More

    ಬದಲಾಗಲಿದೆ ಐಪಿಎಲ್ ಸ್ವರೂಪ! ಹೇಗಿರಲಿದೆ 2022ರ ಟೂರ್ನಿ?

    ನವದೆಹಲಿ: ಐಪಿಎಲ್ 14ನೇ ಆವೃತ್ತಿಯ 2ನೇ ಭಾಗಕ್ಕೆ ಯುಎಇಯಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಬಿಸಿಸಿಐ, 2022ರ ಆವೃತ್ತಿಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಿದೆ. ಹೀಗಾಗಿ 8 ತಂಡಗಳ ಟೂರ್ನಿ ಈ ವರ್ಷವೇ ಕೊನೇ ಆಗಿರಲಿದೆ. ಜತೆಗೆ ತವರು-ಎದುರಾಳಿ ಮಾದರಿಯ ಹಾಲಿ ಸ್ವರೂಪದ ಟೂರ್ನಿಯೂ ಇದೇ ಕೊನೆಯದಾಗಲಿರಲಿದೆ. ಮುಂದಿನ ವರ್ಷ ನಡೆಯಲಿರುವ 10 ತಂಡಗಳ ಟೂರ್ನಿಯಲ್ಲಿ ಲೀಗ್ ಹಂತದ ಕಾದಾಟದ ಸ್ವರೂಪವೂ ಬದಲಾವಣೆ ಕಾಣಲಿದೆ.

    ಟೂರ್ನಿ ಸ್ವರೂಪ ಬದಲಾದರೂ ಎಲ್ಲ ತಂಡಗಳು 14 ಲೀಗ್ ಪಂದ್ಯ ಆಡುವ ಅವಕಾಶ ಪಡೆಯಲಿವೆ. 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗುವುದು. ತಂಡಗಳು ತಮ್ಮ ಗುಂಪಿನ ಉಳಿದ 4 ತಂಡಗಳ ವಿರುದ್ಧ ತವರು ಮತ್ತು ಎದುರಾಳಿ ನೆಲದಲ್ಲಿ ಆಡಲಿವೆ. ಇದಲ್ಲದೆ ಮತ್ತೊಂದು ಗುಂಪಿನ 4 ತಂಡಗಳ ವಿರುದ್ಧ ತವರು ಅಥವಾ ಎದುರಾಳಿ ನೆಲದಲ್ಲಿ ತಲಾ 1 ಪಂದ್ಯವನ್ನಷ್ಟೇ ಆಡಲಿವೆ. ಆ ಗುಂಪಿನ ಮತ್ತೊಂದು ತಂಡದ ವಿರುದ್ಧ ತವರು ಮತ್ತು ಎದುರಾಳಿ ನೆಲ ಎರಡೂ ಕಡೆ ಆಡಲಿದೆ. ಇದರಿಂದ ಟೂರ್ನಿಯ ಒಟ್ಟು ಪಂದ್ಯಗಳ ಸಂಖ್ಯೆ 74ಕ್ಕೇರಲಿದೆ. ಈ ಹೊಸ ಸ್ವರೂಪದ ಬಗ್ಗೆ ಬಿಸಿಸಿಐ ರೂಪುರೇಷೆ ರೂಪಿಸುತ್ತಿದ್ದು, ಅಧಿಕೃತವಾಗಿ ಇನ್ನಷ್ಟೇ ಪ್ರಕಟಿಸಬೇಕಾಗಿದೆ.

    2 ಗುಂಪುಗಳಿದ್ದರೂ ಅಂಕಪಟ್ಟಿ ಒಂದೇ ಇರಲಿದೆ. ಹೀಗಾಗಿ ಈಗಿರುವಂತೆ ಅಗ್ರ 2 ತಂಡಗಳು ಕ್ವಾಲಿೈಯರ್-1ಕ್ಕೆ ಅರ್ಹತೆ ಗಳಿಸಿದರೆ, 3-4ನೇ ಸ್ಥಾನಿ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿವೆ.

    ಯಾಕೆ ಸ್ವರೂಪ ಬದಲಾವಣೆ?: 2 ಹೊಸ ತಂಡಗಳ ಸೇರ್ಪಡೆಯ ಬಳಿಕವೂ ಹಾಲಿ ಸ್ವರೂಪವನ್ನೇ ಉಳಿಸಿಕೊಂಡರೆ ಆಗ ಒಟ್ಟು 94 ಪಂದ್ಯಗಳನ್ನು ನಡೆಸಬೇಕಾಗುತ್ತದೆ. ಆಗ ಹೆಚ್ಚಿನ ಕಾಲಾವಕಾಶವೂ ಬೇಕಾಗುತ್ತದೆ. ಆದರೆ ಐಪಿಎಲ್ ಅವಧಿ ವಿಸ್ತರಣೆಗೆ ಐಸಿಸಿ ಸಮ್ಮತಿಸಿಲ್ಲ. ಹೀಗಾಗಿ ಈಗಿರುವ 54 ದಿನಗಳ ಕಾಲಾವಧಿಯಲ್ಲೇ ಬಿಸಿಸಿಐ, ಐಪಿಎಲ್ ಮುಗಿಸಬೇಕಾಗಿದೆ. ಇದರನ್ವಯ ಬಿಸಿಸಿಐ ಟೂರ್ನಿ ಸ್ವರೂಪ ರೂಪಿಸಿದೆ. 2011ರಲ್ಲಿ 10 ತಂಡಗಳ ಐಪಿಎಲ್ ನಡೆದಾಗಲೂ ಬಿಸಿಸಿಐ, ಇದೇ ಸ್ವರೂಪವನ್ನು ಅಳವಡಿಸಿತ್ತು.

    ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಯಾವಾಗ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts