಟ್​ ಹೊತ್ತುಕೊಂಡು ನಭಕ್ಕೆ ನೆಗೆದಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 750 ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಈ ಉಪಗ್ರಹವನ್ನು​ ರೂಪಿಸಿತ್ತು.

    ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!

    ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts