More

    ರೈನಾ, ಹರ್ಭಜನ್ ಬಳಿಕ ಭಾರತದ ಮತ್ತೋರ್ವ ಕ್ರಿಕೆಟಿಗ ಐಪಿಎಲ್‌ನಿಂದ ಹೊರಬೀಳುವ ಭೀತಿ

    ದುಬೈ: ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಬಳಿಕ ಭಾರತದ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಐಪಿಎಲ್ 13ನೇ ಆವೃತ್ತಿಯಿಂದ ಹೊರಬೀಳುವ ಭೀತಿ ಎದುರಾಗಿದೆ. ಅವರೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಇಶಾಂತ್ ಶರ್ಮ.

    ರೈನಾ, ಹರ್ಭಜನ್ ಬಳಿಕ ಭಾರತದ ಮತ್ತೋರ್ವ ಕ್ರಿಕೆಟಿಗ ಐಪಿಎಲ್‌ನಿಂದ ಹೊರಬೀಳುವ ಭೀತಿ

    ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಹೊರನಡೆದಿದ್ದರೆ, 32 ವರ್ಷದ ಇಶಾಂತ್ ಶರ್ಮ ಈಗಾಗಲೆ ಯುಎಇಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜತೆಗಿದ್ದಾರೆ. ಆದರೆ ಡೆಲ್ಲಿ ತಂಡದ ಮೊದಲ ಪಂದ್ಯಕ್ಕೆ ಪೂರ್ವಭಾವಿಯಾಗಿ ಅಭ್ಯಾಸದ ವೇಳೆ ಇಶಾಂತ್ ಶರ್ಮ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ.

    ಇಶಾಂತ್ ಶರ್ಮ ಸದ್ಯಕ್ಕೆ ಐಪಿಎಲ್ ಟೂರ್ನಿ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದು, ಸಂಪೂರ್ಣ ಟೂರ್ನಿಯಿಂದ ಹೊರಬಿದ್ದರೂ ಅಚ್ಚರಿ ಇಲ್ಲವೆನಿಸಿದೆ. 97 ಟೆಸ್ಟ್ ಪಂದ್ಯಗಳ ಅನುಭವಿ ಇಶಾಂತ್ ಶರ್ಮ ಡೆಲ್ಲಿ ತಂಡದ ಆಡುವ ಹನ್ನೊಂದರ ಬಳಗಕ್ಕೆ ಖಚಿತ ಆಯ್ಕೆ ಆಗಿರಲಿಲ್ಲ. ಮೋಹಿತ್ ಶರ್ಮ ಅವರೇ ಭಾರತೀಯ ವೇಗಿಗಳ ಪೈಕಿ ಮೊದಲ ಆದ್ಯತೆಯಾಗಿದ್ದರು.

    ಇದನ್ನೂ ಓದಿ: ಐಪಿಎಲ್ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಧೋನಿ

    ಇಶಾಂತ್ ಶರ್ಮ ಗಾಯದ ಸಮಸ್ಯೆಗೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ಜನವರಿಯಲ್ಲಿ ಕಣಕಾಲು ಗಾಯದಿಂದಾಗಿ ಅವರು ಕೆಲಕಾಲ ಹೊರಗುಳಿದಿದ್ದರು. ಬಳಿಕ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಬಳಿಕ 2ನೇ ಟೆಸ್ಟ್ ವೇಳೆಗೆ ಈ ಗಾಯ ಮರುಕಳಿಸಿದ ಕಾರಣ ಕ್ರೈಸ್ಟ್‌ಚರ್ಚ್‌ನ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

    PHOTO | ಐಪಿಎಲ್ ಮೊದಲ ಪಂದ್ಯ ಹೇಗೆಲ್ಲಾ ಟ್ರೋಲ್ ಆಯಿತು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts