ಜೈಪುರ: ಭಾರತದಲ್ಲಿ ಬೀದಿ ಬದಿ ಆಹಾರ ಒಂದು ರೀತಿಯ ಆಕರ್ಷಣೆಯಾಗಿದ್ದು ನಾವು ಅದನ್ನು ಮಾರಾಟ ಮಾಡುವವರನ್ನು ಗಮನಿಸುತ್ತಿರುತ್ತೇವೆ ಮತ್ತು ಅವರ ಸುಖ ದುಃಖಗಳನ್ನು ಕೇಳಿರುತ್ತೇವೆ.
ಕೆಲವರು ತಮ್ಮ ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವುದನ್ನು ನೋಡುತ್ತೇವೆ ಮತ್ತು ಕೆಲವರು ಆಹಾರ ಮೇಲಿನ ಪ್ರೀತಿಗಾಗಿ ಹೆಚ್ಚು ಸಂಬಳವಿರುವ ಕೆಲಸವನ್ನು ಬಿಟ್ಟು ಬೀದಿ ಬದಿ ವ್ಯಾಪಾರ ಮಾಡುತ್ತಿರುತ್ತಾರೆ.
ಸಂಪಾದನೆಗಿಂತ ಸೇವೆಯೇ ಮುಖ್ಯ
ರಾಜಸ್ಥಾನದ ಜೈಪುರದಲ್ಲಿ ದಂಪತಿಗಳಿಬ್ಬರು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಮಾಣ ಆಹಾರವನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: UP ಪೊಲೀಸ್-STF ಜಂಟಿ ಕಾರ್ಯಾಚರಣೆ; ಅತೀಕ್ ಪುತ್ರ, ಶೂಟರ್ ಗುಲಾಮ್ ಹತ್ಯೆ
ಈ ದಂಪತಿಗಳಿಬ್ಬರು 30 ರೂಪಾಯಿಗೆ 10 ಪುರಿ ಹಾಗೂ ಒಂದು ತರಹದ ಸಬ್ಜಿ ಹಾಗೂ ಚಟ್ನಿ, 10 ರೂಪಾಯಿಗೆ ಒಂದು ಪ್ಲೇಟ್ ಅನ್ನ ಸಾಂಬಾರ್ ಅನ್ನು ಕೊಡುತ್ತಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ವ್ಯಾಪಕ ಮೆಚ್ಚುಗೆ
ಈ ದಂಪತಿಗಳು ಬೆಳಗ್ಗೆ 7:30 ರಿಂದ ಮಧ್ಯಾಹ್ನ 2:00 ಘಂಟೆವರೆಗೂ ಅಂಗಡಿ ತೆರೆದಿರುವುದಾಗಿ ತಿಳಿಸಿದ್ದಾರೆ. ನಾವು ಪೂರಿಯೊಂದಿಗೆ ಆಲು ಹಾಗೂ ಚೆನ್ನಾ ಮಸಾಲಾ ಅದರ ಜೊತೆಗೆ ಒಂದು ತರಹದ ಚಟ್ನಿಯನ್ನು ಕೊಡುತ್ತೇವೆ. ಗ್ರಾಹಕರು ಹೋಟೆಲ್ಗೆ ಬಂದಾಗ ಬಿಸಿ ಪೂರಿಯನ್ನು ತಯಾರಿಸಿ ಕೊಡುತ್ತೇವೆ. ನಮಗೆ ಸಂಪಾದನೆಗಿಂತ ಸೇವೆಯೇ ಮುಖ್ಯ ಎಂದು ಹೇಳಿದ್ದಾರೆ.
ದಂಪತಿ ನಡೆಸುತ್ತಿರುವ ಹೋಟೆಲ್ಗೆ ಬಂದವರೆಲ್ಲಾ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದು ನೀವು ನಿಮ್ಮ ಕುಟುಂಬದವರ ಜೊತೆ ಭೇಟಿ ನೀಡಿ ಎಂದು ಸಲಹೆ ನೀಡಿದ್ಧಾರೆ.