More

    ಲಖನೌ ಸೂಪರ್‌ಜೈಂಟ್ಸ್‌ಗೆ ಗೆಲುವು ತಂದ ಆವೇಶ್ ಖಾನ್, ಸನ್‌ರೈಸರ್ಸ್‌ ತಂಡದ ಎದುರು 12 ರನ್ ಜಯ

    ಮುಂಬೈ: ಕಡೇ ಹಂತದಲ್ಲಿ ಆವೇಶ್ ಖಾನ್ (24ಕ್ಕೆ 4) ಹಾಗೂ ಜೇಸನ್ ಹೋಲ್ಡರ್ (34ಕ್ಕೆ 3) ಜೋಡಿ ಮಾಡಿದ ಕಮಾಲ್‌ನಿಂದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರಲ್ಲಿ ಪಂದ್ಯದಲ್ಲಿ 12 ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ಎದುರು ರೋಚಕ ಜಯ ದಾಖಲಿಸಿತು. ಲಖನೌ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್‌ ಒಂದು ಹಂತದಲ್ಲಿ ಸುಲಭ ಗೆಲುವಿನ ಭರವಸೆ ಮೂಡಿಸಿದರೂ ಕಡೇ 14 ರನ್‌ಗಳ ಅಂತರದಲ್ಲಿ 5 ವಿಕೆಟ್ ಕೈಚೆಲ್ಲಿದ ಪರಿಣಾಮ ನಿರಾಸೆ ಕಂಡಿತು.

    ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಕೆಎಲ್ ರಾಹುಲ್ (68 ರನ್, 50 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ದೀಪಕ್ ಹೂಡಾ (51 ರನ್, 33 ಎಸೆತ, 3 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 169 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಡರ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

    ಲಖನೌ ಸೂಪರ್‌ಜೈಂಟ್ಸ್: 7 ವಿಕೆಟ್‌ಗೆ 169 (ಕೆಎಲ್ ರಾಹುಲ್ 68, ದೀಪಕ್ ಹೂಡಾ 51, ಆಯುಷ್ ಬಡೋನಿ 19, ವಾಷಿಂಗ್ಟನ್ ಸುಂದರ್ 28ಕ್ಕೆ 2, ರೊಮಾರಿಯ ಶೆರ್ಡ್ 42ಕ್ಕೆ 2, ಟಿ.ನಟರಾಜನ್ 26ಕ್ಕೆ 2), ಸನ್‌ರೈಸರ್ಸ್‌ ಹೈದರಾಬಾದ್: 9 ವಿಕೆಟ್‌ಗೆ 157 (ರಾಹುಲ್ ತ್ರಿಪಾಠಿ 44, ನಿಕೋಲಸ್ ಪೂರನ್ 34, ವಾಷಿಂಗ್ಟನ್ ಸುಂದರ್ 18, ವಿಲಿಯಮ್ಸನ್ 16, ಆವೇಶ್ ಖಾನ್ 24ಕ್ಕೆ 4, ಜೇಸನ್ ಹೋಲ್ಡರ್ 34ಕ್ಕೆ 3, ಕೃನಾಲ್ ಪಾಂಡ್ಯ 27ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts