More

    ಮಹಾಭಾರತ ಯುದ್ಧಕ್ಕಿಂತ ಕಠಿಣ ಕರೊನಾ ವಿರುದ್ಧದ ಯುದ್ಧ; ಮೋದಿಯವರನ್ನು ವ್ಯಂಗ್ಯ ಮಾಡಿದ ಶಿವಸೇನೆ

    ಮುಂಬೈ: ಭಾರತದಲ್ಲಿ ದಿನೇದಿನ ಹೆಚ್ಚುತ್ತಿರುವ ಕರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತ ಇನ್ನು 21 ದಿನದಲ್ಲಿ ಕರೊನಾ ವಿರುದ್ಧ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ 100ಕ್ಕೂ ಹೆಚ್ಚು ದಿನಗಳು ಕಳೆದು ಹೋದವು. ಸಾಂಕ್ರಾಮಿಕ ಕಾಯಿಲೆ ಇನ್ನೂ ಹಾಗೇ ಇದೆ. ಅಷ್ಟೇ ಏಕೆ ಹೆಚ್ಚುತ್ತಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿದೆ.
    ಕೊವಿಡ್​-19 ವಿರುದ್ಧ ಹೋರಾಟ ಸುಲಭವಲ್ಲ. ಅಂದು 18 ದಿನಗಳ ಕಾಲ ನಡೆದಿದ್ದ ಮಹಾಭಾರತ ಯುದ್ಧಕ್ಕೀ ಈ ಕರೊನಾ ವಿರುದ್ಧದ ಹೋರಾಟ ಕಠಿಣವಾದದ್ದು ಎಂದು ಬರೆದಿದೆ.

    ಕರೊನಾ ವೈರಸ್​ಗೆ ಅಷ್ಟು ಬೇಗ ಲಸಿಕೆ ಸಿಗುವುದಿಲ್ಲ. ಕರೊನಾ 2021ರವರೆಗೂ ಮುಂದುವರಿಯಲಿದೆ ಎಂದು ಹೇಳಿರುವ ಶಿವಸೇನೆ, ಆರ್ಥಿಕತೆಯಲ್ಲಿ ಸೂಪರ್​ ಪವರ್​ ಆಗುವ ಕನಸು ಕಾಣುತ್ತಿರುವ ಭಾರತಕ್ಕೆ ಕೊವಿಡ್​-19 ಅರಿದೊಡ್ಡ ಆಘಾತ ತಂದೊಡ್ಡಿದೆ ಎಂದು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

    ಮಹಾರಾಷ್ಟ್ರದಲ್ಲಿ ಕರೊನಾ ವೈರಸ್​ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಕೆಲವೇ ಪ್ರದೇಶಗಳಲ್ಲಿ ಮಾತ್ರ ತೀರ ಗಂಭೀರ ಸ್ಥಿತಿ ಇದೆ ಎಂದು ತಿಳಿಸಿದೆ.(ಏಜೆನ್ಸೀಸ್​)

    ಬಲವಾದ ಕಾರಣ ಹೊತ್ತು ನಾಡಿನ ಅಭಿಮಾನಿಗಳನ್ನು ಭೇಟಿ ಮಾಡಲು ಬರುತ್ತಿದ್ದಾರೆ ಕಿಚ್ಚ ಸುದೀಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts