More

    ಆರ್​ಸಿಬಿ ಸೋಲಿಗೆ ಕಾರಣರಾದ್ರ ಅಂಪೈರ್​ಗಳು?; ಹೀಗಿದೆ ಕಾರಣ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ 17ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು, ಹಾಲಿ ಟೂರ್ನಿಯಲ್ಲಿ ಆರ್​ಸಿಬಿಗೆ ಇದು ಐದನೇ ಸೋಲಾಗಿದೆ. ಇತ್ತ ಬ್ಯಾಟ್ಸ್​ಮನ್​ಗಳು ಉತ್ತಮ ಮೊತ್ತ ಪೇರಿಸಿದರೂ ಬೌಲರ್​ಗಳು ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ.

    ಆರ್​ಸಿಬಿ ಪರ ನಾಯಕ ಫಾಫ್​ ಡು ಪ್ಲೆಸಿಸ್​, ರಜತ್​ ಪಾಟಿದಾರ್​ ಹಾಗೂ ದಿನೇಶ್​ ಕಾರ್ತಿಕ್​ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡದ ಮೊತ್ತ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಪಂದ್ಯ ಮುಗಿದ ಬಳಿಕ ಅಂಪೈರಿಂಗ್​ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅಂಪೈರ್​ಗಳು ತೆಗೆದುಕೊಂಡ ನಿರ್ಧಾರ ಮುಂಬೈ ಪರವಾಗಿತ್ತು ಎಂದು ಅನೇಕರು ದೂರಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಸೆಟ್ಟೇರಿತ್ತು ದುನಿಯಾ ವಿಜಯ್​ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್​ವುಡ್​ಗೆ ಮಗಳ ಎಂಟ್ರಿ

    ಪಂದ್ಯ ಶುರುವಾಗುವುದಕ್ಕೂ ಮುನ್ನ ನಡೆದ ಟಾಸ್​ ವೇಳೆ ರೆಫ್ರಿ ಕಾಯಿನ್​ ತಿರುಗಿಸುವ ಮೂಲಕ ಮುಂಬೈ ಇಂಡಿಯನ್ಸ್​ಗೆ ಅನುಕೂಲವಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಕೊನೆಯ ಓವರ್​ನಲ್ಲಿ ಫೀಲ್ಡರ್​ನ ದೇಹದ ಭಾಗ ಬೌಂಡರಿ ಗಡಿಗೆ ತಾಗಿತ್ತು. ಬೌಂಡರಿ ಹೋಗಿದ್ದನ್ನು ಕೊಡದೆ ಇರುವ ವಿಚಾರವೂ ಚರ್ಚೆ ಹುಟ್ಟುಹಾಕಿದೆ. ಇದೇ ಸಂದರ್ಭದಲ್ಲಿ ಫೀಲ್ಡರ್​​ ಸಂಪರ್ಕದಲ್ಲಿ ಬಾಲ್​ ಇದ್ದರೂ ಆದಾಗ್ಯೂ ಇದನ್ನು ಬೌಂಡರಿ ನೀಡಲಿಲ್ಲ. ಈ ಬಗ್ಗೆ ವಿರಾಟ್​ ಕೊಹ್ಲಿ ಅಸಮಾಧಾನ ಹೊರಹಾಕಿದ್ದು, ಅಂಪೈರ್​ ಬಳಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಆರ್​ಸಿಬಿ ಪರ ಸ್ಫೋಟಕ ಬ್ಯಾಟಿಂಗ್​ ಆಡುತ್ತಿರುವ ಮಹಿಪಾಲ್​ ಲೊಮ್ರೊರ್​ ತಾವು ಎದುರಿಸಿದ ಮೊದಲ ಎಸೆತದಲ್ಲಿ ಎಲ್​ಬಿಗೆ ಬಲಿಯಾದರು. ಈ ಬಾಲ್​ ಕೂಡ ವಿಕೆಟ್​ನಿಂದ  ಹೊರಗೆ ಹೋಗುತ್ತಾ ಇತ್ತು. ಆದಾಗ್ಯೂ ಅಂಪೈರ್ ಔಟ್ ನೀಡಿದ್ದರು. ನಂತರ ರಿವ್ಯೂ ತೆಗೆದುಕೊಂಡಾಗ ಸ್ಟಂಪ್​ಗೆ ಸ್ವಲ್ಪ ತಾಗುತ್ತಿದೆ ಎನ್ನುವ ಕಾರಣಕ್ಕೆ ಔಟ್​ ನೀಡಲಾಯಿತು. ಇದಲ್ಲದೆ ದಿನೇಶ್​ ಕಾರ್ತಿಕ ಬ್ಯಾಟಿಂಗ್​ ಮಾಡುವ ವೇಳೆ ನೋಬಾಲ್​ ಎಸೆಯಲಾಗಿತ್ತು. ಇದನ್ನು ಮೂರನೇ ಅಂಪೈರ್ ಬಳಿ ಪ್ರಶ್ನಿಸಿದಾಗ ಅವರು ನಾರ್ಮಲ್​ ಬಾಲ್​ ಎಂದು ಹೇಳಿದರು. ಈ ಎಲ್ಲಾ ಕಾರಣಗಳು ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಅಂಪೈರ್​ಗಳ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಇದರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts