More

    ಮಹಿಳಾ ಐಪಿಎಲ್‌ನಲ್ಲಿ ಆರು ತಂಡಗಳಿರಲಿ ಎಂದ ಸ್ಮತಿ

    ನವದೆಹಲಿ: ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಆಟಗಾರರ ಪಾಲಿಗೆ ಐಪಿಎಲ್ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿದೆ. ವಿಶ್ವಮಟ್ಟದಲ್ಲಿ ಜನಪ್ರಿಯಗೊಂಡಿರುವ ಐಪಿಎಲ್‌ನಲ್ಲಿ ಆಡುವುದೇ ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿದೆ. ಪುರುಷರ ಮಾದರಿಯಲ್ಲೇ ಮಹಿಳಾ ಲೀಗ್ ಆರಂಭಿಸಲು ಬಿಸಿಸಿಐ ಹಲವು ಪ್ರಯೋಗ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಕಳೆದೆರಡು ವರ್ಷದಿಂದ 3 ತಂಡಗಳೊಂದಿಗೆ ಮಹಿಳಾ ಲೀಗ್ ನಡೆಸಿಕೊಂಡು ಬರಲಾಗುತ್ತಿದೆ. ಇದರ ಬದಲಾಗಿ ಮಹಿಳೆಯರಿಗೂ ಪುರುಷರ ಮಾದರಿಯಲ್ಲೇ ಲೀಗ್ ನಡೆಸಬೇಕೆಂದು ಸ್ಫೋಟಕ ಎಡಗೈ ಬ್ಯಾಟುಗಾರ್ತಿ ಸ್ಮತಿ ಮಂದನಾ ವಿಶ್ವ ಕ್ರಿಕೆಟ್‌ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ರಾಷ್ಟ್ರೀಯ ತಂಡಕ್ಕೆ ಹೋಗಿ ಬಂದ್ಮೇಲೆ ಹೆಸರೇ ಬದಲಾಯ್ತು!

    23 ವರ್ಷದ ಸ್ಮತಿ ಮಂದನಾ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್‌ಬಾಷ್ ಲೀಗ್, ಇಂಗ್ಲೆಂಡ್‌ನ ಮಹಿಳಾ ಟಿ20 ಲೀಗ್‌ನಲ್ಲಿ ಆಡಿದ ಅನುಭವ ಹೊಂದಿರುವ ಈ ಮುಂಬೈ ಆಟಗಾರ್ತಿಗೆ ಚುಟಕು ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಪುರುಷರ ಮಾದರಿಯಲ್ಲೇ ಮಹಿಳೆಯರು ಐಪಿಎಲ್‌ನಲ್ಲಿ ಮಿಂಚಬೇಕು ಎಂದು ಬಿಸಿಸಿ ಪೊಕಾಸ್ಟ್‌ನ ದೋಸ್ತ ಕಾರ್ಯಕ್ರಮದಲ್ಲಿ ಸ್ಮತಿ ಮನದಾಳ ಬಿಚ್ಚಿಟ್ಟಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಮಹಿಳೆಯರಿಗಾಗಿ ಮೂರು ತಂಡಗಳೊಂದಿಗೆ ಲೀಗ್ ಆಡಿಸಲಾಗಿತ್ತು. ಈ ವರ್ಷ ನಾಲ್ಕು ತಂಡಗಳನ್ನು ಆಡಿಸುವ ಯೋಜನೆ ಬಿಸಿಸಿಐಗೆ ಇತ್ತಾದರೂ ಕೋವಿಡ್-19ರಿಂದಾಗಿ ಕ್ರೀಡಾ ಚಟುವಟಿಕೆಗಳೇ ಸ್ತಬ್ಧಗೊಂಡಿವೆ.

    ಇದನ್ನೂ ಓದಿ: 2001ರ ಕೋಲ್ಕತ ಟೆಸ್ಟ್ ಗೆಲುವಿಗೆ ದ್ರಾವಿಡ್ ಹೇಳಿದ ಕಾರಣವೇನು?

    ಕೊಹ್ಲಿ ಅಭಿಮಾನಿ ಮಂದನಾ

    ಮಹಿಳಾ ಐಪಿಎಲ್‌ನಲ್ಲಿ ಆರು ತಂಡಗಳಿರಲಿ ಎಂದ ಸ್ಮತಿ
    2019ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಪಡೆದಿರುವ ಸ್ಮತಿ ಮಂದನಾಗೆ ವಿರಾಟ್ ಕೊಹ್ಲಿ ಮಾದರಿ. ತನ್ನ ಬ್ಯಾಟಿಂಗ್ ಶೈಲಿ ಕುರಿತು ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಸಲಹೆ ಪಡೆದಿರುವ ಮಂದನಾ, ಮಹಿಳಾ ತಂಡದ ಭವಿಷ್ಯದ ನಾಯಕಿಯಾಗಿಯೂ ಬಿಂಬಿತವಾಗಿದ್ದಾರೆ. ಮಂದನಾ ಇದುವರೆಗೆ ಆಡಿರುವ 51 ಏಕದಿನ ಪಂದ್ಯಗಳಿಂದ 4 ಶತಕ, 17 ಅರ್ಧಶತಕ ಸೇರಿದಂತೆ 2025 ರನ್ ಪೇರಿಸಿದ್ದು, 75 ಟಿ20 ಪಂದ್ಯಗಳಿಂದ 12 ಅರ್ಧಶತಕ ಸೇರಿದಂತೆ 1716 ರನ್ ಗಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts