More

    ಸ್ಟಾರ್ ಕ್ರಿಕೆಟಿಗರ ಐಪಿಎಲ್‌ನ ಆರಂಭಿಕ ಸಂಭಾವನೆ ಎಷ್ಟು ಗೊತ್ತಾ..?

    ಬೆಂಗಳೂರು: ಕರೊನಾ ವೈರಸ್ ಭೀತಿ ನಡುವೆಯೂ 13ನೇ ಐಪಿಎಲ್‌ಗೆ ದಿನಗಣನೆ ಆರಂಭಗೊಂಡಿದೆ. ಸೆ.19 ರಂದು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ. ಕಳೆದ 12 ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲೇ ತನ್ನ ಛಾಪು ಮೂಡಿಸುತ್ತಿರುವ ಐಪಿಎಲ್‌ನಲ್ಲಿ ಆಡುವುದೇ ಯುವ ಕ್ರಿಕೆಟಿಗರ ಕನಸಾಗಿದೆ. ಒಂದು ವೇಳೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿ, ಒಂದೆರಡು ಪಂದ್ಯಗಳಲ್ಲಿ ಮಿಂಚಿದರೆ ಸಾಕು ರಾತ್ರೋರಾತ್ರಿ ಈ ಆಟಗಾರ ಶ್ರೀಮಂತನಾಗುವುದರಲ್ಲಿ ಅನುಮಾನವಿಲ್ಲ. ಇದೇ ನಿರ್ವಹಣೆ ಮೂಲಕವೇ ವರ್ಷದಿಂದ ವರ್ಷಕ್ಕೆ ತಮ್ಮ ಸಂಬಳ ಹೆಚ್ಚಿಸಿಕೊಂಡಿರುವ ಆಟಗಾರರ ಪಟ್ಟಿಗೇನು ಕಮ್ಮಿಯಿಲ್ಲ. ಇವರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ.

    ಇದನ್ನೂ ಓದಿ: ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗೆ ಧೋನಿ ಬಾಕಿ ಉಳಿಸಿಕೊಂಡ 1,800 ರೂಪಾಯಿಯಿಂದ ವಿವಾದ! 

    ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ:  ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಬಂದು ಇಂದು ಗರಿಷ್ಠ ಮೊತ್ತದ ಸಂಭಾವನೆ ಹೊಂದಿರುವ ಆಟಗಾರ ವಿರಾಟ್ ಕೊಹ್ಲಿ. 2008ರಲ್ಲಿ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕನಾಗಿದ್ದ ಕೊಹ್ಲಿ, ಅದೇ ವರ್ಷ ಆರಂಭಗೊಂಡ ಐಪಿಎಲ್‌ನಲ್ಲಿ ಕೇವಲ 12 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಾಲಾದರು. 2009, 2010ರವರೆಗೆ ಇದೇ ಸಂಭಾವನೆ ಪಡೆದ ಕೊಹ್ಲಿ, 2011ರಲ್ಲಿ ಏಕಾಏಗಿ 69ರಷ್ಟು ದುಪ್ಪಟ್ಟು ಅಂದರೆ 8.28 ಕೋಟಿ ರೂಪಾಯಿ ಮೊತ್ತಕ್ಕೆ ತಂಡದಲ್ಲೇ ಉಳಿದರು. 2014ರಲ್ಲಿ ನಾಯಕನಾಗಿ ಬಡ್ತಿ ಪಡೆದ ಕೊಹ್ಲಿ ಸಂಭಾವನೆ 12.5 ಕೋಟಿಗೆ ಏರಿಕೆ ಕಂಡಿತು. ಬಳಿಕ 2018ರಿಂದ ಕೊಹ್ಲಿ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

    ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್:  ಕರ್ನಾಟಕದ ಕೆಎಲ್ ರಾಹುಲ್, 2013ರಲ್ಲಿ 10 ಲಕ್ಷ ರೂಪಾಯಿಗೆ ಆರ್‌ಸಿಬಿ ತಂಡಕ್ಕೆ ಸೇಲಾಗಿದ್ದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡ ರಾಹುಲ್, 2014ರಲ್ಲಿ 1 ಕೋಟಿಗೆ ಸನ್‌ರೈಸರ್ಸ್‌ ತಂಡ ಸೇರಿದರು. 2017ರವರೆಗೂ ಇದೇ ಸಂಭಾವನೆಯಲ್ಲಿದ್ದ ರಾಹುಲ್, 2018ರಲ್ಲಿ 11 ಕೋಟಿಗೆ ಕಿಂಗಲ್ಸ್ ಇಲೆವೆನ್ ಪಂಜಾಬ್ ಪಾಲಾದರು.

    ಇದನ್ನೂ ಓದಿ: ಬಿಗ್ ಬಾಷ್ ಲೀಗ್ ನಲ್ಲಿ ಆಡಲು ಯುವರಾಜ್ ಸಿಂಗ್ ಕಾತರ..!

    ಆಲ್ರೌಂಡರ್ ಹಾರ್ದಿಕ್ ಪಾಂಡ್ಯ: ಪ್ರಸಕ್ತ ಭಾರತೀಯ ಕ್ರಿಕೆಟ್ ವಲಯದಲ್ಲಿ ಬೆಸ್ಟ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಪಾಂಡ್ಯ ಅವರನ್ನು 2015ರಲ್ಲಿ 1 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. 2017ರವರೆಗೂ ಇದೇ ಸಂಭಾವನೆಯಲ್ಲಿದ್ದ ಪಾಂಡ್ಯ, 2018ರಿಂದ 11 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

    ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ : 2016ರಲ್ಲಿ 19 ವಯೋಮಿತಿ ಕ್ರಿಕೆಟ್‌ನಿಂದ ನೇರವಾಗಿ ಐಪಿಎಲ್‌ಗೆ ಬಂದವರು ರಿಷಭ್ ಪಂತ್. ಆಗ ಅವರ ಸಂಭಾವನೆ 1.9 ಕೋಟಿ ರೂಪಾಯಿ. 2016 ಹಾಗೂ 2017ರಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಅವರ ಹಾಲಿ ಸಂಭಾವನೆ 8 ಕೋಟಿ ರೂಪಾಯಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts