More

    ವಿದೇಶದಲ್ಲಿ ಐಪಿಎಲ್, ಗಂಗೂಲಿ ಸುಳಿವು

    ನವದೆಹಲಿ: ದೇಶದಲ್ಲಿ ವರ್ಷಾಂತ್ಯ ಅಥವಾ 2021ರ ಆರಂಭದವರೆಗೂ ಕೋವಿಡ್-19 ಸಾಂಕ್ರಾಮಿಕ ಪಿಡುಗು ಮುಂದುವರಿಯಬಹುದು ಎಂದು ಅಂದಾಜಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸುವ ಸಾಧ್ಯತೆ ಕಡಿಮೆಯಾಗಿದೆ ಎಂದಿದ್ದಾರೆ. ಈ ಮೂಲಕ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಸುಳಿವು ನೀಡಿದ್ದಾರೆ. ‘ಭಾರತದಲ್ಲಿ ಮುಂದಿನ 2-3-4 ತಿಂಗಳು ಸ್ವಲ್ಪಮಟ್ಟಿಗೆ ಕಠಿಣವಾಗಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದೆ. ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭ ದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರಬಹುದು’ ಎಂದು ಗಂಗೂಲಿ, ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆ ಆನ್​ಲೈನ್ ಮಾತುಕತೆಯ ವೇಳೆ ಅಭಿಪ್ರಾಯಪಟ್ಟಿದ್ದಾರೆ.

    ಸೆಪ್ಟೆಂಬರ್ ಅಂತ್ಯದಿಂದ ನವೆಂಬರ್​ವರೆಗಿನ ಅವಧಿಯಲ್ಲಿ ಐಪಿಎಲ್ ಆಯೋಜಿಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ. ಆದರೆ ಭಾರತ ಈಗ ಕರೊನಾ ಹಾವಳಿಯಲ್ಲಿ ವಿಶ್ವದಲ್ಲೇ 3ನೇ ಸ್ಥಾನಕ್ಕೇರಿದೆ. ಹೀಗಾಗಿ ಭಾರತದಲ್ಲಿ ಟೂರ್ನಿ ಆಯೋಜಿಸುವುದು ಸದ್ಯ ಕಠಿಣವಾಗಿ ಕಾಣಿಸುತ್ತಿದೆ. ‘ಕರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯು ವವರೆಗೆ ಕಾಯುವೆ. ಅಲ್ಲಿಯವರೆಗೆ ನಾವು ಸ್ವಲ್ಪಮಟ್ಟಿಗೆ ಎಚ್ಚರಿಕೆಯಿಂದ ಇರಬೇಕು. ಯಾರೂ ಅನಾರೋಗ್ಯ ಪೀಡಿತರಾಗಬಾರದು. ಒಮ್ಮೆ ಲಸಿಕೆ ಬಂದರೆ ಎಲ್ಲವೂ ಸಹಜವಾಗಲಿದೆ. ಆಗ ಇತರ ಕಾಯಿಲೆಗಳಂತೆ ಕರೊನಾವನ್ನೂ ನೋಡಲಾಗುವುದು’ ಎಂದು ಗಂಗೂಲಿ ವಿವರಿಸಿದ್ದಾರೆ. ಕರೊನಾ ವಿರುದ್ಧದ ಹೋರಾಟವನ್ನು ಬ್ಯಾಟಿಂಗ್ ತಂತ್ರಗಾರಿಕೆಗೆ ಹೋಲಿಕೆ ಮಾಡಿರುವ ದಾದಾ, ‘ಎಲ್ಲ ರೀತಿಯ ಪಿಚ್​ನಲ್ಲೂ ಒಂದೇ ರೀತಿಯ ಬ್ಯಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ತಿರುವು ಇರುವಾಗ ಮತ್ತು ಪಿಚ್ ಪ್ಲ್ಯಾಟ್ ಆಗಿರುವಾಗ ಭಿನ್ನವಾಗಿ ಆಡುತ್ತೇವೆ. ಕೋವಿಡ್ ಅನ್ನೂ ಇದೇ ರೀತಿಯಾಗಿ ಎದುರಿಸಬೇಕಾಗಿದೆ’ ಎಂದು ಹೇಳಿದ್ದಾರೆ.

     ಇದನ್ನೂ ಓದಿ: ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌

    ವಿದೇಶದಲ್ಲಿ ಐಪಿಎಲ್ ಕೊನೇ ಆಯ್ಕೆ: ವಿದೇಶದಲ್ಲಿ ಐಪಿಎಲ್ ಆಯೋಜಿಸುವುದು ಕೊನೆಯ ಆಯ್ಕೆಯಾಗಿರುತ್ತದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ. ಶ್ರೀಲಂಕಾ, ಯುಎಇ ಮತ್ತು ನ್ಯೂಜಿಲೆಂಡ್​ನಿಂದ ಐಪಿಎಲ್ ಆತಿಥ್ಯಕ್ಕೆ ಆಫರ್ ಬಂದಿದ್ದರೂ, ಭಾರತದಲ್ಲಿ ಟೂರ್ನಿ ನಡೆಸುವ ಬಗ್ಗೆ ಮೊದಲು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts