More

    ಕರೊನಾ ಮೃತರನ್ನು ಹೂಳಲು ಇರಾನ್​ನಲ್ಲಿ ಅಗೆದಿರುವ ಸಾಮೂಹಿಕ ಸಮಾಧಿಯನ್ನು ಬಾಹ್ಯಾಕಾಶದಿಂದಲೂ ನೋಡಬಹುದು!

    ತೆಹ್ರಾನ್​: ಕರೊನಾ ವೈರಸ್​ನಿಂದ ಮೃತಪಟ್ಟವರನ್ನು ಹೂಳಲು ಇರಾನ್​ನಲ್ಲಿ ಅಗೆಯಲಾಗಿರುವ ಸಾಮೂಹಿಕ ಸಮಾಧಿಯು ಎಷ್ಟು ದೊಡ್ಡದಿದೆ ಎಂದರೆ ಬಾಹ್ಯಾಕಾಶದಿಂದಲೂ ಕಾಣುತ್ತದೆ ಎಂಬುದಕ್ಕೆ ಉಪಗ್ರಹ ಚಿತ್ರಗಳು ಸಾಕ್ಷಿಯಾಗಿವೆ.

    ಉಪಗ್ರಹ ಚಿತ್ರದಲ್ಲಿರುವುದು ಇರಾನ್​ ಪವಿತ್ರ ನಗರ ಕೋಮ್​ನಲ್ಲಿ ತೆಗೆಯಲಾಗಿರುವ ಬೃಹತ್ ಸಮಾಧಿ ಎಂದು ತಿಳಿದುಬಂದಿದೆ. ಫೆಬ್ರವರಿ ಮಧ್ಯದಿಂದ ಇರಾನ್​ನಲ್ಲಿ ಕರೊನಾ ವೈರಸ್​ ಸ್ಪೋಟಗೊಂಡಿದೆ.

    ಈ ಬಗ್ಗೆ ವಾಷಿಂಗ್ಟನ್​ ಪೋಸ್ಟ್​ನೊಂದಿಗೆ ಮಾತನಾಡಿರುವ ಪರಿಣಿತರು 300 ಅಡಿಯ ಕಂದಕಗಳನ್ನು ತೆಗೆಯಲಾಗಿದೆ. ನಗರದಲ್ಲಿ ಕರೊನಾದಿಂದ ಮರಣ ಹೊಂದಿದವರನ್ನು ಹೂಳಲು ಸಾಮೂಹಿಕ ಸಮಾಧಿ ಅಗೆಯಲಾಗಿದೆ ಎಂದಿದ್ದಾರೆ. ಇನ್ನು ಬೃಹತ್​ ಸಮಾಧಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಠಿ ನೀಡಿದೆ.

    ಚೀನಾದಲ್ಲಿ ಸ್ಪೋಟಗೊಂಡು ಜಗತ್ತಿಗೆ ಹರಡಿರುವ ಕರೊನಾದಿಂದ ಭಾರಿ ಪರಿಣಾಮ ಎದುರಿಸಿದ ದೇಶಗಳಲ್ಲಿ ಇರಾನ್​ ಕೂಡ ಒಂದಾಗಿದೆ. ಅಧಿಕೃತವಾಗಿ ಹೇಳಿರುವಂತೆ 429 ಮಂದಿ ಸಾವಿಗೀಡಾಗಿದ್ದಾರೆ.‘

    ಉಪಗ್ರಹ ಫೋಟೋದಲ್ಲಿರುವಂತೆ ಸಮಾಧಿಯ ಪಕ್ಕದಲ್ಲಿ ರಾಶಿಯಾಗಿ ಬಿದ್ದಿರುವ ಬಿಳಿ ವಸ್ತುವನ್ನು ಸುಣ್ಣದ ಪೂರೈಕೆ ಎನ್ನಲಾಗಿದೆ. ಇದನ್ನು ಕೆಲವೊಮ್ಮೆ ಸಾಮೂಹಿಕ ಸಮಾಧಿಗಳಲ್ಲಿ ಬಳಸಲಾಗುತ್ತದೆ ಎಂದು ವಿಶ್ಲೇಷಕರು ಸೂಚಿಸಿದ್ದಾರೆ. ಸುಣ್ಣವು ದೇಹದ ಕೊಳೆತವನ್ನು ನಿಧಾನಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಲವು ಆರೋಗ್ಯ ಅಧಿಕಾರಿಗಳು ಕರೊನಾ ವೈರಸ್ ಪ್ರಕರಣಗಳಲ್ಲಿ ಶವಗಳನ್ನು ನಿರ್ವಹಿಸುವ ಬಗ್ಗೆಯೂ ಎಚ್ಚರಿಕೆ ನೀಡುತ್ತಾರೆ.

    ಇರಾನಿಯನ್​ ಅಧಿಕಾರಿಗಳು ಕೂಡ ವೈರಸ್​ನಿಂದ ಮೃತಪಟ್ಟವರನ್ನು ಹೂಳುವಾಗು ಸುಣ್ಣವನ್ನು ಬಳುಸುವುದಾಗಿ ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಕರೊನಾ ಮೃತರನ್ನು ಹೂಳಲು ಇರಾನ್​ನಲ್ಲಿ ಅಗೆದಿರುವ ಸಾಮೂಹಿಕ ಸಮಾಧಿಯನ್ನು ಬಾಹ್ಯಾಕಾಶದಿಂದಲೂ ನೋಡಬಹುದು! ಕರೊನಾ ಮೃತರನ್ನು ಹೂಳಲು ಇರಾನ್​ನಲ್ಲಿ ಅಗೆದಿರುವ ಸಾಮೂಹಿಕ ಸಮಾಧಿಯನ್ನು ಬಾಹ್ಯಾಕಾಶದಿಂದಲೂ ನೋಡಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts