More

    ನೀರಾವರಿ ಸೌಲಭ್ಯಕ್ಕೆ ಪ್ರಮುಖ ಆದ್ಯತೆ

    ನರಗುಂದ: ಬೆಣ್ಣೆಹಳ್ಳಕ್ಕೆ ಸೇತುವೆ ಇಲ್ಲದ್ದರಿಂದ ಖಾನಾಪೂರ ಭಾಗದ ರೈತರು ಜಮೀನಿಗೆ ತೆರಳಲು ಹರಸಾಹಸ ಪಡಬೇಕಾಗಿತ್ತು. ಹೀಗಾಗಿ ದೊಡ್ಡ ಮೊತ್ತದ ಅನುದಾನದಲ್ಲಿ ಮಹತ್ವದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಖಾನಾಪೂರ-ಗಂಗಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ, ಸಂಘದ ನೂತನ ಕಟ್ಟಡ ಉದ್ಘಾಟನೆ, ಜಾಕ್​ವೆಲ್​ಗಳಿಗೆ ಪೈಪ್​ಲೈನ್ ಅಳವಡಿಸುವುದು, ಖಾನಾಪೂರದ ಬೆಣ್ಣೆಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7 ಏತ ನೀರಾವರಿ ಯೋಜನೆಗೆ ಜಾರಿಗೊಳಿಸಿದ್ದರು. ಗುಣಮಟ್ಟವಿಲ್ಲದ ಪೈಪ್​ಲೈನ್ ಅಳವಡಿಸಿದ್ದರಿಂದ ಟೇಲೆಂಡ್ ಪ್ರದೇಶಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ. ಹೀಗಾಗಿ 86 ಕೋಟಿ ರೂ. ವೆಚ್ಚದಲ್ಲಿ ಕಬ್ಬಿಣದ ಪೈಪ್​ಲೈನ್ ಅಳವಡಿಸಲಾಗುವುದು. ಇದರಿಂದ 25 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದರು.

    ಎಂ.ಎಚ್.ತಿಮ್ಮನಗೌಡ್ರ ಮಾತನಾಡಿ, ಖಾನಾಪೂರ ಸಹಕಾರಿ ಸಂಘದಿಂದ 5 ಕೋಟಿ ರೂಪಾಯಿ ಸಾಲ ವಿತರಣೆ, 22 ಟ್ರ್ಯಾಕ್ಟರ್, ರಿಯಾಯಿತಿ ದರದಲ್ಲಿ ರಸಗೊಬ್ಬರಗಳ ಪೂರೈಕೆ, ಉಚಿತ ಪಡಿತರ ವಿತರಿಸಲಾಗುತ್ತಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜೆ.ಪಿ. ಪಾಟೀಲ, ಎಸ್.ಬಿ. ಕರಿಗೌಡ್ರ, ಪ್ರವೀಣ ಯಾವಗಲ್ಲ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪ್ರೇಮಾ ತಿಮ್ಮನಗೌಡ್ರ ಮಾತನಾಡಿದರು. ಸಂಘದ ಶತಮಾನೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ, ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ವಿತರಣೆ ಮಾಡಲಾಯಿತು. ರಾಜುಗೌಡ ಕೆಂಚನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ನಿಂಗಣ್ಣ ಗಾಡಿ, ಎಸ್.ಬಿ. ಯಲ್ಲಪ್ಪಗೌಡ್ರ, ಗುರುಪಾದಪ್ಪ ಕುರಹಟ್ಟಿ, ದ್ಯಾಮಣ್ಣ ಕಾಡಪ್ಪನವರ, ಎಂ.ಎಸ್. ಪಾಟೀಲ, ತಮ್ಮಣ್ಣ ಮದಗುಣಕಿ, ಶಂಕರಗೌಡ ಕಗಧಾಳ, ಸುರೇಂದ್ರಗೌಡ ಪಾಟೀಲ, ಗುರುನಾಥಗೌಡ ಮಲ್ಲನಗೌಡ್ರ, ಬಸಪ್ಪ ತಡಸಿ, ನೀಲಪ್ಪ ಸುರಕೋಡ, ಶಿವಕುಮಾರಗೌಡ ಪಾಟೀಲ, ಎಸ್.ಡಿ. ಕೊಳ್ಳಿಯವರ, ವಿನೋದಕುಮಾರ ಜಾಲಿಹಾಳ, ಪಿಡಿಒ ಈಶ್ವರಗೌಡ ಪಾಟೀಲ ಇದ್ದರು.

    ಫೋಟೋ ಶಿರ್ಷಿಕೆ) 15 ಎನ್​ಆರ್​ಡಿ-1ಎ,1ಬಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts