More

    ಪೃಥ್ವಿ ಷಾ ಆಕರ್ಷಕ ಅರ್ಧಶತಕ: ಚೆನ್ನೈ ಕಿಂಗ್ಸ್​ಗೆ ಸವಾಲಿನ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್!​

    ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಚೆನ್ನೈ ಸೂಪರ್ಸ್​ ಕಿಂಗ್ಸ್​ಗೆ ಸವಾಲಿನ ಗುರಿ ನೀಡಿದೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 175 ರನ್​ ಕಲೆಹಾಕಿದೆ.

    ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಷಾ ಹಾಗೂ ಶಿಖರ್​ ಧವನ್ ಮೊದಲ ವಿಕೆಟ್​ಗೆ​ 94 ರನ್​ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 35 ರನ್​ ಗಳಿಸಿದ್ದ ಧವನ್​ ಎಲ್​ಬಿ ಬಲೆಗೆ ಬಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ 64 ರನ್​ ಗಳಿಸಿದ ಪೃಥ್ವಿ ಶಾ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪೌಟ್​ ಆದರು.

    ನಾಯಕ ಶ್ರೇಯಸ್​ ಅಯ್ಯರ್​ 26 ರನ್​ಗಳ ಕಾಣಿಕೆ ನೀಡಿದರೆ, ರಿಷಬ್​ ಪಂತ್​ (35) ಮತ್ತು ಮಾರ್ಕಸ್​ ಸ್ಟೋನಿಸ್​ (5) ರನ್​ ಗಳಿಸಿ ಅಜೇಯರಾಗಿ ಉಳಿದರು.

    ಚೆನ್ನೈ ಪರ ಪಿಯುಸ್​ ಚಾವ್ಲ 2 ವಿಕೆಟ್​ ಪಡೆದರೆ, ಸ್ಯಾಮ್​ ಕರನ್​ 1 ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts