More

    ಮಾಕ್​ಟೇಲ್ ಸೀಕ್ವೆಲ್​ನಲ್ಲಿ ರಚನಾ ಇರ್ತಾರಾ?

    ಬೆಂಗಳೂರು: ಲಾಕ್​ಡೌನ್ ಆರಂಭಕ್ಕೂ ಮುನ್ನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಬಳಿಕ ಅಮೆಜಾನ್ ಪ್ರೖೆಮ್ಲ್ಲೂ ಅಷ್ಟೇ ಹವಾ ಸೃಷ್ಟಿಸಿತ್ತು ‘ಡಾರ್ಲಿಂಗ್’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್​ಟೇಲ್’. ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್​ಗೆ ಸಿಕ್ಕಷ್ಟು ಖ್ಯಾತಿ, ‘ಹೆಂಗೆ ನಾವು …’ ಹುಡುಗಿ ರಚನಾ ಇಂದರ್​ಗೂ ಸಿಕ್ಕಿತ್ತು. ಇದೀಗ ಇದೇ ನಟಿ, ‘ಲವ್ ಮಾಕ್​ಟೇಲ್’ ಸೀಕ್ವೆಲ್​ನಲ್ಲಿ ಇರ್ತಾರಾ ಇಲ್ವಾ ಎಂಬುದು ಸ್ವತಃ ಅವರಿಗೇ ಗೊತ್ತಿಲ್ಲವಂತೆ!

    ಇದನ್ನೂ ಓದಿ: ಸಲ್ಮಾನ್​ ಖಾನ್​ ಜತೆ ಕ್ವಾರಂಟೈನ್​ ಕಷ್ಟ ಸುಖ…

    ‘ಲವ್ ಮಾಕ್​ಟೇಲ್’ ಚಿತ್ರದಲ್ಲಿ ನಾಯಕನ ಜೀವನದ ಕಥೆಯನ್ನು ಪಯಣದ ಜತೆಗೆ ಹಂಚಿಕೊಳ್ಳುವ ಹುಡುಗಿಯಾಗಿ ರಚನಾ ಕಾಣಿಸಿಕೊಂಡಿದ್ದಾರೆ. ಮೊದಮೊದಲು ಸಿನಿಮಾ ನೋಡುಗರಿಗೆ, ಕ್ಲೈಮ್ಯಾಕ್ಸ್​ನಲ್ಲಿ ನಾಯಕ ‘ಹೆಂಗೆ ನಾವು …’ ಹುಡುಗಿಯನ್ನೇ ಮದುವೆಯಾಗಬಹುದು ಎಂದು ಊಹಿಸಿದ್ದರು. ಆದರೆ, ಅಲ್ಲಿ ಅದೆಲ್ಲವೂ ಉಲ್ಟಾ ಆಗಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗವನ್ನು ಬರೆಯಲು ಕುಳಿತಿದ್ದಾರೆ ಕೃಷ್ಣ. ಈ ಸೀಕ್ವೆಲ್​ನಲ್ಲೂ ರಚನಾ ಪಾತ್ರ ಮುಂದುವರೆಯುತ್ತದಾ? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ರಚನಾ ಮುಂದಿಟ್ಟರೆ, ಸದ್ಯಕ್ಕೆ ಗೊತ್ತಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.

    ‘‘ಲವ್ ಮಾಕ್​ಟೇಲ್’ ಸೀಕ್ವೆಲ್​ನ ಕೆಲಸ ಶುರುವಾಗಿದೆ. ಆದರೆ, ಅದರಲ್ಲಿ ನಾನು ಇದೀನಾ ಇಲ್ಲವಾ ಎಂಬುದು ನನಗೇ ಗೊತ್ತಿಲ್ಲ. ಕಥೆಯನ್ನು ಯಾವ ರೀತಿ ಹೇಳುತ್ತಾರೆ ಎಂಬುದರ ಮೇಲೆ ನನ್ನ ಪಾತ್ರ ನಿರ್ಧಾರವಾಗಲಿದೆ’ ಎಂದು ಹೇಳಿಕೊಳ್ಳುತ್ತಾರೆ ರಚನಾ.

    ಇದನ್ನೂ ಓದಿ: ರಷ್ಯನ್ ಭಾಷೆಯ ‘ಬಾಹುಬಲಿ – 2’ ನೋಡಿದ್ದೀರಾ?

    ಮೊದಲ ಸಿನಿಮಾದಲ್ಲೇ ಒಳ್ಳೇ ರೆಸ್ಪಾನ್ಸ್ ಸಿಕ್ಕಿದ್ದಕ್ಕೆ ಮತ್ತು ಪಾತ್ರದ ಮೂಲಕವೇ ಹೆಚ್ಚು ಗುರುತಿಸಿಕೊಂಡಿದಕ್ಕೆ ತುಂಬು ಖುಷಿಯಲ್ಲಿದ್ದಾರೆ ರಚನಾ. ‘ಸಿನಿಮಾ ಶೂಟಿಂಗ್ ಶುರುವಾದಾಗ, ಎಲ್ಲ ಡೈಲಾಗ್​ಗಳಂತೆ, ‘ಹೆಂಗೆ ನಾವು’ ಡೈಲಾಗ್ ಇದೆ ಎಂದುಕೊಂಡು ಸುಮ್ಮನಾಗಿದ್ದೆ. ಸಿನಿಮಾ ಬಿಡುಗಡೆ ಆದಮೇಲೂ ಅಷ್ಟಾಗಿ ಅದರ ಬಗ್ಗೆ ವಿಚಾರಿಸಿರಲಿಲ್ಲ. ಯಾವಾಗ ಅಮೆಜಾನ್​ನಲ್ಲಿ ಪ್ರಸಾರವಾಯಿತೋ, ಬಗೆಬಗೆ ಮೀಮ್ಳು ಹರಿದಾಡಲಾರಂಭಿಸಿದವು. ಒಬ್ಬ ನಟಿಯಾದವಳಿಗೆ ಆರಂಭದಲ್ಲೇ ಇಂಥ ಅವಕಾಶ ಯಾರಿಗೆ ಸಿಗುತ್ತೇ ಹೇಳಿ?’ ಎಂದು ಅಂದಿನ ಆ ಖುಷಿಯನ್ನು ಈಗಲೂ ಸವಿಯುತ್ತಿದ್ದಾರೆ ರಚನಾ.

    ಇನ್ನು ಲಾಕ್​ಡೌನ್ ಹಿನ್ನೆಲೆಯಲ್ಲಿ ಹುಟ್ಟೂರು ಮಡಿಕೇರಿಯಲ್ಲಿ ಲಾಕ್ ಆಗಿರುವ ರಚನಾ, ಆ ಅವಧಿಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರಂತೆ. ‘ಈ ಮೊದಲು ಅಡುಗೆ ಮನೆಯತ್ತ ಸುಳಿಯದ ನಾನು, ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ಬಗೆಬಗೆ ಪಾಸ್ಟ್ ಫುಡ್ ಮಾಡುವುದನ್ನು ಕಲಿತಿದ್ದೇನೆ. ಮನೆ ಕೆಲಸ, ಸಿನಿಮಾ, ಓದು ಹೀಗೆ ಹಲವು ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts