More

    IPL 2023; ಕಾಳಸಂತೆಯಲ್ಲಿ ಟಿಕೆಟ್​ ಮಾರಾಟ; 24 ಮಂದಿ ಬಂಧನ

    ಚೆನೈ: ಬುಧವಾರ ರಾಜಸ್ಥಾನ ರಾಯಲ್ಸ್​ ಹಾಗೂ ಚೆನೈ ಸೂಪರ್​​ ಕಿಂಗ್ಸ್​ ನಡುವೆ ನಡೆದ IPL ಪಂದ್ಯದ ಟಿಕೆಟ್​ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವಿಚಾರವಾಗಿ ಪೊಲೀಸರು 24 ಮಂದಿಯನ್ನು ಬಂಧಿಸಿದ್ದಾರೆ.

    ಚೆಪಾಕ್​ನ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದ ಟಿಕೆಟ್​ಗಳನ್ನು ಬಂಧಿತ ಆರೋಪಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರಿಂದ ಸುಳಿವು

    ಆರೋಪಿಗಳಿಂದ ಪೊಲೀಸರು 65,700 ರೂಪಾಯಿ ಮೌಲ್ಯದ 62 ಟಿಕೆಟ್​ಗಳನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: UP ಪೊಲೀಸ್​-STF ಜಂಟಿ ಕಾರ್ಯಾಚರಣೆ; ಅತೀಕ್ ಪುತ್ರ, ಶೂಟರ್ ಗುಲಾಮ್​ ಹತ್ಯೆ

    ಏಪ್ರಿಲ್​ 11ರಂದು ಪೊಲೀಸರು ನಕಲಿ ಐಪಿಟಲ್​ ಟಿಕೆಟ್​ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದರು. ಬಂಧಿತರಿಂದ ದೊರೆತ ಮಾಹಿತಿ ಮೇರೆಗೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.

    ನಕಲಿ ಟಿಕೆಟ್​ಗಳ ಹಾವಳಿ

    ಏಪ್ರಿಲ್​ 11ರಂದು ದೆಹಲಿ ಪೊಲೀಸರು ಅರುಣ್​ ಜೇಟ್ಲಿ ಕ್ರೀಡಾಂಗಣದ ಬಳಿ ದೆಹಲಿ-ಮುಂಬೈ ನಡುವಿನ ಪಂದ್ಯದ ನಕಲಿ ಐಪಿಎಲ್​ ಟಿಕೆಟ್​ ಮಾರುತ್ತಿದ್ದವರನ್ನು ಮಫ್ತಿಯಲ್ಲಿ ಬಂಧಿಸಿದ್ದರು.

    ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಐಪಿಎಲ್​ ಶುರುವಾದಾಗಿನಿಂದಲೂ ದಿನದಿಂದ ದಿನಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು ಇದು ಕ್ರಿಕೆಟ್​ ಮಂಡಳಿಗಳ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಸ್ಟೇಡಿಯಂ ಹೊರತುಪಡಿಸಿ ಖಾಸಗಿ ಸಿಬ್ಬಂದಿಗಳಿಂದ ಟಿಕೆಟ್​ ಖರೀದಿಸಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts