More

    ದಾವೂದ್ ಆಪ್ತ ಇಕ್ಬಾಲ್ ಮಿರ್ಚಿಯ 500 ಕೋಟಿ ರೂಪಾಯಿ ಆಸ್ತಿ ಜಾರಿ ನಿರ್ದೇಶನಾಲಯದ ವಶದಲ್ಲಿ ಭದ್ರ

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಇಕ್ಬಾಲ್ ಮಿರ್ಚಿಗೆ ಸೇರಿದ 500 ಕೋಟಿ ರೂಪಾಯಿ ಮೌಲ್ಯದ ಮೂರು ಆಸ್ತಿಗಳು ಜಾರಿ ನಿರ್ದೇಶನಾಲಯ(ಇಡಿ) ಸಂಪೂರ್ಣ ವಶಪಡಿಸಿಕೊಂಡಿದೆ. ಮುಂಬೈನಲ್ಲಿರುವ ರಬಿಯಾ ಮ್ಯಾನ್ಶನ್​, ಮರಿಯಮ್ ಲಾಡ್ಜ್, ಸೀ ವ್ಯೂವ್ ಕಟ್ಟಡ ಸಂಕೀರ್ಣಗಳು ಈ ಆಸ್ತಿಯಲ್ಲಿ ಅಡಕವಾಗಿವೆ.

    ಇಡಿ 2005ರಲ್ಲಿ ತನಿಖೆ ನಡೆಸಿದ ವೇಳೆ, ಸರ್ ಮೊಹಮ್ಮದ್ ಯೂಸುಫ್ ಟ್ರಸ್ಟ್​ ಜತೆಗಿನ ಮಿರ್ಚಿ ನಂಟು ಬಹಿರಂಗವಾಗಿದ್ದು, ಈ ಮೂರು ಕಟ್ಟಡಗಳ ಮಾಲೀಕತ್ವದ ಅಸಲೀಯತ್ತು ಬಯಲಾಗಿದೆ. ಕಳೆದ ಅಕ್ಟೋಬರ್​ನಲ್ಲಿ ಮಿರ್ಚಿ ಸಂಬಂಧಿಕರಿಗೆ ಸೇರಿದ ಏಳು ಸ್ಥಿರಾಸ್ತಿ ಹಾಗೂ ಏಳು ಬ್ಯಾಂಕ್ ಖಾತೆಗಳನ್ನೂ ಕೇಸ್​ಗೆ ಅಟ್ಯಾಚ್ ಮಾಡಿಕೊಂಡಿತ್ತು. ಇವುಗಳ ಒಟ್ಟು ಮೌಲ್ಯ 22.42 ಕೋಟಿ ರೂಪಾಯಿ.

    ಇದನ್ನೂ ಓದಿ: ಹೈಕೋರ್ಟ್​ ಕೆಂಗಣ್ಣಿಗೆ ಗುರಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ- ₹5 ಲಕ್ಷ ದಂಡ

    ಈ ರೀತಿ ಅಟ್ಯಾಚ್ ಮಾಡಿಕೊಂಡ ಆಸ್ತಿಗಳ ಪೈಕಿ ಒಂದು ಸಿನಿಮಾ ಹಾಲ್ (ನ್ಯೂ ರೋಶನ್ ಟಾಕೀಸ್), ಒಂದು ಹೋಟೆಲ್​, ಒಂದು ಫಾರ್ಮ್ ಹೌಸ್​ , ಎರಡು ಬಂಗಲೆ ಮತ್ತು ಒಂದು ನಿರ್ಮಾಣ ಹಂತದ ಹೋಟೆಲ್​ ಹಾಗೂ ಪಂಚಗಣಿಯಲ್ಲಿರುವ 3.5 ಎಕರೆ ಜಮೀನು ಸೇರಿಕೊಂಡಿದೆ. ಇದಕ್ಕೂ ಮೊದಲು ದುಬೈನಲ್ಲಿರುವ 200 ಕೋಟಿ ರೂಪಾಯಿ ಮೌಲ್ಯದ 15 ಆಸ್ತಿಗಳನ್ನು ಇಡಿ ಅಟ್ಯಾಚ್ ಮಾಡಿತ್ತು. 2019ರ ಸೆಪ್ಟೆಂಬರ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಮಿರ್ಚಿ ಮತ್ತು ಇತರರ ವಿರುದ್ಧ ಹಣಕಾಸಿನ ಅಕ್ರಮ ಕೇಸ್​ ದಾಖಲಿಸಿತ್ತು. (ಏಜೆನ್ಸೀಸ್)

    ಪ್ರಧಾನಿ ಮೋದಿ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿ ಗೋಳೋ ಎನ್ನುತ್ತಿರುವ ಯೋಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts