More

    ಮುಂಬರುವ IPL ಹರಾಜಿಗೆ 10 ತಂಡಗಳ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತ ಹೀಗಿದೆ…

    ನವದೆಹಲಿ: ​ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ 2024ನೇ ಸಾಲಿನ ಹಾಗೂ 17ನೇ ಆವೃತ್ತಿಯ ಐಪಿಎಲ್​ ಹರಾಜಿಗೂ ಮುನ್ನವೇ ಎಲ್ಲ 10 ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೇನ್​ ಮತ್ತು ರಿಲೀಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಒಟ್ಟು 174 ಆಟಗಾರರನ್ನು ತಂಡಗಳು ಉಳಿಸಿಕೊಂಡಿದ್ದು, 81 ಆಟಗಾರರನ್ನು ಬಿಡುಗಡೆ ಮಾಡಿವೆ. ಕೋಲ್ಕತ್ತ ನೈಟ್ ರೈಡರ್ಸ್ ಅತಿ ಹೆಚ್ಚು ಆಟಗಾರರನ್ನು ಬಿಡುಗಡೆ ಮಾಡಿದ್ದು, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ ಐಪಿಎಲ್​ ಆವೃತ್ತಿಗೆ ಗರಿಷ್ಠ ಆಟಗಾರರನ್ನು ರಿಟೇನ್​ ಮಾಡಿಕೊಂಡಿವೆ.

    ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿ ಬಿಡುಗಡೆಯ ಬಳಿಕ ಮುಂಬರುವ ಐಪಿಎಲ್​ ಹರಾಜಿಗೆ ಯಾವ್ಯಾವ ತಂಡಗಳು ತಮ್ಮ ಖಾತೆಯಲ್ಲಿ ಎಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂಬುದರ ಮಾಹಿತಿ ಈ ಕೆಳಕಂಡತಿದೆ.
    1. ರಾಯಲ್ ಚಾಲೆಂಜರ್ಸ್ ಬೆಂಗಳೂರು – 40. 75 ಕೋಟಿ ರೂ.
    2. ಸನ್ ರೈಸರ್ಸ್ ಹೈದರಾಬಾದ್ – 34 ಕೋಟಿ ರೂ.
    3. ಕೋಲ್ಕತ್ತ ನೈಟ್ ರೈಡರ್ಸ್ – 32.7 ಕೋಟಿ ರೂ.
    4. ಚೆನ್ನೈ ಸೂಪರ್ ಕಿಂಗ್ಸ್ – 31.4 ಕೋಟಿ ರೂ.
    5. ಪಂಜಾಬ್ ಕಿಂಗ್ಸ್ – 29.1 ಕೋಟಿ ರೂ.
    6. ಡೆಲ್ಲಿ ಕ್ಯಾಪಿಟಲ್ಸ್ – 28.95 ಕೋಟಿ ರೂ.
    7. ಮುಂಬೈ ಇಂಡಿಯನ್ಸ್ – 15.25 ಕೋಟಿ ರೂ.
    8. ರಾಜಸ್ಥಾನ ರಾಯಲ್ಸ್ – 14.5 ಕೋಟಿ ರೂ.
    9. ಲಖನೌ ಸೂಪರ್​ ಗೇಂಟ್ಸ್​- 13.9 ಕೋಟಿ ರೂ.
    10. ಗುಜರಾತ್​ ಟೈಟಾನ್ಸ್​ – 13.85 ಕೋಟಿ ರೂ.

    ಹೊಸ ಆಕರ್ಷಣೆ
    ಐಪಿಎಲ್​ ಹರಾಜಿನಲ್ಲಿ ಈ ಬಾರಿ ಕೆಲ ಹೊಸ ಆಟಗಾರರ ಆಕರ್ಷಣೆಯೂ ಇರಲಿದೆ. ವಿಶ್ವಕಪ್​ ಫೈನಲ್​ ಹೀರೋ ಟ್ರಾವಿಸ್​ ಹೆಡ್​, ಪ್ಯಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​ ಹರಾಜಿಗೆ ಮರಳುವ ನಿರೀಕ್ಷೆ ಇದ್ದರೆ, ನ್ಯೂಜಿಲೆಂಡ್​ನ ರಚಿನ್​ ರವೀಂದ್ರ ಮತ್ತು ಡೆರಿಲ್​ ಮಿಚೆಲ್​ ಮೊದಲ ಬಾರಿ ಅದೃಷ್ಟ ಪರೀಕ್ಷಿಸಲಿದ್ದಾರೆ. (ಏಜೆನ್ಸೀಸ್​)

    IPL 2024| ಗುಜರಾತ್​ನಲ್ಲೇ​ ಉಳಿದ ಹಾರ್ದಿಕ್​: ಇಲ್ಲಿದೆ ರಿಟೇನ್​, ರಿಲೀಸ್​ ಆಟಗಾರರ ಸಂಪೂರ್ಣ ಪಟ್ಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts