More

    ಇಂದು ಕೆಎಲ್ ರಾಹುಲ್-ಶ್ರೇಯಸ್ ಅಯ್ಯರ್ ಮುಖಾಮುಖಿ

    ಪುಣೆ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ಹಾಗೂ ಪ್ಲೇಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-15ರಲ್ಲಿ ಶನಿವಾರದ ಎರಡನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. 14 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಲಖನೌ ತಂಡ ಪ್ಲೇಆಫ್ ಸನಿಹದಲ್ಲಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಸಾರಥ್ಯದ ಕೆಕೆಆರ್ ತಂಡಕ್ಕೆ ಗೆಲುವೊಂದೇ ಮಂತ್ರವಾಗಿದೆ.

    ಕೆಕೆಆರ್ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಿಂದ ಕೇವಲ 8 ಅಂಕ ಕಲೆಹಾಕಿದೆ. ಇನ್ನೊಂದು ಪಂದ್ಯ ಸೋತರೂ ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ. ಕೆಎಲ್ ರಾಹುಲ್ ಬಳಗ ಇನ್ನು ಒಂದು ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೂ ಪ್ಲೇಆಫ್ ಬಹುತೇಕ ಖಚಿತವೆನಿಸಲಿದೆ. ನಾಯಕ ರಾಹುಲ್ ಅದ್ಭುತ ಫಾರ್ಮ್‌ನಲ್ಲಿರುವುದೇ ಎಲ್‌ಎಸ್‌ಜಿ ತಂಡದ ಪ್ಲಸ್ ಪಾಯಿಂಟ್. ಅವರು 10 ಪಂದ್ಯಗಳಿಂದ ತಲಾ 2 ಶತಕ ಹಾಗೂ ಅರ್ಧಶತಕ ಸೇರಿದಂತೆ 451 ರನ್ ಬಾರಿಸಿದ್ದಾರೆ. ಇದುವರೆಗೂ ಅಸ್ಥಿರ ನಿರ್ವಹಣೆ ತೋರುತ್ತಾ ಬಂದಿರುವ ಕೆಕೆಆರ್ ತಂಡ ಗೆಲುವಿನ ಒತ್ತಡದಲ್ಲಿದೆ.

    * ಆತ್ಮವಿಶ್ವಾಸದಲ್ಲಿ ರಾಹುಲ್ ಪಡೆ
    ನಾಯಕ ರಾಹುಲ್ ಅದ್ಭುತ ಫಾರ್ಮ್‌ನಲ್ಲಿರುವುದೇ ಎಲ್‌ಎಸ್‌ಜಿ ತಂಡದ ಪ್ಲಸ್ ಪಾಯಿಂಟ್. 10 ಪಂದ್ಯಗಳಿಂದ ತಲಾ 2 ಶತಕ ಹಾಗೂ ಅರ್ಧಶತಕ ಸೇರಿದಂತೆ 451 ರನ್ ಬಾರಿಸಿದ್ದಾರೆ. ಕ್ವಿಂಟನ್ ಡಿ ಕಾಕ್ ಅಬ್ಬರಿಸಿದರೂ ದೊಡ್ಡ ಮಟ್ಟದಲ್ಲಿ ಬರುತ್ತಿಲ್ಲ. ಆಲ್ರೌಂಡರ್‌ಗಳಾದ ಮಾರ್ಕಸ್ ಸ್ಟೋಯಿನಿಸ್, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಗಮನಸೆಳೆಯುತ್ತಿದ್ದರೆ, ದೀಪಕ್ ಹೂಡಾ ಹಾಗೂ ಯುವ ಬ್ಯಾಟರ್ ಆಯುಶ್ ಬಡೋನಿ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ವೇಗಿ ಮೊಯ್ಸಿನ್ ಖಾನ್ ಕಳೆದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಮತ್ತೋರ್ವ ವೇಗಿ ದುಶ್ಮಾಂತ ಚಮೀರಾ, ಸ್ಪಿನ್ನರ್ ವಿಭಾಗದಲ್ಲಿ ರವಿ ಬಿಷ್ಣೋಯಿ ಹಾಗೂ ಕನ್ನಡಿಗ ಕೆ.ಗೌತಮ್ ಆಸರೆಯಾಗುತ್ತಿದ್ದಾರೆ.

    * ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್
    ಇದುವರೆಗೂ ಅಸ್ಥಿರ ನಿರ್ವಹಣೆ ತೋರುತ್ತಾ ಬಂದಿರುವ ಕೆಕೆಆರ್ ತಂಡ ಗೆಲುವಿನ ಒತ್ತಡದಲ್ಲಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ಪಡೆಗೆ ಆರಂಭಿಕ ಹಂತದಲ್ಲಿ ರಾಹುಲ್‌ಗೆ ಕಡಿವಾಣ ಹಾಕುವುದೇ ದೊಡ್ಡ ಸವಾಲಾಗಿದೆ. ವೇಗಿಗಳಾದ ಉಮೇಶ್ ಯಾದವ್, ಶಿವಂ ಮಾವಿ, ಟೀಮ್ ಸೌಥಿ ಹಾಗೂ ಸ್ಪಿನ್ನರ್ ಸುನೀಲ್ ನಾರಾಯಣ್ ಒಳಗೊಂಡ ಬೌಲಿಂಗ್ ಪಡೆಗೆ ರಾಹುಲ್ ಬಳಗದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರಷ್ಟೇ ಸಕರಾತ್ಮಕ ಫಲಿತಾಂಶ ಕಾಣಲು ಸಾಧ್ಯ. ಕಳೆದ ರಾಜಸ್ಥಾನ ರಾಯಲ್ಸ್ ಎದುರು ನಿತೀಶ್ ರಾಣಾ, ರಿಂಕು ಸಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಟೀಮ್ ನ್ಯೂಸ್:
    ಎಲ್‌ಎಸ್‌ಜಿ: ಹ್ಯಾಟ್ರಿಕ್ ಗೆಲುವು ಕಂಡಿರುವ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವುದು ಕಷ್ಟಕರ.

    ಕೆಕೆಆರ್: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.
    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts