More

    ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡಿ

    ಹಗರಿಬೊಮ್ಮನಹಳ್ಳಿ: ಬಿಸಿಯೂಟ ನೌಕರರ ವೇತನವನ್ನು ಜಂಟಿ ಖಾತೆಗೆ ವರ್ಗಾವಣೆ ಮಾಡದಿರಲು ಆಗ್ರಹಿಸಿ ಅಕ್ಷರ ದಾಸೋಹದ ಬಿಸಿಯೂಟ ನೌಕರರು ಪಟ್ಟಣದಲ್ಲಿ ಶಾಸಕ ಕೆ.ನೇಮಿರಾಜನಾಯ್ಕಗೆ ಗುರುವಾರ ಮನವಿ ಸಲ್ಲಿಸಿದರು.

    ಮೃತಪಟ್ಟ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿ

    ನೌಕರರ ವೇತನವನ್ನು ಎಸ್ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ವರ್ಗಾವಣೆಗೆ ಆದೇಶವನ್ನು ಹಿಂಪಡೆಯಬೇಕು. 60 ವರ್ಷ ವಯಸ್ಸಿನ ನೌಕರರನ್ನು ಉದ್ಯೋಗದಿಂದ ಕೈಬಿಟ್ಟರೇ 1 ಲಕ್ಷ ರೂ. ನಗದು ನೀಡಿ ಪ್ರೋತ್ಸಾಹಿಸಬೇಕು. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಬಜೆಟ್‌ನಲ್ಲಿ ಘೋಷಿಸಿದಂತೆ ಜನವರಿಯಿಂದ 1 ಸಾವಿರ ರೂ. ವೇತನ ಹೆಚ್ಚಳ ಮಾಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ರದ್ದುಗೊಳಿಸಬೇಕು ಎಂದು ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಸುಜಾತ ಆಗ್ರಹಿಸಿದರು.

    ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ವಿನೂತನ ಪ್ರಯತ್ನ; ಸೈ-ಫೈ ಚಿತ್ರದ ‘ಸಖಿ’ ಲಿರಿಕಲ್ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿಯರು!

    ಸರ್ಕಾರಗಳು ಬಿಸಿಯೂಟ ನೌಕರರ ಬೇಡಿಕೆಗಳಿಗೆ ಸ್ಪಂದಿಸದೇ ನಿರ್ಲಕ್ಷೃ ಧೋರಣೆ ತಾಳಿವೆ. ಹಾಗಾಗಿ ಇದೇ ನ.3 ರಂದು ರಾಜ್ಯ ಮಟ್ಟದ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಬಹುತೇಕ ನೌಕರರು ಹೋರಾಟದಲ್ಲಿ ಭಾಗವಹಿಸಲಿದ್ದೇವೆ. ಅ.30 ರಿಂದಲೇ ನೌಕರರು ಕೆಲಸವನ್ನು ಸ್ಥಗಿತಗೊಳಿಸಲು ನಿರ್ಣಯಿಸಿದ್ದೇವೆ. ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಶಾಸಕ ಕೆ.ನೇಮಿರಾಜನಾಯ್ಕ ಮಾತನಾಡಿ, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಸಂಘದ ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಗೌರಮ್ಮ, ಪ್ರಮುಖರಾದ ಸುನಿತಾ, ಅಂಬಿಕಾ, ನಿಂಗಮ್ಮ, ಮಂಜುಳಾ, ಹೇಮಾವತಿ, ಭಾಗ್ಯವತಿ, ಯಶೋದಾ, ಸಾಕಮ್ಮ, ಶೋಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts