More

    ಲಾಕ್​ಡೌನ್​ ಸಮಯದಲ್ಲಿ ಸೂರ್ಯನೂ ಥಂಡಾ…! ಏನಿದು ಸೋಲಾರ್​ ಮಿನಿಮಂ?

    ನವದೆಹಲಿ: ಲಾಕ್​ಡೌನ್​ ಅವಧಿಯುದ್ದಕ್ಕೂ ಜೀವನಾಶ್ಯಕ ವಸ್ತುಗಳ ಲಭ್ಯತೆ ಬಿಟ್ಟರೆ, ಉಳಿದೆಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸಾರ್ವಜನಿಕ ಸ್ಥಳಗಳು ಜನರೇ ಇಲ್ಲದೆ ಬಿಕೋ ಎನ್ನುತ್ತಿದ್ದವು. ಶಾಲಾ-ಕಾಲೇಜುಗಳು, ಮಾಲ್​, ಥಿಯೇಟರ್​, ಹೋಟೆಲ್​ಗಳೆಲ್ಲ ಬಂದ್ ಆಗಿದ್ದವು.

    ಮಾನವನ ಬದುಕಷ್ಟೇ ಅಲ್ಲ, ಸೂರ್ಯನೂ ಕೂಡ ಇಂಥದ್ದೇ ಲಾಕ್​ಡೌನ್​ ಸ್ಥಿತಿಯಲ್ಲಿದ್ದಾನೆ…! ಹೌದು… ಆತನ ಚಟುವಟಿಕಗಳು ಕೂಡ ಕ್ಷೀಣಿಸಿವೆ.
    ಸೂರ್ಯನ ಮೇಲ್ಮೇಯಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತಿಲ್ಲ, ಅಲ್ಲಿನ ಕಾಂತೀಯ ಕ್ಷೇತ್ರದ ಶಕ್ತಿ ಕಡಿಮೆಯಾಗಿದೆ. ಹೀಗಾಗಿ ಸೂರ್ಯನ ಪ್ರಭಾವಲಯ ಅಥವಾ ಸೌರವ್ಯೂಹಕ್ಕೆ ಸೌರಾತೀತ ಕಿರಣಗಳು ಪ್ರವೇಶಿಸುತ್ತಿವೆ. ಅಂದರೆ ಸೂರ್ಯನೂ ಕೂಡ ಥಂಡಾ.. ಥಂಡಾ ಆಗಿದ್ದಾನೆ ಎನ್ನಬಹುದೇನೋ?

    ಇದನ್ನೂ ಓದಿ; ಜುಲೈ 1ರಿಂದ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ 

    ಹೌದು… ಸದ್ಯ ಸೂರ್ಯನಿಗಿದು ‘ಸೋಲಾರ್​ ಮಿನಿಮಂ’ ಕಾಲಘಟ್ಟ. ಅಂದರೆ ಪ್ರತಿ 11 ವರ್ಷದ ಅವಧಿಯನ್ನು ಸೋಲಾರ್​ ಮಿನಿಮಂ ಹಾಗೂ ಸೋಲಾರ್​ ಮ್ಯಾಕ್ಸಿಮಂ ಎಂದು ವಿಂಗಡಿಸಲಾಗುತ್ತದೆ. ಅದರಂತೆ, ಸದ್ಯ ಸೂರ್ಯ ಸೋಲಾರ್​ ಮಿನಿಮಂ ಕಾಲಘಟ್ಟದಲ್ಲಿದ್ದು, ಇದರ ತುರಿಯಾವಸ್ಥೆಯಲ್ಲಿ ನಾವಿದ್ದೇವೆ ಎಂದು ಅಮೆರಿಕದ ನಾಸಾ ತಜ್ಞರು ವಿವರಿಸುತ್ತಾರೆ.

    ಸೂರ್ಯನ ಕಾಂತೀಯ ಕ್ಷೇತ್ರದ ಶಕ್ತಿ ಕುಂದಿದೆ. ಹೀಗಾಗಿ ಇತರ ಸೌರಾತೀತ ಕಿರಣಗಳು ಸೌರವ್ಯೂಹವನ್ನು ಪ್ರವೇಶಿಸುತ್ತಿವೆ ಎಂದು ಖಗೋಳಯಾನಿ ಡಾ. ಟೋನಿ ಫಿಲಿಪ್ಸ್​ ಹೇಳಿದ್ದಾರೆ.

    ಸೂರ್ಯ ‘ ಸೋಲಾರ್​ ಮಿನಿಮಂ’ ಅವಸ್ಥೆಗೆ ಬರಲಿದ್ದಾನೆ 2017ರಲ್ಲಿಯೇ ನಾಸಾ ಭವಿಷ್ಯ ನುಡಿದಿತ್ತು. 2014ರಲ್ಲಿ ಸೂರ್ಯನ ಕಲೆಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, 2019-20ರ ಅವಧಿಯಲ್ಲಿ ಇದರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ ಎಂದು ನಾಸಾ ಹೇಳಿದೆ.

    ಇದನ್ನೂ ಓದಿ; ಈ ಫಾದರ್​ ಚರ್ಚ್​ಗೆ ಬರೋರನ್ನ ಶೂಟ್​ ಮಾಡ್ತಾರೆ…! 

    ಕಾಂತೀಯ ಕ್ಷೇತ್ರದ ಶಕ್ತಿ ಕುಂದುವುದು ಅಥವಾ ಸೂರ್ಯನ ಕಲೆಗಳು ಮಾಯವಾಗುವುದು ಎಂದರೆ ಸೂರ್ಯನ ಶಕ್ತಿಯೇ ಕಡಿಮೆಯಾದಂತಲ್ಲ. ಸೌರ ಚಟುವಟಿಕೆಯಲ್ಲಿ ಕೊಂಚ ಬದಲಾವಣೆಯಾದಂತೆ ಅಷ್ಟೇ. ಸೋಲಾರ್​ ಮಿನಿಮಂ ಅವಧಿಯಲ್ಲಿ ಸೂರ್ಯನ ಹೊರವಲಯದ ಚಟುವಟಿಕೆಗಳನ್ನು ಕಾಣಬಹುದು ಎನ್ನುತ್ತಾರೆ ಖಗೋಳ ಪಂಡಿತರು.

    ಇದರಿಂದ ಏನಾದರೂ ತೊಂದರೆ ಇದೆಯೇ ಎಂದರೆ ಹೌದು ಎನ್ನಬೇಕಾಗುತ್ತದೆ. ಆದರೆ, ಭೂಮಿಯ ಮೇಲಿರುವವರಿಗಲ್ಲ, ಬದಲಾಗಿ ಗಗನಯಾನಿಗಳಿಗೆ. ಸೂರ್ಯನ ಕಾಂತೀಯ ಕ್ಷೇತ್ರ ಕುಂದುವುದರಿಂದ ಗಗನಯಾನಿಗಳಿಗೆ ಸೌರಾತೀತ ಕಿರಣಗಳಿಂದ ದೊರೆಯುತ್ತಿದ್ದ ರಕ್ಷಣೆ ಇಲ್ಲವಾಗುತ್ತದೆ. ಆದರೆ, ಇದು ಆತಂಕಪಡಬೇಕಾದ ವಿಚಾರವೇನೂ ಅಲ್ಲ ಅಂತಾರೆ ತಜ್ಞರು.

    ಕೋವಿಡ್​ ಕಾಲದಲ್ಲಿ ಗಗನಕ್ಕೇರಿದ ಪ್ರಧಾನಿ ಮೋದಿ ಕೀರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts