More

    ರಾಜಸ್ಥಾನ ರಾಯಲ್ಸ್​ ಎದುರು ಆರ್​ಸಿಬಿ 7 ರನ್​ಗಳ ರೋಚಕ ಗೆಲುವು: ಮ್ಯಾಕ್ಸ್​ವೆಲ್​, ಡು ಪ್ಲೆಸಿಸಿ ಗೆಲುವಿನ ಜತೆಯಾಟ

    ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಐಪಿಎಲ್​-16ರಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಹಸಿರು ಜೆರ್ಸಿಯಲ್ಲಿ ಕಂಗೊಳಿಸಿದ ಆರ್​ಸಿಬಿ ಈ ಮೂಲಕ ತವರಿನಲ್ಲಿ ಮೂರನೇ ಜಯ ಕಂಡಿದೆ.

    ಆಲ್​ರೌಂಡರ್​​​ ಗ್ಲೆನ್​ ಮ್ಯಾಕ್ಸ್​ವೆಲ್​ (77 ರನ್​, 44 ಎಸೆತ, 6 ಬೌಂಡರಿ, 4 ಸಿಕ್ಸರ್​) ಹಾಗೂ ಅನುಭವಿ ಬ್ಯಾಟರ್​ ಫಾಫ್​ ಡು ಪ್ಲೆಸಿಸ್​ (62 ರನ್​, 39 ಎಸೆತ, 8 ಬೌಂಡರಿ, 2 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ನೆರವಿನಿಂದ ಗೆಲುವು ಸಾಧಿಸಿದೆ.

    ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಸೂಪರ್​ ಸಂಡೇಯ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲ ಬ್ಯಾಟಿಂಗ್​ ನಡೆಸಿದ ವಿರಾಟ್​ ಕೊಹ್ಲಿ ಹಂಗಾಮಿ ಸಾರಥ್ಯದ ಆರ್​ಸಿಬಿ ತಂಡ ಆರಂಭಿಕ ಆಘಾತದ ನಡುವೆಯೂ 9 ವಿಕೆಟ್​ಗೆ 189 ರನ್​ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ ತಂಡ ಇಂಪ್ಯಾಕ್ಟ್​ ಪ್ಲೇಯರ್​ ಹರ್ಷಲ್​ ಪಟೇಲ್​ (32ಕ್ಕೆ3) ಬಿಗಿ ಬೌಲಿಂಗ್​ ದಾಳಿಗೆ ಕುಸಿದು 6 ವಿಕೆಟ್​ಗೆ 182 ರನ್​ಗಳಿಸಲಷ್ಟೇ ಶಕ್ತವಾಯಿತು.

    ಇದನ್ನೂ ಓದಿ: ಐಪಿಎಲ್ ಪಂದ್ಯದಲ್ಲೂ ‘ಡಬಲ್ ಇಂಜಿನ್’ ಸ್ಪಿರಿಟ್​; ಮೋದಿ-ಬೊಮ್ಮಾಯಿ, ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

    ಜೈಸ್ವಾಲ್​-ಪಡಿಕಲ್​ ಹೋರಾಟ ವ್ಯರ್ಥ: ಸವಾಲಿನ ಮೊತ್ತ ಬೆನ್ನಟ್ಟಿದ್ದ ರಾಯಲ್ಸ್​ಗೆ, ಮೊದಲ ಓವರ್​ನಲ್ಲೇ ಜೋಸ್​ ಬಟ್ಲರ್​ (0) ವಿಕೆಟ್​ ಕಬಳಿಸುವ ಮೂಲಕ ಮೊಹಮದ್​ ಸಿರಾಜ್​ ಆಘಾತ ನೀಡಿದರು. ಬಳಿಕ ಯಶಸ್ವಿ ಜೈಸ್ವಾಲ್​ (47) ಜತೆಗೂಡಿದ ಕನ್ನಡಿಗ ದೇವದತ್​ ಪಡಿಕಲ್​ (52 ರನ್​, 34 ಎಸೆತ, 7 ಬೌಂಡರಿ, 1 ಸಿಕ್ಸರ್​) 2ನೇ ವಿಕೆಟ್​ಗೆ 66 ಎಸೆತಗಳಲ್ಲಿ 98 ರನ್​ ಸೇರಿಸಿ ಆರ್​ಸಿಬಿ ಬೌಲರ್​ಗಳಿಗೆ ಸವಾಲಾದರು. 30 ಎಸೆತದಲ್ಲಿ ಅರ್ಧಶತಕ ಪೂರೈಸಿದ ಪಡಿಕಲ್​ ತವರಿನಲ್ಲಿ ಮಿಂಚುವ ಮೂಲಕ ರಾಜಸ್ಥಾನ ಇನಿಂಗ್ಸ್​ ಚೇತರಿಕೆ ನೀಡಿದರು. ಡೇವಿಡ್​ ವಿಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು.

    ಇದನ್ನೂ ಓದಿ: ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಹರ್ಷಲ್​ ಗೆಲುವಿನ ಇಂಪ್ಯಾಕ್ಟ್​: ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದ ನಾಯಕ ಸಂಜು ಸ್ಯಾಮ್ಸನ್​ (22) ದೊಡ್ಡ ಹೊಡೆತಕ್ಕೆ ಕೈಹಾಕಿದಾಗ ಹರ್ಷಲ್​ ಪಟೇಲ್​ ಎಸೆತದಲ್ಲಿ ಡಗೌಟ್​ ಸೇರಿದರು. ಬಳಿಕ ಶಿಮ್ರೊನ್​ ಹೆಟ್ಮೆಯರ್​ (3), ಸುಯಶ್​ ಪ್ರಭುದೇಸಾಯಿಯ ಮಿಂಚಿನ ಕ್ಷೇತ್ರರಕ್ಷಣೆಯಿಂದ ರನೌಟ್​ ಆದರು. ರಾಜಸ್ಥಾನ ಬ್ಯಾಟರ್​ಗಳು ಸ್ಲಾಗ್​ ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳ ಎದುರು ರನ್​ ಗಳಿಸಲು ತಿಣುಕಾಡಿದರು. ಕೊನೆಯಲ್ಲಿ ಧ್ರುವ ಜುರೆಲ್​ (34*) ಬಿರುಸಿನಾಟ ಆಡಿದರೂ ಆರ್​ಸಿಬಿ ಗೆಲುವು ಕಸಿಯಲು ಸಾಧ್ಯವಾಗಲಿಲ್ಲ. ಹರ್ಷಲ್​ ಪಟೇಲ್​ ಎಸೆದ ಅಂತಿಮ ಓವರ್​ನಲ್ಲಿ 20 ರನ್​ ಅವಶ್ಯವಿದ್ದಾಗ ಮೊದಲ ಎಸೆತವನ್ನು ಬೌಂಡರಿಗಟ್ಟಿದ್ದ ಆರ್​. ಅಶ್ವಿನ್​, ಎರಡನೇ ಎಸೆತದಲ್ಲಿ 2 ರನ್​ ಹಾಗೂ 3ನೇ ಎಸೆತದಲ್ಲಿ ಬೌಂಡರಿ ಸಿಡಿಸಿದರೂ, ಮರು ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ನಂತರ 2 ರನ್​ ಬಿಟ್ಟುಕೊಟ್ಟ ಹರ್ಷಲ್​ ಆರ್​ಸಿಬಿಗೆ ರೋಚಕ ಗೆಲುವು ತಂದರು.

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ಸಿನಿಮಾ ನಿರ್ದೇಶಕ-ನಿರ್ಮಾಪಕರಿಗೆ ಸಿಹಿಸುದ್ದಿ; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts