More

    ಆರ್‌ಸಿಬಿಗೆ ಹ್ಯಾಟ್ರಿಕ್ ಜಯ; ಸತತ 4ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ಮುಂಬೈ ವಿಫಲ

    ಪುಣೆ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸವಾರಿ ನಡೆಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಬೌಲರ್‌ಗಳ ಸಂಘಟಿತ ಪ್ರದರ್ಶನದ ಜತೆಗೆ ಎಡಗೈ ಆರಂಭಿಕ ಅನುಜ್ ರಾವತ್ (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡ 7 ವಿಕೆಟ್‌ಗಳಿಂದ ಜಯ ದಾಖಲಿಸಿತು. ಮತ್ತೊಂದೆಡೆ, ರೋಹಿತ್ ಶರ್ಮ ಬಳಗ ಸತತ 4ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.

    ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, 6 ವಿಕೆಟ್‌ಗೆ 151 ರನ್‌ಗಳಿಸಿತು. ಸ್ಪಿನ್ನರ್ ವನಿಂದು ಹಸರಂಗ (28ಕ್ಕೆ 2) ಹಾಗೂ ವೇಗಿ ಹರ್ಷಲ್ ಪಟೇಲ್ (23ಕ್ಕೆ 2) ಮಾರಕ ದಾಳಿಗೆ ನಲುಗಿದ ಮುಂಬೈ ತಂಡ ಒಂದು ಹಂತದಲ್ಲಿ 62 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಅನುಭವಿ ಸೂರ್ಯಕುಮಾರ್ ಯಾದವ್ (68*ರನ್, 37 ಎಸೆತ, 5 ಬೌಂಡರಿ, 6 ಸಿಕ್ಸರ್) ಏಕಾಂಗಿ ನಿರ್ವಹಣೆ ತೋರಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಆರ್‌ಸಿಬಿ, ಅನುಜ್ ಹಾಗೂ ವಿರಾಟ್ ಕೊಹ್ಲಿ (48 ರನ್, 36 ಎಸೆತ, 5 ಬೌಂಡರಿ) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 152 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಮುಂಬೈ ಇಂಡಿಯನ್ಸ್: 6 ವಿಕೆಟ್‌ಗೆ 151 (ಇಶಾನ್ ಕಿಶನ್ 26, ರೋಹಿತ್ ಶರ್ಮ 26, ಸೂರ್ಯಕುಮಾರ್ ಯಾದವ್ 68*, ವನಿಂದು ಹಸರಂಗ 28ಕ್ಕೆ 2, ಹರ್ಷಲ್ ಪಟೇಲ್ 23ಕ್ಕೆ 2, ಆಕಾಶ್ ದೀಪ್ 20ಕ್ಕೆ 1), ಆರ್‌ಸಿಬಿ: 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 152 (ಅನುಜ್ ರಾವತ್ 66, ವಿರಾಟ್ ಕೊಹ್ಲಿ 48, ಪ್ಲೆಸಿಸ್ 16, ಜೈದೇವ್ ಉನಾದ್ಕತ್ 30ಕ್ಕೆ 1, ಡೆವಾಲ್ಡ್ ಬ್ರೆವಿಸ್ 8ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts