More

    ಕಾರವಾರದಲ್ಲಿ 13 ವರ್ಷದಿಂದ ಬಿದ್ದಿದ್ದ ಅದಿರು ರಫ್ತಿಗೆ ಸಿದ್ಧತೆ

    ಕಾರವಾರ: ಇಲ್ಲಿನ ಬೈತಖೋಲ್‌ ಬಂದರಿನಲ್ಲಿ ಬಿದ್ದಿದ್ದ ಅದಿರು ಅನ್ನು ಸಾಗಣೆ ಮಾಡಲು ನ್ಯಾಯಾಲಯ ಅನುಮತಿ ನೀಡಿದ್ದು, ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಂಗಳವಾರ ಪ್ರಾರಂಭವಾಗಿದೆ.

    ಸದ್ಯ ಬಂದರು ಜಟ್ಟಿ ಪ್ರದೇಶದಲ್ಲಿರುವ ಅದಿರನ್ನು ಸಾಗಿಸಿ ಬೇರೆಡೆ ದಾಸ್ತಾನು ಮಾಡಲಾಗುತ್ತಿದೆ. ಅದಿರು ಅಳೆಯಲು ವೇ ಬ್ರಿಜ್‌ ಕೂಡ ಸಿದ್ಧ ಮಾಡಲಾಗಿದ್ದು, ಒಂದೆರಡು ದಿನದಲ್ಲಿ ರಫ್ತು ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ.

    ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರು ಪ್ರದೇಶದಲ್ಲಿ 13 ವರ್ಷಗಳಿಂದ ಬಿದ್ದಿರುವ 30 ಸಾವಿರ ಮೆಟ್ರಿಕ್ ಟನ್ ಅದಿರನ್ನು ಹರಾಜು ಮಾಡಲಾಗಿದ್ದು, ಗ್ಲೋರಿಯಸ್ ಶಿಪ್ಪಿಂಗ್ ಕಂಪನಿ ಅದನ್ನು ಸುಮಾರು 8 ಕೋಟಿ ರೂ.ಗೆ ಖರೀದಿ ಮಾಡಿದೆ.

    ಹಣವನ್ನು ನ್ಯಾಯಾಲಯಕ್ಕೆ ಭರಣ ಮಾಡಲಾಗಿದ್ದು, ಅದಿರು ಸಾಗಣೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
    ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2020 ರಿಂದ ಸತತವಾಗಿ ಹರಾಜು ಕರೆದು ಅಕ್ರಮ ಅದಿರನ್ನು ವಿಲೇವಾರಿ ಮಾಡಲು ಯತ್ನ ನಡೆಸಿತ್ತು. ಇತ್ತೀಚೆಗೆ ನಿಗದಿಯಾಗಿದ್ದ 6 ನೇ ಬಾರಿಯ ಇ ಹರಾಜಿನಲ್ಲಿ ಬಂದರಿನ ಜಟ್ಟಿ ಹಾಗೂ ಬಂದರು ನಿರ್ದೇಶಕ ಕಚೇರಿಯ ಹಿಂದೆ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 18 ರಾಶಿಗಳನ್ನು ಹರಾಜು ಮಾಡಲಾಗಿದೆ. ಅದಿರನ್ನು ಹಂತ, ಹಂತವಾಗಿ ಖಾಲಿ ಮಾಡಲು 2 ತಿಂಗಳು ಬೇಕಾಗಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಿಂದ ಸರ್ಕಾರಕ್ಕೆ ಸುಮಾರು 1.5 ಕೋಟಿ ರೂ. ರಾಜಧನ ಸಂದಾಯವಾಗಲಿದೆ.
    13 ವರ್ಷಗಳಿಂದ ಬಿದ್ದಿದ್ದ ಅದಿರು:
    ದಶಕಗಳ ಹಿಂದೆ ಬಳ್ಳಾರಿಯಿಂದ ಕಾರವಾರ ಬಂದರಿನ ಮೂಲಕ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಅದಿರಿನ ರಫ್ತು ನಡೆಯುತ್ತಿತ್ತು. ಅಕ್ರಮವಾಗಿ ಅದಿರು ತೆಗೆದು ಸಾಗಣೆ ಮಾಡುತ್ತಿರುವ ಆರೋಪದ ಮೇಲೆ ಲೋಕಾಯುಕ್ತ ಸೂಚನೆ ಮೇರೆಗೆ ಕಾರವಾರದಲ್ಲಿ ಸುಮಾರು 60 ಸಾವಿರ ಟನ್ ಅದಿರನ್ನು ಅರಣ್ಯ ಇಲಾಖೆಯು 2010 ರ ಮಾರ್ಚ್ 20 ರಂದು ವಶಕ್ಕೆ ಪಡೆದಿತ್ತು. ಆದರೆ, ಬಂದರು ಇಲಾಖೆಯ ಸಂರಕ್ಷಣೆಯಲ್ಲಿದ್ದ ವಶಕ್ಕೆ ಪಡೆದ ಒಂದಿಷ್ಟು ಅದಿರು ನಾಪತ್ತೆಯಾಗಿದೆ ಎಂದು ಅದೇ ವರ್ಷ ಜೂನ್ 8 ರಂದು ಕಾರವಾರ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು. ಪ್ರಕರಣ ಮೊದಲು ಸಿಐಡಿಗೆ ಹಸ್ತಾಂತರವಾಗಿತ್ತು. ಅಕ್ರಮ ಅದಿರು ಸಾಗಣೆ ಹಾಗೂ ವಶಪಡಿಸಿಕೊಂಡ ಅದಿರು ಕಳ್ಳಸಾಗಣೆ ಸಂಬಂಧ ಸಿಐಡಿ, ಸಿಬಿಐಗಳು ವಿಚಾರಣೆ ನಡೆಸಿವೆ. ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಈ ಸಂಬಂಧ ಇದುವರೆಗೂ ಯಾವುದೇ ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಇದರಿಂದ ಕಳಂಕಿತ ಅದಿರು ಬಂದರಿನಲ್ಲೇ ಬಿದ್ದಿತ್ತು.

    ಇದನ್ನೂ ಓದಿ: ಕಳಂಕಿತ ಅದಿರು ಮುಕ್ತಿ ಕಾಣುವ ಹಂತದಲ್ಲಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts