More

    ಸುಶಾಂತ್ ಆತ್ಮಹತ್ಯೆಯ ಹಿಂದೆ ಸ್ವಜನಪಕ್ಷಪಾತವಿದೆಯೇ? ಪೊಲೀಸ್ ವಿಚಾರಣೆ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಅವರ ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ರೆಕಾರ್ಡಿಂಗ್ ಅನ್ನು ವಶಪಡಿಸಿಕೊಂಡಿದ್ದಾರೆ.
    ನಟನ ಮನೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿಲ್ಲ ಎಂಬುದು ತಿಳಿದುಬಂದಿದ್ದು, . ಇಲ್ಲಿಯವರೆಗೆ ಪೊಲೀಸರು ಈ ಪ್ರಕರಣದಲ್ಲಿ 34 ಹೇಳಿಕೆಗಳನ್ನು ದಾಖಲಿಸಿದ್ದಾರೆ. 
    ಕಳೆದ ವಾರ ಮುಂಬೈ ಪೊಲೀಸರು ಈ ವಿಷಯದಲ್ಲಿ ಹೇಳಿಕೆಯನ್ನು ದಾಖಲಿಸಲು ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಅವರನ್ನು ಪೊಲೀಸ್ ಠಾಣೆಗೆ ಬರಲು ಹೇಳಿದ್ದರು.

    ಇದನ್ನೂ ಓದಿ: ರಾತ್ರಿ ವೇಳೆಯೂ ಕಾರ್ಯಾಚರಿಸುವ ಸಾಮರ್ಥ್ಯ ಪ್ರದರ್ಶನಕ್ಕಿಳಿದ ಭಾರತ


    ಭನ್ಸಾಲಿ ಸೋಮವಾರ ಬಾಂದ್ರಾ ಪೊಲೀಸ್ ಠಾಣೆಗೆ ಆಗಮಿಸಿದ್ದು, ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಮುಂಬೈ ಪೊಲೀಸರ ಪ್ರಕಾರ, ಭನ್ಸಾಲಿ ತಮ್ಮ ನಾಲ್ಕು ಚಿತ್ರಗಳಲ್ಲಿ ಸುಶಾಂತ್ ಸಿಂಗ್ ರಜಪೂತ್‌ಗೆ ಅವಕಾಶ ನೀಡಲು ಯೋಜಿಸುತ್ತಿದ್ದರು. ಆದರೆ ಸುಶಾಂತ್ ಬಿಜಿಯಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ ಮತ್ತು ಆ ಚಿತ್ರಗಳು ಬೇರೆ ನಟರಿಗೆ ಹೋದವು.
    ರಾಸಾಯನಿಕ ವಿಶ್ಲೇಷಣೆಗಾಗಿ ಸುಶಾಂತ್ ಅವರ ದೇಹದ ಕೆಲ ಅಂಗಾಂಗಗಳನ್ನು ಮುಂಬೈ ಪೊಲೀಸರು ಕಳುಹಿಸಿದ್ದು, ವರದಿಗಳು ಇನ್ನೂ ಬರಬೇಕಿದೆ. ಮುಂಬೈ ಪೊಲೀಸರು ಟ್ವಿಟ್ಟರ್​ಗೆ ಪತ್ರ ಬರೆದಿದ್ದು, ಸುಶಾಂತ್ ಅವರ ಟ್ವಿಟ್ಟರ್ ಖಾತೆಯಿಂದ ಕೆಲವು ಟ್ವೀಟ್​​​ಗಳ ಬಗ್ಗೆ ವಿಚಾರಿಸಿದ್ದಾರೆ. ಟ್ವಿಟರ್‌ನಿಂದ ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ.

    ಇದನ್ನೂ ಓದಿ: ಮಹಾಭಾರತ ಯುದ್ಧಕ್ಕಿಂತ ಕಠಿಣ ಕರೊನಾ ವಿರುದ್ಧದ ಯುದ್ಧ; ಮೋದಿಯವರನ್ನು ವ್ಯಂಗ್ಯ ಮಾಡಿದ ಶಿವಸೇನೆ


    ಜೂನ್ 14 ರಂದು ಸುಶಾಂತ್ ಮುಂಬೈ ಅಪಾರ್ಟ್​​ಮೆಂಟ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ನಟನ ಸಾವು ಹಿಂದಿ ಚಲನಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತ ಮತ್ತು ಹೊರಗಿನವರ ಬಗ್ಗೆ ಉದ್ಯಮದಲ್ಲಿ ಪಕ್ಷಪಾತದ ಕುರಿತು ಚರ್ಚೆಗೆ ಗ್ರಾಸವಾಗಿದೆ.
    ಸುಶಾಂತ್ ಇಂತಹ ದುರಂತದ ಹೆಜ್ಜೆ ಇಡಲು ಕಾರಣವಾಗಿರಬಹುದಾದ ಯಾವುದಾದರೂ ವೃತ್ತಿಪರ ಪೈಪೋಟಿಯ ಇದ್ದಿರಬಹುದೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ ಉದ್ಯೋಗಿಗಳನ್ನು ಪ್ರಶ್ನಿಸಿದ್ದಾರೆ ಮತ್ತು ಸುಶಾಂತ್ ಅವರ ವೈಆರ್​​ಎಫ್ ಜೊತೆಗಿನ ಒಪ್ಪಂದದ ಪ್ರತಿಯನ್ನು ಪರಿಶೀಲಿಸಿದ್ದಾರೆ.  


    https://www.vijayavani.net/goa-doctor-hugs-covid-recovered-patients-as-parting-gesture/ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts