More

    ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!

    ಬೆಂಗಳೂರು: ಐಪಿಎಲ್‌ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಜಿದ್ದಿಗೆ ಬಿದ್ದವರಂತೆ ರನ್ ಗಳಿಸುತ್ತಾರೆ. ಹೀಗೆ ಬ್ಯಾಟ್ಸ್‌ಮನ್‌ಗಳ ನಡುವೆಯೇ ಸ್ಪರ್ಧೆ ಇರುತ್ತದೆ. ಅತಿಹೆಚ್ಚು ರನ್ ಸಿಡಿಸುವ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಕಳೆದ 12 ಆವೃತ್ತಿಗಳಿಂದ ಆರೆಂಜ್ ಕ್ಯಾಪ್ ಗೆದ್ದಿರುವ ಬ್ಯಾಟ್ಸ್‌ಮನ್‌ಗಳ ಸಂಕೀಪ್ತ ಪರಿಚಯ ಇಲ್ಲಿದೆ.

    ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!2008: ಶಾನ್ ಮಾರ್ಷ್ (ಕಿಂಗ್ಸ್ ಇಲೆವೆನ್ ಪಂಜಾಬ್): ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಶೇನ್ ಮಾರ್ಷ್ ರನ್ ಹೊಳೆಯನ್ನೇ ಹರಿಸಿದ್ದರು. ಆಸ್ಟ್ರೇಲಿಯಾದ ಶೇನ್ ಮಾರ್ಷ್ ಲೀಗ್ ಆಡಿದ 11 ಪಂದ್ಯಗಳಿಂದ ಸರಾಸರಿ 68.44 ರಂತೆ 1 ಶತಕ, 5 ಅರ್ಧಶತಕ ಒಳಗೊಂಡಂತೆ 616 ರನ್ ಕಲೆಹಾಕಿದ್ದರು. ಶಾನ್ ಮಾರ್ಷ್ ಅಬ್ಬರದ ಬ್ಯಾಟಿಂಗ್ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೆಮಿಫೈನಲ್‌ನಲ್ಲೇ ಮುಗ್ಗಿರಿಸಿತ್ತು.

    2009: ಮ್ಯಾಥ್ಯೂ ಹೇಡನ್ (ಚೆನ್ನೈ ಸೂಪರ್ ಕಿಂಗ್ಸ್): ಚೆನ್ನೈ ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್, ಎರಡನೇ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಜಯಿಸಿದ್ದರು. ಆಸ್ಟ್ರೇಲಿಯಾದ ಈ ದೈತ್ಯ ಬ್ಯಾಟ್ಸ್‌ಮನ್ ಆಡಿದ 12 ಪಂದ್ಯಗಳಿಂದ 572 ರನ್ ಸಿಡಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಲೀಗ್‌ನಲ್ಲಿ ವೇಗಿಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಹೇಡನ್ ರನ್‌ಹೊಳೆಯನ್ನೇ ಹರಿಸಿದ್ದರು.

    2010: ಸಚಿನ್ ತೆಂಡುಲ್ಕರ್ (ಮುಂಬೈ ಇಂಡಿಯನ್): ದಿಗ್ಗಜ ಸಚಿನ್ ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!ತೆಂಡುಲ್ಕರ್ 3ನೇ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಮುಂಬೈ ತಂಡದ ನಾಯಕನಾಗಿದ್ದ ಸಚಿನ್ ತೆಂಡುಲ್ಕರ್, 15 ಪಂದ್ಯಗಳಿಂದ ಸರಾಸರಿ 47.53 ರಂತೆ 618 ರನ್ ಕಲೆಹಾಕಿದ್ದರು. ಜತೆಗೆ ಮುಂಬೈ ಇಂಡಿಯನ್ಸ್ ತಂಡ ಫೈನಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಶರಣಾಗಿತ್ತು.

    2011: ಕ್ರಿಸ್ ಗೇಲ್ (ಆರ್‌ಸಿಬಿ): ಚುಟುಕು ಕ್ರಿಕೆಟ್ ಸಮರದಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ನ ಸುವರ್ಣಾಯುಗ ಆರಂಭಗೊಂಡ ವರ್ಷ 2011. ಲೀಗ್‌ನ 4ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಮೊದಲ ಬಾರಿಗೆ ಆಡಿದ ಗೇಲ್, ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಕೇವಲ 12 ಪಂದ್ಯಗಳಿಂದ 2 ಶತಕ ಒಳಗೊಂಡಂತೆ 608 ರನ್ ಸಿಡಿಸಿದ್ದರು. ಗೇಲ್ ಅಬ್ಬರದ ನಡುವೆಯೂ ಆರ್‌ಸಿಬಿ ಫೈನಲ್‌ನಲ್ಲಿ  ಸಿಎಸ್‌ಕೆಗೆ ಶರಣಾಗಿತ್ತು.ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!

    2012: ಕ್ರಿಸ್ ಗೇಲ್ (ಆರ್‌ಸಿಬಿ): ಸತತ 2ನೇ ವರ್ಷವೂ ಗೇಲ್ ಅಬ್ಬರದ ಮುಂದುವರಿದಿತ್ತು. ಲೀಗ್ ಇತಿಹಾಸದಲ್ಲೇ 700 ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. 15 ಪಂದ್ಯಗಳಿಂದ ಸರಾಸರಿ 61.08 ರಂತೆ ಒಂದು ಶತಕ, 7 ಅರ್ಧಶತಕ ಸೇರಿದಂತೆ 733 ರನ್ ಬಾರಿಸಿದ್ದರು ಗೇಲ್. ಸತತ 2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು.

    2013: ಮೈಕ್ ಹಸ್ಸೆ (ಸಿಎಸ್‌ಕೆ): ಆಸ್ಟ್ರೇಲಿಯಾದ ಮೈಕ್ ಹಸ್ಸೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಅಂಗವಾಗಿದ್ದರು. ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!2013ರಲ್ಲಿ ನಡೆದ 6ನೇ ಆವೃತ್ತಿಯಲ್ಲಿ 17 ಪಂದ್ಯಗಳಿಂದ ಸರಾಸರಿ 52.35 ರಂತೆ 733 ರನ್ ಬಾರಿಸಿದ್ದರು. ಜತೆಗೆ ಲೀಗ್‌ವೊಂದರಲ್ಲಿ ಅತಿಹೆಚ್ಚು ರನ್‌ಸಿಡಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಹಸ್ಸೆ ಸರಿಗಟ್ಟಿದ್ದರು.

    2014: ರಾಬಿನ್ ಉತ್ತಪ್ಪ (ಕೆಕೆಆರ್): ಕೆಕೆಆರ್ ತಂಡದ ರಾಬಿನ್ ಉತ್ತಪ್ಪ 2014ರಲ್ಲಿ ನಡೆದ 7ನೇ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು. ಕರ್ನಾಟಕದ ಬ್ಯಾಟ್ಸ್‌ಮನ್‌ವೊಬ್ಬ ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!ಮೊದಲ ಬಾರಿಗೆ ಆರೇಂಜ್ ಕ್ಯಾಪ್ ಗೆದ್ದ ಸಾಧನೆ ಮಾಡಿದರು. ಉತ್ತಪ್ಪ ಆಡಿದ 16 ಪಂದ್ಯಗಳಿಂದ 5 ಶತಕ ಸೇರಿದಂತೆ 660 ರನ್ ಕಲೆಹಾಕಿದ್ದರು. ಅದೇ ವರ್ಷ ಕೆಕೆಆರ್ ತಂಡ 2ನೇ ಬಾರಿಗೆ ಚಾಂಪಿಯನ್ ಕೂಡ ಆಗಿತ್ತು.

    2015: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌): ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, 8ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಸ್ಟ್ರೇಲಿಯಾದ ಈ ಸ್ಫೋಟಕ ಬ್ಯಾಟ್ಸ್‌ಮನ್ ಆಡಿದ 14 ಪಂದ್ಯಗಳಿಂದ 562 ರನ್ ಕಲೆಹಾಕಿದ್ದರು.

    2016: ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!ವಿರಾಟ್ ಕೊಹ್ಲಿ (ಆರ್‌ಸಿಬಿ): ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟೂರ್ನಿಯಲ್ಲಿ ಆರೇಂಜ್ ಕ್ಯಾಪ್ ಧರಿಸಿದರು. ಆಡಿದ 16 ಪಂದ್ಯಗಳಿಂದ 4 ಶತಕ, 7 ಅರ್ಧಶತಕ ಒಳಗೊಂಡಂತೆ 973 ರನ್ ಕಲೆಹಾಕಿದ್ದರು ಕೊಹ್ಲಿ. ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ಸಿಡಿಸಿದ ದಾಖಲೆ ನಿರ್ಮಿಸಿದರು. ಕೊಹ್ಲಿ ಅಬ್ಬರದ ನಡುವೆಯೂ ಆರ್‌ಸಿಬಿ ಫೈನಲ್‌ನಲ್ಲಿ ಮುಗ್ಗರಿಸಿತ್ತು.

    2017: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌): ಸನ್‌ರೈಸರ್ಸ್‌ ತಂಡದ ಡೇವಿಡ್ ವಾರ್ನರ್‌ನಲ್ಲಿ 2ನೇ ಬಾರಿಗೆ ಆರೇಂಜ್ ಕ್ಯಾಪ್ ಗೆದ್ದುಕೊಂಡರು. 14 ಪಂದ್ಯಗಳಿಂದ 1 ಶತಕ, 4 ಅರ್ಧಶತಕ ಸೇರಿದಂತೆ 641 ರನ್ ಗಳಿಸಿದ್ದರು. 2ನೇ ಬಾರಿಗೆ ಆರೇಂಜ್ ಕ್ಯಾಪ್ ಧರಿಸಿದ 2ನೇ ಆಟಗಾರ ಎನಿಸಿಕೊಂಡರು.

    2018: ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!ಕೇನ್ ವಿಲಿಯಮ್ಸ್ ನ್(ಸನ್‌ರೈಸರ್ಸ್‌): 11ನೇ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್‌ನ್ ಮೊದಲ ಬಾರಿಗೆ ಆರೇಂಜ್ ಕ್ಯಾಪ್ ಧರಿಸಿದರು. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ವಿಲಿಯಮ್ಸ್‌ನ್ ಬ್ಯಾಟಿಂಗ್ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ್ದರು. 17 ಪಂದ್ಯಗಳಿಂದ 8 ಶತಕ ಸೇರಿದಂತೆ 735 ರನ್ ಕಲೆಹಾಕಿದ್ದರು.

    2019: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌): ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಡೇವಿಡ್ ವಾರ್ನರ್, 12ನೇ ಆವೃತ್ತಿಯ ಅತಿಹೆಚ್ಚು ರನ್ ಬಾರಿಸಿದರು. 12 ಪಂದ್ಯಗಳಿಂದ ಏಕೈಕ ಶತಕ, 7 ಅರ್ಧಶತಕ 692 ರನ್ ಕಲೆಹಾಕಿತ್ತು. ಇದರೊಂದಿಗೆ ಲೀಗ್‌ನಲ್ಲಿ 3 ಬಾರಿ ಆರೇಂಜ್ ಕ್ಯಾಪ್ ಜಯಿಸಿದ ಆಟಗಾರ ಎನಿಸಿಕೊಂಡರು.ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts