More

    ದಕ್ಷಿಣ ಭಾರತದಲ್ಲಿ ವ್ಯಾಪಿಸುತ್ತಿರುವ ಐಸಿಸ್​ ಉಗ್ರರ ಜಾಲ: ದೆಹಲಿ ಪೊಲೀಸರಿಂದ ಆತಂಕಕಾರಿ ಮಾಹಿತಿ

    ನವದೆಹಲಿ: ಭಾರತದ ವಿವಿಧ ರಾಜ್ಯಗಳಲ್ಲಿ ಐಸಿಸ್ ತನ್ನ ಜಾಲವನ್ನು ವಿಸ್ತರಿಸುತ್ತದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಐಸಿಸ್​ ಇರುವಿಕೆ ಬಲಗೊಳ್ಳುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

    ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಉಗ್ರ ಸಂಘಟನೆಗೆ ಸಂಬಂಧಿಸಿದ ಸಭೆಗಳು ನಡೆದಿವೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ 11 ಮಂದಿಯನ್ನು ಗುರುತಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ದೆಹಲಿ ಪೊಲೀಸ್​ ತಿಳಿಸಿದೆ.

    ಗುಜರಾತ್​, ತಮಿಳುನಾಡು ಮತ್ತು ಕೇರಳದಲ್ಲಿ ಪೊಲೀಸ್​ ತಂಡವನ್ನು ನಿಯೋಜಿಸಲಾಗಿದ್ದು, ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಐಸಿಸ್​ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತನೊಬ್ಬನನ್ನು ಗುಜರಾತ್​ನಲ್ಲಿ ಬಂಧಿಸಲಾಗಿದೆ. ಅವನನ್ನು ದೆಹಲಿಗೆ ವಿಚಾರಣೆಗೆಂದು ಕರೆತರಾಲಾಗುವುದೆಂದು ಮಾಹಿತಿ ನೀಡಿದರು. ಅಲ್ಲದೆ, ತಮಿಳುನಾಡು ಮತ್ತು ಕೇರಳ ಗಡಿ ಬಳಿಯಿರುವ ಕಲಿಯಕ್ಕವಿಲೈನಲ್ಲಿ ಪೊಲೀಸ್​ ಸಿಬ್ಬಂದಿ ವಿಲ್ಸನ್​ ಎಂಬವರನ್ನು ಹತ್ಯೆಗೈದ ಆರೋಪಿಗಳಾದ ಶಮೀಮ್​ ಮತ್ತು ತೌಫೀಕ್​ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

    ಗುರುವಾರ ಇಸ್ಲಾಮಿಕ್​ ಸ್ಟೇಟ್​ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಬಂಧಿಸಲಾಗಿದ್ದು, ಕರ್ನಾಟಕ ಸೇರಿದಂತೆ ಕೇರಳ, ಬಿಹಾರ್​, ಮಧ್ಯ ಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ತೆಲಂಗಾಣದ ವಿವಿಧ ಪೊಲೀಸ್​ ತಂಡ ದೆಹಲಿ ವಿಶೇಷ ಘಟಕದಿಂದ ಬಂಧಿಸಲಾಗಿರುವ ಮೂವರು ಉಗ್ರರನ್ನು ವಿಚಾರಣೆ ನಡೆಸುತ್ತಿವೆ.

    ರಿಸರ್ಚ್​ ಅನಾಲಿಸಿಸ್​ ಆಫ್​ ವಿಂಗ್​(RAW) ಮತ್ತು ಇಂಟೆಲಿಜೆನ್ಸ್​ ಬ್ಯೂರೋ(IB) ಉಪಸ್ಥಿತಿಯಲ್ಲಿ ಉಗ್ರರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಮೂವರು ಉಗ್ರರನ್ನು ಖಾಜ ಮೊಯಿದ್ದೀನ್​(52), ಸೈದ್​ ಅಲಿ ನವಾಸ್​(32) ಮತ್ತು ಅಬ್ದುಲ್​ ಸಮಾದ್​(28) ಎಂದು ಗುರುತಿಸಲಾಗಿದ್ದು, ಹಿಂದು ನಾಯಕ ಕೆ.ಪಿ. ಸುರೇಶ್ ಕುಮಾರ್​ ಹತ್ಯೆಯಲ್ಲಿ ಇವರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ.​ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts